ಬೆಂಗಳೂರಿನ ಕನಸಿನ ಮನೆಗೆ ಕಂಟಕ, ವಸತಿ ಯೋಜನೆಯಡಿ ಫ್ಲಾಟ್ ಖರೀದಿ ಮಾಡಿದ್ದವರಿಗೆ ಶಾಕ್ ಕೊಟ್ಟ ಇಲಾಖೆ!

Published : Apr 29, 2026, 04:02 PM IST
Bengaluru Housing Scheme

ಸಾರಾಂಶ

ಬೆಂಗಳೂರಿನ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ, ನಿಗದಿತ ಅವಧಿಯಲ್ಲಿ ಪೂರ್ಣ ಹಣ ಪಾವತಿಸದ ಫಲಾನುಭವಿಗಳ ಫ್ಲಾಟ್‌ಗಳನ್ನು ರದ್ದುಗೊಳಿಸಲು ವಸತಿ ಇಲಾಖೆ ಆದೇಶಿಸಿದೆ. ಸುಮಾರು 5 ಸಾವಿರ ಫಲಾನುಭವಿಗಳ ಹಂಚಿಕೆಯನ್ನು ರದ್ದುಗೊಳಿಸಿ, ಅವರ ಮುಂಗಡ ಹಣವನ್ನು ಹಿಂದಿರುಗಿಸಲು ಇಲಾಖೆ ನಿರ್ಧರಿಸಿದೆ.

ಬೆಂಗಳೂರು: ನಗರದ ಬಹು ನಿರೀಕ್ಷಿತ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಫ್ಲಾಟ್ ಖರೀದಿಸಿದ ಫಲಾನುಭವಿಗಳಿಗೆ ವಸತಿ ಇಲಾಖೆಯಿಂದ ಶಾಕಿಂಗ್ ಸುದ್ದಿ ಸಿಕ್ಕಿತ್ತು, ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ವಸತಿ ಯೋಜನೆಯಡಿ 1BHK ಫ್ಲಾಟ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದರೂ, ನಿಗದಿತ ಅವಧಿಯಲ್ಲಿ ಪೂರ್ಣ ಮೊತ್ತವನ್ನು ಪಾವತಿಸಲು ವಿಫಲರಾದ ಫಲಾನುಭವಿಗಳ ಫ್ಲಾಟ್‌ಗಳನ್ನು ರದ್ದುಗೊಳಿಸುವುದಾಗಿ ಇಲಾಖೆ ಆದೇಶ ಪ್ರಕಟಿಸಿದೆ.

ಈ ಯೋಜನೆಯಡಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಅನೇಕ ಫಲಾನುಭವಿಗಳು ಮುಂಗಡ ಹಣ ಪಾವತಿಸಿ ತಮ್ಮ ಆಯ್ಕೆಯ ಫ್ಲಾಟ್‌ಗಳನ್ನು ಕಾಯ್ದಿರಿಸಿದ್ದರು. ಆದರೆ, ಫ್ಲಾಟ್‌ಗಳು ಸಿದ್ಧವಾಗಿದ್ದರೂ ಬಾಕಿ ಹಣವನ್ನು ಕಾಲಮಿತಿಯೊಳಗೆ ಪಾವತಿಸದ ಹಿನ್ನೆಲೆ, ಹಂಚಿಕೆ ಮಾಡಿದ್ದ ಫ್ಲಾಟ್‌ಗಳನ್ನು ರದ್ದುಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಸತಿ ಇಲಾಖೆ ತಿಳಿಸಿದೆ.

5 ಸಾವಿರ ಫಲಾನುಭವಿಗಳು ಪೂರ್ಣ

ವಿಶೇಷವಾಗಿ ಸುಮಾರು 5 ಸಾವಿರ ಫಲಾನುಭವಿಗಳು ಪೂರ್ಣ ಮೊತ್ತವನ್ನು ಪಾವತಿಸಲು ವಿಫಲರಾಗಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಈ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದ ಫ್ಲಾಟ್‌ಗಳನ್ನು ರದ್ದುಗೊಳಿಸಿ, ಅದೇ ಫ್ಲಾಟ್‌ಗಳನ್ನು ಇತರ ಅರ್ಹರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಇಲಾಖೆ ಮುಂದುವರಿಸಲು ನಿರ್ಧರಿಸಿದೆ.

ಇನ್ನೊಂದೆಡೆ, ಈಗಾಗಲೇ ಮುಂಗಡವಾಗಿ 50 ಸಾವಿರ ರೂಪಾಯಿ ಪಾವತಿಸಿರುವ ಫಲಾನುಭವಿಗಳಿಗೆ ಅವರು ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ವಸತಿ ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ಫಲಾನುಭವಿಗಳಿಗೆ ಆರ್ಥಿಕ ನಷ್ಟವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಎಸ್‌ಸಿ ಮತ್ತು ಎಸ್‌ಟಿ ವರ್ಗದವರಿಗೆ 9.70 ಲಕ್ಷ ರೂಪಾಯಿ ಕಡಿತ

ಯೋಜನೆಯಡಿ 1BHK ಫ್ಲಾಟ್‌ಗಳ ದರವನ್ನು ಸಾಮಾನ್ಯ ವರ್ಗದವರಿಗೆ 10.50 ಲಕ್ಷ ರೂಪಾಯಿಯಾಗಿ ನಿಗದಿಪಡಿಸಲಾಗಿದ್ದು, ಎಸ್‌ಸಿ ಮತ್ತು ಎಸ್‌ಟಿ ವರ್ಗದವರಿಗೆ 9.70 ಲಕ್ಷ ರೂಪಾಯಿ ಎಂದು ಕಡಿತ ದರದಲ್ಲಿ ನೀಡಲಾಗಿದೆ. ಕಡಿಮೆ ದರದಲ್ಲಿ ಮನೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದರೂ, ಸಮಯಕ್ಕೆ ಸರಿಯಾಗಿ ಪಾವತಿ ಆಗದ ಕಾರಣ ಹಲವು ಫ್ಲಾಟ್‌ಗಳು ಖಾಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ, ವಸತಿ ಇಲಾಖೆ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಪಾವತಿ ಮಾಡುವ ಮಹತ್ವವನ್ನು ಒತ್ತಿಹೇಳಿದ್ದು, ಮುಂದಿನ ಹಂಚಿಕೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ತಿಳಿಸಿದೆ. ಯೋಜನೆಯ ಯಶಸ್ಸಿಗಾಗಿ ಫಲಾನುಭವಿಗಳ ಸಹಕಾರ ಅಗತ್ಯವಾಗಿದ್ದು, ನಿಯಮ ಪಾಲನೆ ಅತ್ಯಂತ ಮುಖ್ಯವಾಗಿದೆ ಎಂದು ಇಲಾಖೆ ಮನವಿ ಮಾಡಿದೆ.

PREV
Read more Articles on
click me!

Recommended Stories

ಟ್ರೇಡ್ ಲೈಸೆನ್ಸ್‌ ನೀಡಲು 3 ತಿಂಗಳಿಂದ ಲಂಚಕ್ಕೆ ಸತಾಯಿಸಿದ್ದ SDA: ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾ ಬಲೆಗೆ
ಬೆಂಗಳೂರಿನಲ್ಲಿ ಸರ್ಕಾರಿ ಕಟ್ಟಡಗಳಿಂದಲೇ ₹472 ಕೋಟಿ ತೆರಿಗೆ ಬಾಕಿ: ವಿಧಾನಸೌಧ, ರಾಜಭವನಕ್ಕೂ ಜಿಬಿಎ ಬಿಸಿ!