ಮಾರತಹಳ್ಳಿ ಹೊಟೇಲ್ ಕಟ್ಟಡದಿಂದ ಯುವತಿ ಜಿಗಿತ ಪ್ರಕರಣ, ಪೊಲೀಸರ ಮೇಲೆ ಕಮಿಷನರ್‌ಗೆ ಮೂಡಿದ ಅನುಮಾನ?

Published : Dec 16, 2025, 01:02 PM IST
Marathahalli

ಸಾರಾಂಶ

ಬೆಂಗಳೂರಿನ ಮಾರತ್ ಹಳ್ಳಿ ಹೋಟೆಲ್‌ನಿಂದ ಯುವತಿ ಜಿಗಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರ ಆಗಮನದ ನಂತರ ಈ ಘಟನೆ ನಡೆದಿದ್ದು, ಅವರ ಪಾತ್ರದ ಬಗ್ಗೆಯೇ ಗಂಭೀರ ಅನುಮಾನಗಳು ಮೂಡಿವೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಕಮಿಷನರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಬೆಂಗಳೂರು: ಮಾರತಹಳ್ಳಿ ಹೊಟೇಲ್ ಕಟ್ಟಡದಿಂದ ಯುವತಿ ಜಿಗಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಪೊಲೀಸರ ಮೇಲೆಯೇ ನೂರೆಂಟು ಅನುಮಾನ ಮೂಡಿದೆ. ನಿಜಕ್ಕು ಅಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ಹೋಟೆಲ್ ರೂಮ್ ಒಳಗೆ ಯುವಕ, ಯುವತಿಯರು ದಾಖಲಾತಿ ಕೊಟ್ಟು ಹೋಗಿದ್ದಾರೆ. ಅಷ್ಟಕ್ಕೂ ಭಾನುವಾರ ಮುಂಜಾನೆ ಐದು ಗಂಟೆ ಸಮಯದಲ್ಲಿ ಪೊಲೀಸ್ರು ಹೋಗಿದ್ಯಾಕೆ? ಪೊಲೀಸರು ಹೋಗಲು ನಿಜವಾಗಿಯೂ ದೂರು ಕೊಟ್ಟಿದ್ಯಾರು?

ಕಮಿಷನರ್ ಗೆ ಹೆಚ್ಚಿದ ಅನುಮಾನ

ಪೊಲೀಸರು ಎಂಟ್ರಿ ಕೊಟ್ಟ ವೇಳೆ ಬಂಧನದ ಭೀತಿಯಿಂದ ಬಿದ್ದಿದ್ದಾಳೆ ಅನ್ನೋದು ಪೊಲೀಸರ ವಾದ. ರೂಂ ಗೆ ಎಂಟ್ರಿ ಕೊಟ್ಟ ಪೊಲೀಸರು ವಿಡಿಯೋ ಮಾಡಿದ್ರು, ಹಣ ಕೇಳಿದ್ರು ಅಂತಾನೆ ಐ ವಿಟ್ನೆಸ್! ಹಾಗಾದ್ರೆ ಮುಂಜಾನೆ ಆ ಹೊಟೇಲ್ ನಲ್ಲಿ ನಡೆದಿದ್ದಾದ್ರೂ ಏನು ಅನ್ನೋ ಅನುಮಾನ ಬಲವಾಗಿದೆ. ಹೋಟೆಲ್ ಗೆ ಹೋದವರು ರಿಸೆಪ್ಷನ್ ಬಳಿ ಮಾಹಿತಿ ಪಡೆಬೇಕಿತ್ತು. ಸೀದಾ ರೂಮ್ ಗಳ ಬಳಿ ಹೋಗಿ ವಿಡಿಯೋ ಮಾಡಿ ಪ್ರಶ್ನಿಸಲು ಅನುಮತಿ ಕೊಟ್ಟವರ್ಯಾರು? ಯುವಕ ಯುವತಿಯರು ಖಾಸಗಿಯಾಗಿರೋವಾಗ ಸೀದಾ ರೂಮ್ ಒಳಗೆ ಹೋದ್ರಾ ಪೊಲೀಸ್ರು? ಪೊಲೀಸರ ತಪ್ಪು ಮುಚ್ಚಿಟ್ಟುಕೊಳ್ಳಲು ಹೋಟೆಲ್ ಮಾಲೀಕನ ಮೇಲೆ ಎಫ್ಐ ಆರ್ ಹಾಕಲಾಗಿದೆ. ಹೀಗಾಗಿ ಅನುಮಾನ ಬೆನ್ನಲ್ಲೆ ಪ್ರಕರಣವನ್ನ ಪೊಲೀಸ್ ಕಮಿಷನರ್ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ.

ಪೊಲೀಸರು ಶಾಮೀಲಾಗಿದ್ದಾರ ಎಂಬ ಅನುಮಾನ

ಹೊಟೇಲ್ ರೂಂ ನಲ್ಲಿದ್ದ ಯುವಕ, ಯುವತಿಯರು ಪಾರ್ಟಿ ಮಾಡುತ್ತಿದ್ದದ್ದು ನಿಜ. ಆದ್ರೆ, ಅಲ್ಲಿ ಹಾಕಿದ್ದ ಮ್ಯೂಸಿಕ್ ಅಷ್ಟೊಂದು ಜೋರಾಗಿತ್ತಾ? ಹೊಟೇಲ್ ನವ್ರು ಯಾಕೆ ಸೌಂಡ್ ತಗ್ಗಿಸೋ ಬಗ್ಗೆ ವಾರ್ನಿಂಗ್ ಮಾಡಿಲ್ಲ. ಬಾಲ್ಕನಿಯಿಂದ ಟಾರ್ಚ್ ಲೈಟ್ ಹಾಕಿದವ್ರು ಯಾರು? ಅವ್ರು ಟಾರ್ಚ್ ಲೈಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ಪೊಲೀಸ್ರು ರೂಂ ಗೆ ಎಂಟ್ರಿ ಕೊಟ್ಟಿದ್ದರು. ಪೊಲೀಸ್ರಿಗೆ ಕಾಲ್ ಮಾಡಿದವರು ನೆರೆಹೊರೆಯವರಾ?

ಅಥವಾ ಹೊಟೇಲ್ ಸಿಬ್ಬಂದಿಯೇನಾ!? ಹೊಟೇಲ್ ಗೆ ಬರೋ ಕಪಲ್ಸ್ ಗಳನ್ನ ಸುಲಿಗೆ ಮಾಡೋ ದೃಷ್ಚಿಯಿಂದ ಹೊಟೇಲ್ ಸಿಬ್ಬಂದಿ ಪ್ಲಾನ್ ಮಾಡಿದ್ರಾ? ಹೊಟೇಲ್ ಸಿಬ್ಬಂದಿಯೊಂದಿಗೆ ಯಾರಾದ್ರೂ ಪೊಲೀಸರು ಶಾಮೀಲಾಗಿದ್ದಾರ ಅನ್ನೋ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಪ್ರಕರಣ ಭೇದಿಸಲು ವಿಶೇಷ ತಂಡ ರಚನೆ

ಪ್ರಕರಣವನ್ನು ಭೇದಿಸಲು ವಿಶೇಷ ತಂಡ ರಚನೆ ಮಾಡಿ ಮಾಹಿತಿ ಕಲೆ ಹಾಕಲು ಡಿಸಿಪಿ ಪರಶುರಾಮ್ ಸೂಚಿಸಿದ್ದಾರೆ. ಜಸ್ಟ್ ಬಾಡಿ ವೋರ್ನ್ ಕ್ಯಾಮೆರಾ ಪರಿಶೀಲಿಸಿರೋ ಡಿಸಿಪಿ. ಬಾಡಿ ವೋರ್ನ್ ಕ್ಯಾಮೆರಾದಲ್ಲಿ ಯಾರು ನೀವು? ಕಾಮನ್ಸ್ ಸೆನ್ಸ್ ಇಲ್ವಾ ಎಂದು ಪ್ರಶ್ನಿಸಿರೋದು ರೆಕಾರ್ಡ್ ಇದೆ. ಆದ್ರೆ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ. 112 ಗೆ ಕರೆ ಮಾಡಿದವರ್ಯಾರು, ಅವ್ರಿಂದ ಹೇಳಿಕೆ ಪಡೆಯುವಂತೆ ಸೂಚನೆ ನೀಡಿದ್ದಾರೆ. 112 ಗೆ ಕಾಲ್ ಬಂದ ಕೂಡ್ಲೇ ಎಷ್ಟು ಜನ ಪೊಲೀಸ್ರು ಹೊಟೆಲ್ ರೋಂ ಗೆ ಹೋಗಿದ್ದರು. ಅವರಲ್ಲಿ ಹೊಟೇಲ್ ನವರೊಂದಿಗೆ ಸಂಪರ್ಕದಲ್ಲಿ ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚನೆ ನೀಡಲಾಗಿದೆ. ಇನ್ನು ಯುವಕ ಆರೋಪಿಸಿರುವಂತೆ ಹಣ ಕೇಳಿದವರು ಯಾರು? ಎಟಿಎಂಗೆ ಹಣ ತೆಗೆದುಕೊಂಡು ಬರಲು ಹೋಗಿದ್ದ ಯುವಕನ ಹೇಳಿಕೆಗೆ ಸೂಚನೆ. ತನಿಖೆ ನಡೆಸಿ ಕೂಡಲೇ ವರದಿ ನೀಡುವಂತೆ ಡಿಸಿಪಿ ಪರಶುರಾಮ್ ಸೂಚಿಸಿದ್ದಾರೆ

ಡಿಸಿಪಿ ಹೇಳೋದೇನು?

ಪ್ರಕರಣ ಸಂಬಂಧ ವೈಟ್ ಫೀಲ್ಡ್ ವಿಭಾಗ ಡಿಸಿಪಿ ಪರಶುರಾಮ್ ಹೇಳಿಕೆ ನೀಡಿ, ಸಿ ಎಸ್ಟಾ ಹೋಟೆಲ್ ನಲ್ಲಿ ಸೌಂಡ್ ಆಗ್ತಿದೆ ಎಂದು 112 ಗೆ ಕರೆ ಬಂದಿತ್ತು. ಕರೆ ಆಧಾರದ ಮೇಲೆ ಹೋಗಿ ಹೊಯ್ಸಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಲ್ಕನೇ ಫ್ಲೋರ್ ಒಂದೇ ರೂಂ ನಲ್ಲಿ 8 ಜನ ಇದ್ರು. ನಮ್ಮ ಪೊಲೀಸರು ರೂಂ ಗೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ ನಾಲ್ಕನೇ ಫ್ಲೋರ್ ನಿಂದ ಇಬ್ಬರು ಯುವಕರನ್ನು ರಿಸೆಪ್ಷನ್ ಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ನಾಲ್ಕನೇ ಫ್ಲೋರ್ ನಿಂದ ಯುವತಿ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ಯುವತಿಗೆ ಗಂಭೀರ ಗಾಯವಾಗಿದೆ. ಹೆಚ್ಎಎಲ್ ಠಾಣೆಗೆ ಯುವತಿಯ ತಂದೆ ದೂರು ನೀಡಿದ್ರು. ಖಾಸಗಿ ಹೋಟೆಲ್ ವಿರುದ್ಧ ದೂರು ದಾಖಲಾಗಿದೆ. ಆಕೆಯ ಸ್ನೇಹಿತರು, ಹೋಟೆಲ್ ಸಿಬ್ಬಂದಿ, ಪೊಲೀಸರ ವಿಚಾರಣೆ ನಡೆಸಲಾಗಿದೆ. ಪೊಲೀಸರ ಬಾಡಿ ವೋರ್ನ್ ಕ್ಯಾಮರಾ ಪರಿಶೀಲಿಸಲಾಗಿದೆ. ಪೊಲೀಸರು ಹಣ ಕೇಳಿದ್ದಕ್ಕೆ ಸೂಕ್ತ ದಾಖಲೆ ನೀಡಿದ್ರೆ ಪರಿಶೀಲಿಸಲಾಗುತ್ತೆ. ಹೋಟೆಲ್ ಗೆ ಜಿಬಿಎ ಯಿಂದ ಅನುಮತಿ ಪಡೆಯಲಾಗಿಲ್ಲ. ಹಾಗಾಗಿ ಕ್ರಮ ಕೈಗೊಳ್ಳಲು ಜಿಬಿಎ ಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಜನ್ಮದಿನದಂದೇ ಹೆಚ್‌ಡಿಕೆ ತೋಳಿಗೆ ಬಂತು ದೈವಿ ಶಕ್ತಿ! 'ಶಿವ ತಾಯತ' ಕಟ್ಟಿದ ಬಿಜೆಪಿ ಕಾರ್ಯಕರ್ತರು!
ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ