Bengaluru Metro: ಜಸ್ಟ್ ಒಂದು ವರ್ಷ, 3.8 ಕೋಟಿಗೂ ಅಧಿಕ ಪ್ರಯಾಣಿಕರು; ನಮ್ಮ ಮೆಟ್ರೋ ಮತ್ತೊಂದು ದಾಖಲೆ!

Published : Aug 15, 2026, 04:12 PM IST
Namma Metro

ಸಾರಾಂಶ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ 19 ಕಿ.ಮೀ. ಉದ್ದದ ಹಳದಿ ಮಾರ್ಗವು ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೆಟ್ರೋ ನಿಲ್ದಾಣದಿಂದಲೇ ನೇರ ಆಫೀಸ್‌ಗೆ ತಲುಪಲು ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿಯೊಂದಿಗೆ ಸೇರಿ 28 ಫೀಡರ್ ಬಸ್‌ಗಳನ್ನು ಕೂಡ ರಸ್ತೆಗೆ ಇಳಿಸಿದೆ.

ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಳಿಗೆ, ವ್ಯಾಪಾರಿಗಳಿಗೆ ಅತ್ಯಂತ ಪ್ರಮುಖ ಸಾರ್ವಜನಿಕ ಸಾರಿಗೆಯಾಗಿರುವ ನಮ್ಮ ಮೆಟ್ರೋದ ಯೆಲ್ಲೋ ಲೈನ್ ತನ್ನ ಮೊದಲ ವರ್ಷದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಗರ ಪ್ರಮುಖ ಭಾಗವಾಗಿರುವ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್ ಹೊಂದಿರುವ 19 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಪ್ರಾರಂಭವಾದ ಮೊದಲ ವರ್ಷದಲ್ಲಿಯೇ ಬರೋಬ್ಬರಿ 3.8 ಕೋಟಿಗೂ ಅಧಿಕ ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನಕ್ಕೆ ತಲುಪಿಸಿ ದಾಖಲೆ ನಿರ್ಮಿಸಿದೆ. ದಿನಕ್ಕೆ ಸರಾಸರಿ ಒಂದು ಲಕ್ಷಕ್ಕೂ ಪ್ರಯಾಣಿಕರು ಈ ಸೇವೆಯನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ನಗರ ಪ್ರಮುಖ ಭಾಗದಲ್ಲಿ ತೀವ್ರವಾಗಿರುವ ಟ್ರಾಫಿಕ್‌ಅನ್ನು ಕಡಿಮೆ ಮಾಡಿದೆ.

ಆರಂಭದಲ್ಲಿ 35 ನಿಮಿಷಕ್ಕೆ ಒಂದು ರೈಲು ಸಂಚಾರ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) 2025ರ ಆಗಸ್ಟ್ ನಲ್ಲಿ ಈ ಲೈನ್‌ ವಾಣಿಜ್ಯ ಸಂಚಾರವನ್ನು ಅಧಿಕೃತವಾಗಿ ಆರಂಭಿಸಿತ್ತು. ಆದರೆ ಆರಂಭದಲ್ಲಿ ಕೋಚ್‌ಗಳ ಪೂರೈಕೆಯಲ್ಲಿ ತಡವಾದ ಕಾರಣ ಆಪರೇಷನ್ ವಿಭಾಗದಲ್ಲಿ ಸಮಸ್ಯೆಗಳು ಎದುರಾಗಿತ್ತು. ಆರಂಭದ ದಿನಗಳಲ್ಲಿ ಕೇವಲ ಮೂರು ರೈಲುಗಳೊಂದಿಗೆ ಆರಂಭವಾದ ಈ ಮಾರ್ಗದಲ್ಲಿ 35 ನಿಮಿಷಕ್ಕೆ ಒಂದು ರೈಲು ಮಾತ್ರ ಆಗಮಿಸುತ್ತಿತ್ತು. ಇಷ್ಟಾದರೂ ಮೆಟ್ರೋ ಬೇಡಿಕೆ ಮಾತ್ರ ಕಡಿಮೆ ಆಗಿರಲಿಲ್ಲ.

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಳ

ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಾ ಸಾಗಿತ್ತು. 2025ರ ಆಗಸ್ಟ್ ಮೊದಲ ತಿಂಗಲಿನಲ್ಲಿ ಪ್ರತಿದಿನ ಸರಾಸರಿ 81,365 ಮಂದಿ ಪ್ರಯಾಣ ಮಾಡಿದ್ದರು. 2026ರ ಜುಲೈ ವೇಳೆಗೆ ಈ ಸಂಖ್ಯೆ ಊಹೆಗೂ ಮೀರಿದ ರೀತಿಯಲ್ಲಿ ಹೆಚ್ಚಾಗಿ, ದಿನಕ್ಕೆ 1.5 ಲಕ್ಷ ಮಂದಿ ಪ್ರಯಾಣಿಕರು ಬಳಸುತ್ತಿದ್ದರು. ಇದರೊಂದಿಗೆ ನಮ್ಮ ಮೆಟ್ರೋದಲ್ಲಿ ಇತ್ಯ ಪ್ರಯಾಣಿಸುವವರ ಸಂಖ್ಯೆ 10 ಲಕ್ಷ ಮಂದಿಗೆ ಸೇರಿತ್ತು.

ಈ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆ ನೀಡಲು 15 ರೈಲುಗಳ ಅಗತ್ಯವಿತ್ತು. ಇದರಂತೆ ಈ ವರ್ಷ ಜುಲೈ ವೇಳೆಗೆ ಬಿಎಂಆರ್ಸಿಎಲ್ ಅಗತ್ಯ ರೈಲುಗಳನ್ನು ನೀಡಿತ್ತು, ನಿತ್ಯ 10 ರೈಲುಗಳು ಈ ಮಾರ್ಗದಲ್ಲಿ ಸಂಚಾರ ಮಾಡಲು ಆರಂಭಿಸಿತ್ತು. ಇದರಿಂದ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಎಷ್ಟಾಗಿ, ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಸಂದರ್ಭದಲ್ಲಿ ಪ್ರತಿ 7 ನಿಮಿಷಕ್ಕೆ ಒಂದು ರೈಲು ಸಂಚಾರ ಮಾಡುತ್ತಿತ್ತು. ಸಾಮಾನ್ಯ ಸಮಯದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಆಗಮಿಸುತ್ತಿತ್ತು. ಶೀಘ್ರವೇ ಪೀಕ್ ಅವರ್ ಗಳಲ್ಲಿ ಈ ಸಂಚಾರ ಸಮಯವನ್ನು 6 ನಿಮಿಷಕ್ಕೆ ಒಂದು ರೈಲು ಓಡಿಸಲು ಅಧಿಕಾರಿಗಳು ಸಿದ್ಧತೆ ಮಾಡಿದ್ದಾರೆ. ತಾಂತ್ರಿಕ ಸಮಸ್ಯೆ ಹಾಗೂ ಬ್ಯಾಕ್ ಅಪ್‌ಗಾಗಿ ಕೆಲವು ರೈಲುಗಳನ್ನು ರಿಸರ್ವ್ ಮಾಡಲು ಮುಂದಾಗಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಫೀಡರ್ ಬಸ್ ಸೇವೆ

ಆರ್‌ವಿ ರೋಡ್ ಇಂಟರ್‌ಚೇಂಜ್ ಸ್ಟೇಷನ್ ನಿಂದ ಪ್ರಾರಂಭವಾಗಿ ಈ ಮಾರ್ಗದಲ್ಲಿ, ಹೊಸೂರು ರಸ್ತೆ ಮಾರ್ಗವಾಗಿ ಬರುವ ನಿಲ್ದಾಣಗಳೊಂದಿಗೆ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಗಳಲ್ಲಿ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಈ ಮಾರ್ಗದ ಆರಂಭವಾದ ಬಳಿಕ ಐಟಿ ಸೇರಿದಂತೆ ಹಲವು ಕೆಲಸಗಳಿಗೆ ನಿತ್ಯ ತೆರಳುವ ಉದ್ಯೋಗಿಗಳು ತಮ್ಮ ಸ್ವತಃ ವಾಹನಗಳನ್ನು ಬಿಟ್ಟು ಮೆಟ್ರೋ ಮೂಲಕ ಪ್ರಯಾಣ ಮಾಡಲು ಆರಂಭಿಸಿದ್ದಾರೆ.

ಉದಾಹರಣೆಗೆ, ಬಯೋಕಾನ್ ಸಂಸ್ಥೆ ನಿರ್ವಹಿಸಿದ ವಿಶೇಷ ಕಾರ್ಯಕ್ರಮದಲ್ಲಿ 1300ಕ್ಕೂ ಹೆಚ್ಚು ಉದ್ಯೋಗಿಗಳು ಮೆಟ್ರೋದಲ್ಲಿ 77,000ಕ್ಕೂ ಹೆಚ್ಚು ಬಾರಿ ಪ್ರಯಾಣ ಮಾಡಿ, ಬರೋಬ್ಬರಿ 99 ಟನ್ ಕಾರ್ಬನ್ ವ್ಯರ್ಥಗಳನ್ನ ಪರಿಸರಕ್ಕೆ ಬಿಡುಗಡೆ ಆಗೋದನ್ನು ತಪ್ಪಿಸಿದ್ದರು. ಹಿಕಲ್ ಟೆಕ್ನಾಲಜೀಸ್ ಕೂಡ ತಮ್ಮ ಉದ್ಯೋಗಿಗಳಿಗೆ ಮೆಟ್ರೋದಲ್ಲಿ ಆಗಮಿಸಲು ಪ್ರೋತ್ಸಾಹ ನೀಡುತ್ತಿದೆ. ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲು ಬಲ್ಕ್ ನಲ್ಲಿ ಸ್ಮಾರ್ಟ್ ಕಾರ್ಡ್, ಕೋ-ಬ್ರಾಂಡೆಡ್ ಕಾರ್ಡ್‌ಗಳನ್ನು ಖರೀದಿ ಮಾಡಲು ಬಿಎಂಆರ್‌ಸಿಎಲ್ ಕಂಪನಿಗಳನ್ನು ಸಂಪರ್ಕ ಮಾಡುತ್ತಿದೆ.

ಮೆಟ್ರೋ ನಿಲ್ದಾಣದಿಂದಲೇ ನೇರ ಆಫೀಸ್‌ಗೆ ತಲುಪಲು ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿಯೊಂದಿಗೆ ಸೇರಿ 28 ಫೀಡರ್ ಬಸ್‌ಗಳನ್ನು ಕೂಡ ರಸ್ತೆಗೆ ಇಳಿಸಿದೆ. ಪ್ರತಿದಿನ 300 ಟ್ರಿಪ್ ಸಂಚಾರ ಮಾಡುವ ಈ ಬಸ್‌ಗಳನ್ನು ನಿತ್ಯ 15 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಎಲೆಕ್ಟ್ರಾನಿಕ್ ಸಿಟಿ, ಟಿನ್ ಫ್ಯಾಕ್ಟರಿ ರೂಟ್‌ನಲ್ಲಿ ನಿತ್ಯ 3,400ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿರೋದು ಗಮನಾರ್ಹವಾಗಿದೆ. ಮುಂಬರುವ ದಿನಗಳಲ್ಲಿ ನಿರ್ಮಾಣ ಹಂತದಲ್ಲಿರುವ ಬ್ಲ್ಯೂ ಮತ್ತು ಪಿಂಕ್ ಮೆಟ್ರೋ ಲೈನ್ ಮಾರ್ಗಗಳು ಸಂಚಾರ ಶುರು ಮಾಡಿದರೆ, ಬೆಂಗಳೂರಿನಲ್ಲಿ ಪ್ರಮುಖ ಐಟಿ ಕಾರಿಡಾರ್‌ಗಳ ನಡುವೆ ಮೆಟ್ರೋ ನೇರ ಸಂಪರ್ಕ ಲಭ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಸೋಮಾವತಿ ನದಿಗೆ ಉರುಳಿದ ಕಾರು; ಬೆಂಗಳೂರಿನ ಪ್ರವಾಸಿ ದಂಪತಿ ಬದುಕಿದ್ದೇ ದೊಡ್ಡದು..
Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!