ರೈಲ್ವೆ ಹತ್ತುವ ವೇಳೆ ಇರಲಿ ಎಚ್ಚರ: ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!

Suvarna News   | Asianet News
Published : Dec 22, 2019, 01:54 PM IST
ರೈಲ್ವೆ ಹತ್ತುವ ವೇಳೆ ಇರಲಿ ಎಚ್ಚರ: ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!

ಸಾರಾಂಶ

ಚಲಿಸುತ್ತಿರುವ ರೈಲಿನಲ್ಲಿ ಹತ್ತುವ ಪ್ರಯತ್ನ ಮಾಡಿದ ಯುವತಿ| ಸಾವಿನ ದವಡೆಯಿಂದ ಪಾರಾದ ಯವತಿ| ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ| ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆ| ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕುಳಿದ ಯುವತಿ|  

ಬಳ್ಳಾರಿ(ಡಿ.22): ಯುವತಿಯೊಬ್ಬಳು ಚಲಿಸುತ್ತಿರುವ ರೈಲಿನಲ್ಲಿ ಹತ್ತುವ ಪ್ರಯತ್ನ ಮಾಡಿ ಸಾವಿನ ದವಡೆಯಿಂದ ಪಾರಾದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರಶ್ಮಿ ಎಂಬ ಯುವತಿಯೇ ಸಾವಿನ ಕದ ತಟ್ಟಿ ಬಂದಿರು ಮಹಿಳೆಯಾಗಿದ್ದಾಳೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

"

ಏನಿದು ಘಟನೆ: 

ರಶ್ಮಿ ಎಂಬ ಯುವತಿ ರೈಲ್ವೆ ನಿಲ್ದಾಣಕ್ಕೆ ಬರುವಷ್ಟರಲ್ಲಿ ರೈಲು ಹೋಗುತ್ತಿತ್ತು, ಇದನ್ನು ಗಮನಿಸಿದ ರಶ್ಮಿ ಅವರು ಹೇಗಾದರು ಮಾಡಿ ರೈಲು ಹತ್ತಿ ಬಿಡೋಣ ಅಂತ ತೀರ್ಮಾನಿಸಿ ರೈಲು ಹತ್ತುವ ಪ್ರಯತ್ನ ಮಾಡಿದ್ದಾರೆ. ರೈಲು ಚಲಿಸುತ್ತಿದ್ದರಿಂದ ರಶ್ಮಿ ಅವರಿಗೆ ಹತ್ತಲು ಸಾಧ್ಯವಾಗದೆ ಕಾಲು ಜಾರಿ ರೈಲ್ವೆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಿದ್ದಿದ್ದಾರೆ. 

ಇನ್ನೇನು ರೈಲ್ವೆ ಹಳಿಗೆ ಜಾರಿದರೂ ಅನ್ನೋವಷ್ಟರಲ್ಲಿ ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ರಶ್ಮಿ ಅವರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ರೈಲಿನಿಂದ ಕೆಳಗೆ ಬಿದ್ದ ಕೂಡಲೇ ಅಲ್ಲಿಯೇ ಇದ್ದ ರಫಿ ಎಂಬ ರೈಲ್ವೆ ಪೊಲೀಸ್ ಪೇದೆ ಜೊತೆ ಸಹ ಪ್ರಯಾಣಿಕರು ಸೇರಿ ರಶ್ಮಿ ಅವರನ್ನು ರಕ್ಷಿಸಿದ್ದಾರೆ. 

ಯುವತಿಯನ್ನ ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ರೈಲು ಹತ್ತುವ ವೇಳೆ  ಎಚ್ಚರಿಕೆ ಇರಲಿ. 
 

PREV
click me!

Recommended Stories

ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌
ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!