Bengaluru: ಹೆಂಡ್ತಿ ಮಸಾಜ್ ಕೆಲಸಕ್ಕೆ ಮಸಣ ಸೇರಿಸಿದ ಮೂರನೇ ಗಂಡ! ಡೆಡ್ಲಿ ಮರ್ಡರ್ ಗೆ ಬೆಚ್ಚಿಬಿದ್ದ ರಾಜಧಾನಿ

Published : Dec 27, 2025, 12:19 PM IST
Bengaluru crime news

ಸಾರಾಂಶ

ಬೆಂಗಳೂರಿನಲ್ಲಿ, ಪತ್ನಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಪತಿ ಅನುಮಾನಗೊಂಡು ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೇವಲ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಯ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ಕೆಲಸದ ವಿಚಾರವಾಗಿ ಉಂಟಾದ ಅನುಮಾನ ಮತ್ತು ನಿರಂತರ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, 39 ವರ್ಷದ ಆಯೇಷಾ ಸಿದ್ದಿಕಿ ಕೊಲೆಯಾದ ಮಹಿಳೆ. ಈ ಪ್ರಕರಣದಲ್ಲಿ ಆಕೆಯ ಪತಿ ಸೈಯ್ಯದ್ ಜಬಿ ಕೊಲೆ ಆರೋಪಿ ಆಗಿದ್ದು, ಕೊಲೆ ಮಾಡಿದ ನಂತರ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಪತ್ನಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡೋದು ಪತಿಗೆ ಇಷ್ಟ ಇರಲಿಲ್ಲ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆಯೇಷಾ ಸಿದ್ದಿಕಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಚಾರವನ್ನು ಆಕೆಯ ಪತಿ ಸೈಯ್ಯದ್ ಜಬಿ ವಿರೋಧಿಸುತ್ತಿದ್ದ. ಪತ್ನಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡಬಾರದು ಎಂದು ಪದೇಪದೇ ಹೇಳುತ್ತಿದ್ದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದನು. ಡಿ.26ರ ರಾತ್ರಿ ಕೂಡ ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ತೀವ್ರ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕೋಪದಲ್ಲಿ ಸೈಯ್ಯದ್ ಜಬಿ ಚಾಕುವಿನಿಂದ ಪತ್ನಿಯ ಕುತ್ತಿಗೆಯನ್ನು ಸೀಳಿ ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ.

ಪತ್ನಿಗೆ ಮೂರನೇ ಗಂಡ ಪತಿಗೆ ಎರಡನೇ ಮದುವೆ!

ಇನ್ನು ಗಮನಾರ್ಹ ಸಂಗತಿಯೆಂದರೆ, ಮೃತ ಆಯೇಷಾ ಸಿದ್ದಿಕಿಗೆ ಇದು ಮೂರನೇ ಮದುವೆಯಾಗಿದ್ದು, ಆರೋಪಿ ಸೈಯ್ಯದ್ ಜಬಿಗೆ ಇದು ಎರಡನೇ ಮದುವೆಯಾಗಿತ್ತು. ಇಬ್ಬರೂ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಆಯೇಷಾ ಸಿದ್ದಿಕಿ ಸೈಯ್ಯದ್ ಜಬಿಗೆ ಎರಡನೇ ಪತ್ನಿಯಾಗಿದ್ದರೆ, ಸೈಯ್ಯದ್ ಜಬಿ ಆಯೇಷಾ ಸಿದ್ದಿಕಿಗೆ ಮೂರನೇ ಪತಿಯಾಗಿದ್ದನು.

ವಿವಾಹವಾದ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಅನುಮಾನ, ಜಗಳ ಮತ್ತು ಮನಸ್ತಾಪಗಳು ಹೆಚ್ಚಾಗುತ್ತಿದ್ದವು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ. ಕೊಲೆ ಮಾಡಿದ ಬಳಿಕ ಆರೋಪಿ ಸೈಯ್ಯದ್ ಜಬಿ ಸ್ವಯಂ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದು, ಮುಂದಿನ ಹಂತದ ತನಿಖೆಯನ್ನು ಕೈಗೊಂಡಿದ್ದಾರೆ.

ರಾಜಧಾನಿಯಲ್ಲಿ ಮತ್ತೆೊಂದು ದಾಂಪತ್ಯ ಹತ್ಯೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಕುಟುಂಬ ಕಲಹಗಳು ಎಷ್ಟು ಭೀಕರ ಪರಿಣಾಮಕ್ಕೆ ತಲುಪಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!
Bengaluru: ಉದ್ಯಮಕ್ಕೆಂದು ಜಾಗ ಪಡೆದು 250 ಕೋಟಿಗೆ ರಿಯಲ್‌ ಎಸ್ಟೇಟ್‌ ಕಂಪನಿಗೆ ಮಾರಿದ ಇನ್ಫೋಸಿಸ್‌!