ಶಿರಸಿ ಮಾರಿಕಾಂಬ ಜಾತ್ರೆಯಲ್ಲಿ ಭಾರಿ ಅವಘಡ

Sujatha NR   | Asianet News
Published : Mar 09, 2020, 12:29 PM IST
ಶಿರಸಿ ಮಾರಿಕಾಂಬ ಜಾತ್ರೆಯಲ್ಲಿ ಭಾರಿ ಅವಘಡ

ಸಾರಾಂಶ

ಪ್ರಸಿದ್ಧ ಶಿರಸಿ ಮಾರಿಕಾಂಬ ಜಾತ್ರೆಯಲ್ಲೊಂದು ಅವಘಡ ಸಂಭವಿಸಿದೆ. ಪವಾಡಸದೃಶ್ವಾಗಿ ವ್ಯಕ್ತಿ ಬದುಕುಳಿದಿದ್ದಾನೆ.

ಶಿರಸಿ (ಮಾ.09)  : ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಹಾಕಲಾಗಿದ್ದ ಬಾವಿಯಲ್ಲಿ ಸಾಹಸ ಪ್ರದರ್ಶನದಲ್ಲಿ ಅವಘಡವೊಂದು ನಡೆದಿದೆ. 

ಕಳೆದ ಶನಿವಾರ ರಾತ್ರಿ ನಗರದ ಕೋಣನಬಿಡಕಿಯಲ್ಲಿ ಹಾಕಲಾಗಿದ್ದ ಬಾವಿಯಲ್ಲಿ ಕಾರ್ ಬೈಕ್ ರೇಸ್ ಶೋದಲ್ಲಿ ಕಾರೊಂದರ ಎಂಜಿನ್ ಸಮಸ್ಯೆಯಿಂದ ಇನ್ನೊಂದು ಕಾರಿಗೆ ತಗುಲಿ ನಿಂತು ಪಕ್ಕದ ಕಾರಿಗೆ ಬಡಿದು ಅಲ್ಲೇ ಮಗುಚಿ ಬಿದ್ದಿದೆ.

ಶಿರಸಿ ಜಾತ್ರೆಗೆ ಹೋಗೋಣ ಬಾ...ಜನಸಾಗರ ಅಂದ್ರೆ ಇದೆ ತಾನೆ!

ಕಾರು ಚಾಲಕನ ಮೇಲೆ ಬಿದ್ದರೂ ಆತ ಹಾಗೂ ಅವನ ಪಕ್ಕದಲ್ಲಿ ಕುಳಿತ ಇನ್ನೊಬ್ಬರಿಗೆ ಯಾವುದೇ ತೊಂದರೆ ಆಗಿಲ್ಲ. ಈ ಘಟನೆಯಲ್ಲಿ ಇನ್ನೊಂದು ಕಾರಿನ ಚಾಲಕನ ಚಾಕಚಕ್ಯತೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

ಬಳಿಕ ಬಾವಿಯಲ್ಲಿ ರೇಸ್ ಶೋ ಮುಂದುವರಿಸಲಾಗಿದೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ