8 ಕೋಟಿ ರು. ನಾಯಿ ಕಳವು : ಹುಡುಕಿಕೊಟ್ಟರೆ 1 ಲಕ್ಷ ರು. ಬಹುಮಾನ!

By Suvarna News  |  First Published Dec 22, 2019, 1:57 PM IST

ಬೆಂಗಳೂರಿನ ವ್ಯಕ್ತಿಯೋರ್ವರು ಸಾಕಿದ್ದ ವಿದೇಶಿ ತಳಿಯ ನಾಯಿಯೊಂದು ಕಳುವಾಗಿದ್ದು, ಹುಡುಕಿಕೊಟ್ಟವರಿಗೆ ಬಂಪರ್ ಬಹುಮಾನ ಘೋಷಿಸಲಾಗಿದೆ. 


ಬೆಂಗಳೂರು [ಡಿ.22]: ಸಿಲಿಕಾನ್ ಸಿಟಿಯಲ್ಲಿ 8 ಕೋಟಿ ಮೌಲ್ಯದ ನಾಯಿಯೊಂದು ಕಳುವಾಗಿದ್ದು, ನಾಯಿ ಹುಡುಕಿಕೊಟ್ಟವರಿಗೆ ಮಾಲೀಕರು ಬಹುಮಾನ ಘೋಷಿಸಿದ್ದಾರೆ. 

ಬೆಂಗಳೂರಿನ ಸೆಲೆಬ್ರಿಟಿ ಡಾಗ್ ಬ್ರೀಡರ್ ಸತೀಶ್ ಎಂಬುವವರಿಗೆ ಸೇರಿದ ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿಯು ಶ್ರೀನಗರದಿಂದ ಕಳುವಾಗಿದೆ.  

Tap to resize

Latest Videos

ಕಳೆದ ಎರಡು ವರ್ಷಗಳ ಹಿಂದೆ ಚೀನಾದಿಂದ 8 ಕೋಟಿ ರು. ಪಾವತಿಸಿ ತರಲಾಗಿದ್ದ ಮೂರು ವರ್ಷ ವಯಸ್ಸಿನ ನಾಯಿಯು ಡಿಸೆಂಬರ್ 5 ರಂದು ಕಳುವಾಗಿದೆ. 

ಸಾವಿರ ಕತೆ ಹೇಳುತ್ತೆ ಈ ಚಿತ್ರ: ನಂಬಿಕಸ್ಥ, ನಿಸ್ವಾರ್ಥ ಶ್ವಾನಕ್ಕೆ ಸೇನಾಧಿಕಾರಿಯ ಸೆಲ್ಯೂಟ್..

ಕೆಂಬಣ್ಣ ಹಾಗೂ ಬಿಳಿ ಮಿಶ್ರಿತವಾದ ಬಣ್ಣ ಹೊಂದಿರುವ ನಾಯಿಯನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ಮಾಲೀಕ ಸತೀಶ್ ಅವರು ಘೋಷಿಸಿದ್ದಾರೆ. 
  
ಸದ್ಯ ನಾಯಿ ಕಳುವಾಗಿರುವ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!