ಬೆಂಗಳೂರು ಮಳೆ: ಶಾಲೆಗಳು, ಪಿಯು ಕಾಲೇಜುಗಳಿಗಷ್ಟೇ ರಜೆ, ಪದವಿ ಹಂತದ ಕಾಲೇಜುಗಳಿಗೆ ರಜೆ ಇಲ್ಲ!

By Sathish Kumar KHFirst Published Oct 15, 2024, 3:47 PM IST
Highlights

ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಶಾಲಾ-ಪಿಯು ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು (ಅ.15): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲ ಶಾಲೆ, ಪಿಯು ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಯಾವುದೇ ಪದವಿ ಹಂತದ ಮೇಲಿನ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಹೇಳಿದ್ದಾರೆ.

ರಾಜ್ಯಾದ್ಯಂತ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅಕ್ಟೋಬರ್  20 ರವರೆಗೆ ದಸರಾ ರಜೆ ಇದೆ. ಆದರೆ, ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಖಾಸಗಿ ಶಾಲೆಗಳನ್ನು ನಿನ್ನೆ ಸೋಮವಾರದಿಂದಲೇ  ಶಾಲೆ ಆರಂಭ ಮಾಡಿವೆ. ಆದರೆ, ನಿನ್ನೆ ಮಳೆ ಇಲ್ಲದ ಹಿನ್ನೆಲೆಯಲ್ಲಿ ಶಾಲೆಗೆ ಹೋಗಿ ಬಂದಿದ್ದಾರೆ. ಇಂದು ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಹೋಗಿ ಬರಲು ತೀವ್ರ ಅನಾನುಕೂಲ ಎದುರಿಸುವಂತಾಗಿದೆ. ಇನ್ನೂ ಒಂದೆರೆಡು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಎಲ್ಲ ಪ್ರಾಥಮಿಕ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Latest Videos

ಇದನ್ನೂ ಓದಿ: ಬೆಂಗಳೂರಿಗರಿಗೆ ವಾರ್ನಿಂಗ್ ನೀಡಿದ IMD, ಈ ವಾರದ ನಗರದಲ್ಲಿ ಸುರಿಯಲಿದೆ ಭಾರಿ ಮಳೆ!

ಈ ಬಗ್ಗೆ ಈಗಾಗಲೇ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಸೂಚನೆ ರವಾನಿಸಿರುವ ಜಿಲ್ಲಾಧಿಕಾರಿ ಜಗದೀಶ್ ಅವರು ಅಧಿಕೃತ ಆದೇಶ ಹೊರಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಳೆಯ ಸ್ಥಿತಿಗತಿಯನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ನೀಡಲಾಗುತ್ತಿದೆ. ಆದರೆ, ಯಾವುದೇ ಪದವಿ, ಸ್ನಾತಕೋತ್ತದರ ಪದವಿ, ಡಿಪ್ಲೊಮೊ, ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜುಗಳಿಗೆ ರಝೆ ಘೋಷಣೆ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಭಾರತ ಹವಾಮಾನ ಇಲಾಖೆ (IMD) ಬೆಂಗಳೂರು ಬಹುತೇಕ ಮೋಡ ಕವಿದ ವಾತಾವರಣ ಹಾಗೂ ಭಾರಿ ಮಳೆಯನ್ನು ಪಡೆಯುತ್ತಿದೆ. ಒಂದು ವಾರವಿಡೀ ಸಾಧಾರಣ ಮಳೆ ಮತ್ತು ಆಗಾಗ ಗುಡುಗು ಸಹಿತ ಮಳೆಯಾಗುತ್ತದೆ. ಇದಲ್ಲದೆ, ವಾರಾಂತ್ಯಗಳಲ್ಲಿ ಅತಿಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದೆ. ಬುಧವಾರ ಮತ್ತು ಗುರುವಾರ (ಅಕ್ಟೋಬರ್ 16-17) ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರು ನಿವಾಸಿಗಳಿಗೆ ಹಳದಿ (ಯಲ್ಲೋ) ಅಲರ್ಟ್ ಘೋಷಣೆ ಮಾಡಲಾಗಿದೆ. ಶುಕ್ರವಾರದ ವೇಳೆಗೆ (ಅಕ್ಟೋಬರ್ 18), ಇದು ಆರೆಂಜ್ ಅಲರ್ಟ್‌ಗೆ ಏರುತ್ತದೆ. ಈ ವೇಳೆ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಇನ್ನು ಬೆಂಗಳೂರಿನ ನಿವಾಸಿಗಳು ಎಲ್ಲಿಯೇ ಹೋದರೂ ಛತ್ರಿ ಮತ್ತು ಮಳೆಯಿಂದ ರಕ್ಷಣೆ ಮಾಡಿಕೊಳ್ಳುವ ರೇನ್ ಕೋಟ್‌ಗಳನ್ನು ಇರಿಸಿಕೊಳ್ಳಲು ಸೂಚನೆ ನೀಡಲಾಗಿದೆ.

click me!