ಬೆಂಗಳೂರು ಬಿಎಂಟಿಸಿ ಬಸ್‌ ಕೆಳಗೆ ನುಗ್ಗಿದ ಚಿರತೆ ಮರಿ; ನೀರು ಕುಡಿಸಲು ಮುಂದಾದ ಡ್ರೈವರ್ ಮೇಲೆ ಅಟ್ಯಾಕ್!

By Sathish Kumar KH  |  First Published Apr 3, 2024, 5:22 PM IST

ಬೆಂಗಳೂರಿನ  ಹೊರ ವಲಯ ತುರಹಳ್ಳಿ ಅರಣ್ಯ ಪ್ರದೇಶದ ಬಳಿ ಬರುತ್ತಿದ್ದ ಬಿಎಂಟಿಸಿ ಬಸ್‌ನೊಳಗೆ ಚಿರತೆ ಮರಿ ನುಗ್ಗಲು ಯತ್ನಿಸಿದೆ. ಈ ವೇಳೆ ಬಳಲಿದ್ದ ಚಿರತೆ ಮರಿಗೆ ನೀರು ಕುಡಿಸಲು ಮುಂದಾದ ಬಸ್ ಚಾಲಕನ ಮೇಲೆ ದಾಳಿ ಮಾಡಿದೆ.


ಬೆಂಗಳೂರು (ಏ.03): ಬೆಂಗಳೂರಿನ  ಹೊರ ವಲಯ ತುರಹಳ್ಳಿ ಅರಣ್ಯ ಪ್ರದೇಶದ ಬಳಿ ಬರುತ್ತಿದ್ದ ಬಿಎಂಟಿಸಿ ಬಸ್‌ನೊಳಗೆ ಚಿರತೆ ಮರಿ ನುಗ್ಗಲು ಯತ್ನಿಸಿದೆ. ಈ ವೇಳೆ ಬಳಲಿದ್ದ ಚಿರತೆ ಮರಿಗೆ ನೀರು ಕುಡಿಸಲು ಮುಂದಾದ ಬಸ್ ಚಾಲಕನ ಮೇಲೆ ದಾಳಿ ಮಾಡಿದೆ.

ರಾಜ್ಯ ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ. ಇನ್ನು ತುರಹಳ್ಳಿ ಫಾರೆಸ್ಟ್‌ ಬಳಿ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಚಿರತೆ ಮರಿಯೊಂದು ಅಡ್ಡಬಂದಿದೆ. ಕೂಡಲೇ ಬಸ್‌ನ ಬಾಗಿಲು ಮುಚ್ಚಿ ಪ್ರಯಾಣಿಕರಿಗೆ ಇಳಿಯದಂತೆ ಸೂಚನೆ ನೀಡಿದ್ದ ಡ್ರೈವರ್‌ ಕೆಳಗಿಳಿದು ಬಂದು ಚಿರತೆ ಮರಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ವೇಳೆ ಚಿರತೆ ಮರಿ ದಾಳಿ ಮಾಡಿದೆ. ನಂತರ, ಅಕ್ಕ-ಪಕ್ಕದಲ್ಲಿ ಜಮಾವಣೆ ಆಗಿದ್ದ ವಾಹನಗಳ ಚಾಲಕರು ಚಿರತೆಯನ್ನು ಓಡಿಸಿದ್ದಾರೆ. ಆಗ ಚಿರತೆ ಬಸ್‌ ಕೆಳಗೆ ಕುಳಿತಿತ್ತು, ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ.

Tap to resize

Latest Videos

undefined

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಂದೆಯೇ ಕತ್ತು ಕೊಯ್ದುಕೊಂಡ ಮೈಸೂರಿನ ವ್ಯಕ್ತಿ!

ಕೆಂಗೇರಿ ಟು ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಎಂದಿನಂತೆ ಬಿಎಂಟಿಸಿ ಬಸ್ ಸಂಚಾರ ಮಾಡುತ್ತಿತ್ತು. ಈ ವೇಳೆ ರಸ್ತೆಯ ಬದಿ ಚಿರತೆ ಮರಿಯಿಂದು ಬಿದ್ದು ಬಳಲುತ್ತಿತ್ತು. ಬಸ್‌ಗೂ ಮೊದಲೇ ಯಾರೋ ವಾಹನ ಸವಾರರು ಚಿರತೆ ಮರಿಗೆ ಡಿಕ್ಕಿ ಹೊಡೆದಂತೆ ಕಾಣುತ್ತಿದೆ. ಇನ್ನು ಚಿರತೆ ಮರಿ ಎದ್ದೇಳಲೂ ಆಗದೇ ತೀವ್ರವಾಗಿ ಬಳಲುತ್ತಿದೆ ಎಂದು ಎಲ್ಲ ಪ್ರಯಾಣಿಕರನ್ನು ಬಸ್‌ನಲ್ಲಿರಿಸಿ ಡ್ರೈವರ್ ಬಂದು ನೀರು ಕುಡಿಸಲು ಮುಂದಾಗಿದ್ದಾರೆ. ಆಗ, ಅದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಬೈಕಗ್‌ಗಳು, ಆಟೋಗಳು ಹಾಗೂ ಕಾರು ಸೇರಿದಂತೆ ಇತರೆ ವಾಹನಗಳ ಸವಾರರೂ ಕೂಡ ಸ್ಥಳದಲ್ಲಿದ್ದರು.

ಇನ್ನು ಡ್ರೈವರ್ ಜೊತೆಗೆ ಕಂಡಕ್ಟರ್ ಕೂಡ ಇದ್ದರು. ಚಿರತೆ ಮರಿಗೆ ನೀರು ಕುಡಿಸಿದ ತಕ್ಷಣ ಅದು ಚೇತರಿಕೆ ಕಂಡಿದೆ. ಕೂಡಲೇ ಡ್ರೈವರ್ ಮೇಲೆ ಅಟ್ಯಾಕ್‌ ಮಾಡಲು ಮುಂದಾಗಿದ್ದು, ಅವರು ತಪ್ಪಿಸಿಕೊಂಡಿದ್ದಾರೆ. ನಂತರ ಚಿರತೆ ಮರಿ ಎದ್ದು ಓಡಲಾಗದೇ ಬಸ್‌ನ ಅಡಿಗೆ ಅವಿತು ಕುಳಿತುಕೊಂಡಿತ್ತು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿ ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಚಿರತೆ ತಾಯಿಗಾಗಿ ಅರಣ್ಯ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಯುಗಾದಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ಮಾಂಸಹಾರಿಗಳಿಗೆ ಶಾಕಿಂಗ್ ನ್ಯೂಸ್!

ಚಿರತೆ ಮರಿ ಸುಮಾರು 8 ತಿಂಗಳದ್ದು ಎಂದು ತಿಳಿದುಬಂದಿದ್ದು, ಅದರ ಕಾಲಿಗೆ ಗಾಯವಾಗಿದೆ. ವಾಹನ ಬಂದು ಡಿಕ್ಕಿ ಹೊಡೆದಿದ್ದು, ಎದ್ದು ಓಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಣೆ ಮಾಡಿದ್ದು, ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. 

click me!