
ಬೆಂಗಳೂರು (ನ.29): ಮಾಸಿಕ ಗೌರವಧನವನ್ನು ₹2,000 ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ ಹೊರತಾಗಿಯೂ ಆಶಾ ಕಾರ್ಯಕರ್ತೆಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ನಿರಾಕರಿಸಿದ್ದು, ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಆಹೋರಾತ್ರಿ ಧರಣಿ ಇಂದು (ನವೆಂಬರ್ 29) 13ನೇ ದಿನಕ್ಕೆ ಕಾಲಿಟ್ಟಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಯೋಗದೊಂದಿಗೆ ಸಭೆ ನಡೆಸಿ, ಜನವರಿ 1, 2027ರಿಂದ ಅನ್ವಯವಾಗುವಂತೆ ಗೌರವಧನದಲ್ಲಿ ₹2,000 ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಸಭೆಯಲ್ಲಿ ಸಂಘದ ಕೆಲ ಮುಖಂಡರು ಒಪ್ಪಿಗೆ ಸೂಚಿಸಿದಂತೆ ಕಂಡುಬಂದರೂ, ಪ್ರತಿಭಟನಾ ನಿರತ ಕಾರ್ಯಕರ್ತೆಯರು ಮಾತ್ರ ಮೌಖಿಕ ಭರವಸೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಿಖಿತ ಭರವಸೆಗೆ ಒತ್ತಾಯ: ಈ ಹಿಂದೆ ನೀಡಿದ್ದ ಹಲವು ಭರವಸೆಗಳು ಇನ್ನೂ ಈಡೇರಿಲ್ಲದ ಕಾರಣ, ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಧರಣಿ ಸ್ಥಳದಿಂದ ಕದಲುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.
ಬೇಡಿಕೆಯಲ್ಲಿ ಅಂತರ: ಕಾರ್ಯಕರ್ತೆಯರು ಮಾಸಿಕ ₹15,000 ನಿಶ್ಚಿತ ಗೌರವಧನ ಸೇರಿದಂತೆ ಇತರ ಸೌಲಭ್ಯಗಳಿಗೆ ಆಗ್ರಹಿಸುತ್ತಿದ್ದರೆ, ಸರ್ಕಾರ ಸದ್ಯ ₹2,000 ಹೆಚ್ಚಳದ ಘೋಷಣೆ ಮಾಡಿದೆ.
ಮುಂದುವರಿದ ಆಹೋರಾತ್ರಿ ಹೋರಾಟ: ಸಭೆಯ ನಿರ್ಣಯಕ್ಕೆ ತೃಪ್ತರಾಗದ ಕಾರ್ಯಕರ್ತೆಯರು, ಚಳಿ, ಮಳೆ ಮತ್ತು ಆರೋಗ್ಯ ಸಮಸ್ಯೆಗಳ ನಡುವೆಯೂ ಹಗಲು-ರಾತ್ರಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದರೂ ಲಿಖಿತ ಆದೇಶದ ವಿಚಾರದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಇಂದು 13ನೇ ದಿನಕ್ಕೆ ಕಾಲಿಟ್ಟಿರುವ ಹೋರಾಟ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಈ ಮ