
ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸುವವರ ಫೇವರೇಟ್ ಸಂಚಾರ ಸಾಧನ ನಮ್ಮ ಮೆಟ್ರೋ ಪ್ರತಿದಿನ ಲಕ್ಷಾಂತರ ನಾಗರಿಕರಿಗೆ ವೇಗದ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಿದೆ. ಆದರೆ ಈ ಭಾನುವಾರ ಅಂದರೆ ಜೂನ್ 22ರಂದು, ನಿರ್ದಿಷ್ಟ ನಿರ್ವಹಣಾ ಕಾರ್ಯಗಳ ನಿಮಿತ್ತ ನೇರಳೆ ಮಾರ್ಗದಲ್ಲಿ ಕೆಲಕಾಲದ ಸೇವಾ ವ್ಯತ್ಯಯ ಆಗಲಿದೆ.
BMRCL (ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್) ನೀಡಿರುವ ಮಾಹಿತಿ ಪ್ರಕಾರ, ಟ್ರಿನಿಟಿ ಸರ್ಕಲ್ ಮತ್ತು ಹಲಸೂರು ನಿಲ್ದಾಣಗಳ ನಡುವೆ ನಿರ್ವಹಣಾ ಕಾರ್ಯ ನಡೆಯಲಿದೆ. ಇದರ ಫಲಿತಾಂಶವಾಗಿ, ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವಿನ ಮೆಟ್ರೋ ಸೇವೆಗಳು ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಸ್ಥಗಿತಗೊಳ್ಳಲಿವೆ.
ಇತ್ತೀಚೆಗೆ, BMRCL ಅನ್ನು ETI ಇನ್ಫ್ರಾ ರೈಲು ಪ್ರದರ್ಶನ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲಾಗಿದೆ. MRTS/RRTS ಯೋಜನೆಗಳಿಗೆ ಅತ್ಯಾಧುನಿಕ ಹಣಕಾಸು ಮಾದರಿ ಬಳಸಿದ ತಂತ್ರಜ್ಞಾನದ ಹಿನ್ನೆಲೆ ಈ ಗೌರವ ಲಭಿಸಿದೆ.
ಇವುಗಳ ಮೂಲಕ ಹೆಚ್ಚುವರಿ ಆರ್ಥಿಕ ಸಂಪನ್ಮೂಲಗಳನ್ನು ಹಂಬಲಿಸಿ, ಬೃಹತ್ ವಿಸ್ತರಣಾ ಯೋಜನೆಗಳಿಗೆ ನೆರವಾಗುತ್ತಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ
ಜೂನ್ ತಿಂಗಳಲ್ಲಿ, BMRCL ನ ಪ್ರಯಾಣಿಕರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ವಿಶೇಷವಾಗಿ ಜೂನ್ 4ರಂದು, 9.66 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಸೇವೆಗಳನ್ನು ಬಳಸಿದ್ದಾರೆ. ಇದರಲ್ಲಿ ನೇರಳೆ ಮಾರ್ಗದಲ್ಲಿ 4,78,334 ಪ್ರಯಾಣಿಕರು ಮತ್ತು ಹಸಿರು ಮಾರ್ಗದಲ್ಲಿ 2,84,674 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮಜೆಸ್ಟಿಕ್ ನಿಲ್ದಾಣದಿಂದ ಒಟ್ಟು 2,03,724 ಜನ ಹತ್ತಿದ್ದಾರೆ.
ಬೆಂಗಳೂರು ಮೆಟ್ರೋ, ಈಗ ಕೇವಲ ಸಾರಿಗೆ ವ್ಯವಸ್ಥೆಯಲ್ಲದೇ, ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಗಳ ಮಾದರಿಯಾಗಿದೆ. ನಿರ್ವಹಣಾ ಕೆಲಸದಿಂದಾಗಿ ಜೂನ್ 22 ರಂದು ಕೆಲ ಸಮಯದ ಅಡಚಣೆ ಸಂಭವಿಸುತ್ತಿದ್ದರೂ, ಸಾಮಾನ್ಯ ಸೇವೆಗಳು ನಿರಂತರವಾಗಿ ಲಭ್ಯವಿರುವುದರಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಆರಿಸಿಕೊಂಡು ನಿರಾಳವಾಗಿ ಪ್ರಯಾಣಿಸಬಹುದು.