ಬೆಂಗಳೂರಿನಲ್ಲಿ ಆಸ್ಪತ್ರೆ ಛಾವಣಿ ಕುಸಿತ, 4 ಮಂದಿ ಕಾರ್ಮಿಕರ ರಕ್ಷಣೆ, ಆಸ್ಪತ್ರೆಗೆ ದಾಖಲು

Published : May 31, 2022, 03:02 PM ISTUpdated : May 31, 2022, 03:54 PM IST
ಬೆಂಗಳೂರಿನಲ್ಲಿ ಆಸ್ಪತ್ರೆ  ಛಾವಣಿ ಕುಸಿತ, 4 ಮಂದಿ ಕಾರ್ಮಿಕರ ರಕ್ಷಣೆ, ಆಸ್ಪತ್ರೆಗೆ ದಾಖಲು

ಸಾರಾಂಶ

* ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಮೇಲ್ಚಾವಣೆ ಕುಸಿತ, 4 ಮಂದಿ ಕಾರ್ಮಿಕರ ರಕ್ಷಣೆ   * 4 ಮಂದಿ ಕಾರ್ಮಿಕರ ರಕ್ಷಣೆ  * ರಾಯಚೂರು ಮೂಲದ ಕಾರ್ಮಿಕರು

ಬೆಂಗಳೂರು, (ಮೇ.31):  ಬೆಂಗಳೂರಿನ ಹೃದಯ ಭಾಗದಲ್ಲಿರುವ ಸೆಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದ ಪೋರ್ಟಿಕೊ ಕುಸಿತದ ಪರಿಣಾಮ ಒಟ್ಟು ನಾಲ್ವರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ..ಕೂಡಲೇ ಮಾರ್ಥಾಸ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 ರಾಯಚೂರು ಮೂಲದ ಇದೇ ಚಾಂದ್ ಪಾಷ,ರಫಿ ಸಾಬ್,ಮೊಯಿದ್ದೀನ್,ಬಸವರಾಜ್ ಹಾಗೂ ರಾಜಪಕ್ಷ ಬೆಂಗಳೂರಲ್ಲಿ ಬಂದು ಬದುಕು ಕಟ್ಟಿಕೊಂಡಿದ್ರು. ಗಾರೆ ಕೆಲಸ ಮಾಡಿಕೊಂಡು ದಿನ ದೂಡ್ತಿದ್ರು. ಅದ್ರಂತೆ ಇಂದು(ಮಂಗಳವಾರ) ಬೆಳಗ್ಗೆ ಕೂಡ ಎಂದಿನಂತೆ ಐದು ಗಂಟೆಗೆ ಎದ್ದು ಮನೆ ಬಿಟ್ಟಿದ್ರು.6 ಗಂಟೆಗೆ ಇದೇ ನೃಪತುಂಗ ರಸ್ತೆಯಲ್ಲಿರೊ ಸೆಂಟ್ ಮಾರ್ಥಾಸ್ ಆಸ್ಪತ್ರೆಯ ಪೋರ್ಟಿಕೊ ನಿರ್ಮಾಣದ ಕ್ಯೂರಿಂಗ್ ಕೆಲಸ ಶುರು ಮಾಡಿದ್ರು.ಆದ್ರೆ ಕೆಲಸ ಶುರು ಮಾಡಿ ಇಪ್ಪತ್ತೇ ಇಪ್ಪತ್ತು ನಿಮಿಷದಲ್ಲಿ ಘನಘೋರ ಘಟನೆಯೊಂದು ನಡೆದೇ ಹೋಗಿತ್ತು..ಪೋರ್ಟಿಕೊ ಮೇಲಿದ್ದವರು ಅವಶೇಷದಡಿ ಸಿಲುಕುವಂತಾಗ್ಬಿಟ್ಟಿತ್ತು.. 

ಬೆಂಗಳೂರು: ನಿರ್ಮಾಣ ಹಂತದ ಆಸ್ಪತ್ರೆಯ ಛಾವಣಿ ಕುಸಿತ, ಮೂವರಿಗೆ ಗಾಯ

ಹೌದು.. ರಾಜಪಕ್ಷ ಉಳಿದ ನಾಲ್ವರಿಗೆ ಸಿಮೆಂಟ್ ಮೂಟೆ ಹೊರಿಸಿದ್ರೆ.ನಾಲ್ವರು ಪೋರ್ಟಿಕೊ ಮೇಲೆ ಸಿಮೆಂಟ್ ಮೂಟೆ ತೆಗೆದುಕೊಂಡು ಹೋಗ್ತಿದ್ರು .ಆದ್ರೆ ಕಳಪೆ ಕಾಮಗಾರಿಯಿಂದಾಗಿ ಓವರ್ ಲೋಡ್ ಆಗಿ ಪಿಲ್ಲರ್ ಗೆ ಹಾಕಲಾಗಿದ್ದ ಇದೇ ಕಬ್ಬಿಣದ ರಾಡು ಕಳಚಿಕೊಂಡಿದೆ. ಪರಿಣಾಮ ಪೋರ್ಟಿಕೊ ಸಂಪೂರ್ಣವಾಗಿ ಕುಸಿದಿದ್ದು,ಮೇಲಿದ್ದವರು ಅವಶೇಷದಡಿ ಸಿಲುಕಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ.ಇದರಲ್ಲಿ ರಫಿಸಾಬ್ ಮತ್ತು ಬಸವರಾಜ್ ನ ಸ್ಥಿತಿ ಗಂಭೀರವಾಗಿದೆ.ಇದಕ್ಕೆ ಸಂಬಂಧ ಪಟ್ಟಂತೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ ಪೋರ್ಟಿಕೊ ಕೆಲಸ ಮಾಡೋದು ರಾತ್ರಿಹೊತ್ತು ಆದ್ರೆ ಇಂದು ಬೆಳಗ್ಗೆ ಕ್ಯೂರಿಂಗ್ ಕೆಲಸ ಮಾಡಲಾಗಿತ್ತು,ಅಬ್ರಾಂ ಥಾಮಸ್ ಎಂಬ ಕಂಪನಿಗೆ ಕಾಂಟ್ರಾಕ್ಟ್ ನೀಡಲಾಗಿತ್ತು.ಕಾಂಟ್ರಾಕ್ಟರ್ ಮತ್ತು ಇಂಜಿನಿಯರ್ ನಿಂದ ಮಾಹಿತಿ ಪಡೆದುಕೊಳ್ಬೇಕು ಎಂದರು.

ಇನ್ನೂ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆ ಮುಂದುವರೆಸಲಾಗಿದೆ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಹೇಳಿಕೆ ನೀಡಿದ್ರು. 

ಸದ್ಯ ಗಾಯಾಳುಳನ್ನ ಸೆಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗ್ತಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಮತ್ತೊಂದು ನೋವಿನ ಸಂಗತಿ ಅಂದ್ರೆ ರಫಿ ಸಾಬ್ ಏಳು ವರ್ಷದ ಹಿಂದೆ ಮದುವೆ ಆಗಿದ್ದು 9 ತಿಂಗಳ ಮಗು ಕೂಡ ಇದೆ.ಎಲ್ಲರೂ ಬದುಕಿ ಬರಲಿ ಅನ್ನೋದೇ ನಮ್ಮ ಪ್ರಾರ್ಥನೆ ಕೂಡ.

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು