ಬೆಂಗಳೂರಿನಿಂದ ಶ್ರವಣಬೆಳಗೊಳ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರವಾರ ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಈ ರೈಲು ಬೇರೆ ಮಾರ್ಗದಲ್ಲಿ ಸಂಚಾರ ಮಾಡಲಿದೆ.
ಕಾರವಾರ [ಮಾ.09]: ಕರಾವಳಿಗರ ಬಹುದಿನಗಳ ಕನಸು ಶನಿವಾರ ನನಸಾಗಿದೆ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ವಾಸ್ಕೋ - ಬೆಂಗಳೂರು ರೈಲು ಸಂಚಾರ
ಆರಂಭವಾಗಿದೆ. ಮಾ. 8 ರಂದು ಭಾನುವಾರ ಸಂಜೆ 5.20 ಕ್ಕೆ ವಾಸ್ಕೊದಿಂದ ಬೆಂಗಳೂರಿಗೆ ಹೊರಟ ರೈಲಿಗೆ ಸಂಜೆ 7.25 ಕುಮಟಾ ನಿಲ್ದಾಣದಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು.
ಕಾರವಾರ ರೈಲು ರದ್ದು : ವಾಸ್ಕೋ ರೈಲು ಆರಂಭ ಹಿನ್ನೆಲೆಯಲ್ಲಿ ಇದುವರೆಗೆ ಬೆಂಗಳೂರು- ಕಾರವಾರ ನಡುವೆ ವಾರದಲ್ಲಿ ಮೂರು ದಿನ ಮೈಸೂರು ಮೂಲಕ ಸಂಚರಿಸುತ್ತಿದ್ದ ರಾತ್ರಿ ರೈಲು (16523 - 16524 ) ಮತ್ತು ಮೂರು ದಿನ ಶ್ರವಣಬೆಳಗೊಳ ಮೂಲಕ ಸಂಚರಿಸುತ್ತಿದ್ದ ರೈಲು (16513/ 16514 ) ಸೇವೆಯನ್ನು ರದ್ದುಗೊಳಿಸಲಾಗಿದೆ.
undefined
ಗೋವಾಗೆ ಯಶವಂತಪುರದಿಂದ ಡೈರೆಕ್ಟ್ ಟ್ರೈನ್, ಇಲ್ಲಿವೆ ಫೋಟೋಸ್..
ಪೆರ್ನಮ್- ಕಾರವಾರ ನಡುವೆ ಓಡಾಡುತ್ತಿದ್ದ ಡೆಮು ರೈಲು (70103 / 104 ) ಆಂಶಿಕ ವಾಗಿ ರದ್ದಾಗಿದೆ. ಈ ರೈಲು ಇನ್ನು ಮುಂದೆ ಕಾರವಾರದಿಂದ ಮಡಗಾಂವ್ ವರೆಗೆ ಸಂಚರಿಸದೆ ಮಡ ಗಾಂವ್ ನಿಂದ ಪೆರ್ನಮ್ ನಡುವೆ ಸಂಚರಿಸಲಿದೆ.
ಈ ಸಂಚಾರ ಮಾ. 7 ರಿಂದ ಆರಂಭವಾಗಲಿದೆ ಎಂದು ರೈಲ್ವೇ ಮಂಡಳಿ ಪ್ರಕಟನೆ ತಿಳಿಸಿದೆ.