ಮರ ಕಡಿದ ಬಿಬಿಎಂಪಿಯವರೇ ಬುಡ ತೆರವುಗೊಳಿಸಿ; ನಿಮ್ಮಾಣೆಗೂ ನಾನು ಹೊಸ ಗಿಡ ನೆಡ್ತೀನೆಂದ ಬಾಲಕಿ!

By Sathish Kumar KH  |  First Published Nov 4, 2024, 8:46 PM IST

ಬೆಂಗಳೂರಿನಲ್ಲಿ ಬಿದ್ದ ಮರದ ಬುಡ ತೆರವುಗೊಳಿಸಿದರೆ ಹೊಸ ಗಿಡ ನೆಡುವುದಾಗಿ 7-8 ವರ್ಷದ ಬಾಲಕಿ ಶಿವನ್ಯಾ ಬಿಬಿಎಂಪಿಗೆ ಪ್ರಾಮಿಸ್ ನೀಡಿದ್ದಾಳೆ. ಪಾಲಿಕೆ ಬಿದ್ದ ಮರವನ್ನು ಕಡಿದು, ಬುಡವನ್ನು ಮಾತ್ರ ಬಿಟ್ಟು ಹೋಗಿದೆ.


ಬೆಂಗಳೂರು (ಅ.04): ಬೆಂಗಳೂರಿನಲ್ಲಿ ಇತ್ತೀಚೆಗೆ ಮಳೆಯಾದಾಗ ಬಿದ್ದಿರುವ ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿದ ಬಿಬಿಎಂಪಿ ಸಿಬ್ಬಂದಿ ಬುಡವನ್ನು ಮಾತ್ರ ಅಲ್ಲಿಯೇ ಬಿಟ್ಟು ಹೋಗಿದ್ದರು. ಇದೀಗ ಬಿಬಿಎಂಪಿಯವರು ಬಂದು ಈ ಮರದ ಬುಡವನ್ನೂ ತೆರವುಗೊಳಿಸಿದರೆ ನಾನು ಇಲ್ಲೊಂದು ಹೊಸ ಗಿಡವನ್ನು ನೆಡುತ್ತೇನೆ ಎಂದು 7-8 ವರ್ಷದ ಪುಟ್ಟ ಬಾಲಕಿ ಬಿಬಿಎಂಪಿಗೆ ಪ್ರಾಮಿಸ್ ಮಾಡಿದೆ.

ಬೆಂಗಳೂರಿನಲ್ಲಿ ಮಳೆ ಬಂದರೆ ಕೆಲವು ಜನವಸತಿ ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳು ಜಲಪಾತಗಳಾಗಿ, ಕೆರೆಗಳಾಗಿ, ನದಿಗಳಾಗಿ ಮಾರ್ಪಾಡಾಗುತ್ತವೆ. ಇನ್ನು ರಸ್ತೆ ಅಭಿವೃದ್ಧಿ ಹೆಸರಲ್ಲಿ ಮರಗಳ ಬೇರುಗಳನ್ನು ಕಡಿದು ಹಾಕುವ ಕಾರಣಕ್ಕೆ ಮಳೆಯ ಜೊತೆಗೆ ಸ್ವಲ್ಪ ಗಾಳಿ ಬೀಸಿದರೂ ಬೃಹತ್ ಗಾತ್ರದ ಮರಗಳು ಧೊಪ್ಪೆಂದು ಧರೆಗೆ ಬೀಳುತ್ತವೆ. ಇತ್ತೀಚೆಗೆ ಮಳೆ ಬಂದಾಗ ಮಲ್ಲೇಶ್ವರ ಬಳಿಯ ವೈಯಾಲಿಕಾವಲ್‌ನ 13ನೇ ಕ್ರಾಸ್‌ನಲ್ಲಿ ದೊಡ್ಡ ಮರವೊಂದು ಬಿದ್ದಿತ್ತು. ಇನ್ನು ಸ್ಥಳೀಯರು ದೂರು ನೀಡಿದ ನಂತರ ಸ್ಥಳಕ್ಕೆ ಬಂದ ಮರ ತೆರವುಗೊಳಿಸುವ ಸಿಬ್ಬಂದಿ ಬಿದ್ದಿರುವ ಮರವನ್ನು ಸಂಪೂರ್ಣವಾಗಿ ಕಡಿದುಕೊಂಡು, ಕಟ್ಟಿಗೆಗಳನ್ನು ಟ್ರ್ಯಾಕ್ಟರ್‌ಗೆ ತುಂಬಿಕೊಂಡು ಹೋದರು.

Latest Videos

undefined

ಆದರೆ, ಮರವನ್ನು ಮಾತ್ರ ಕಡಿದ ಅವರು, ಬೃಹತ್ ಗಾತ್ರದ ಬುಡವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಮರದಲ್ಲಿ ಆಶ್ರಯ ಮಡೆದಿದ್ದ ಪ್ರಾಣಿ, ಪಕ್ಷಿಗಳು ಈಗಲೂ ಅಲ್ಲಿಗೆ ಬಂದು ಹೋಗುತ್ತಿವೆ. ರಸ್ತೆಯ ಪಕ್ಕದಲ್ಲಿ ಖಾಲಿ ಮರದ ಬುಡ ಮಾತ್ರ ಕಾಣುತ್ತಿದೆ. ಈ ಬಗ್ಗೆ ಸ್ಥಳೀಯ 7-8 ವರ್ಷದ ಪುಟ್ಟ ಬಾಲಕಿ ಶಿವನ್ಯಾ (Shivanya) ವಿಡಿಯೋವೊಂದನ್ನು ಮಾಡಿ ಈ ಮರದ ಖಾಲಿ ಬುಡವನ್ನೂ ತೆರವು ಮಾಡಿದರೆ ತಾನೊಂದು ಗಿಡ ನೆಡುವುದಾಗಿ ಹೇಳಿದ್ದಾಳೆ.

ಇದನ್ನೂ ಓದಿ: ಬಾರೋ.. ಬಾರೋ.. ಅಂತ ಕರೆದು, ಪಟಾಕಿ ಮೇಲೆ ಕೂರಿಸಿ ಬೆಂಕಿ ಹಚ್ಚಿ ಓಡಿ ಹೋದರು!

ವಿಡಯೋದಲ್ಲಿ ಏನಿದೆ?
"ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಬಿಬಿಎಂಪಿಯವರೇ ನಮಸ್ಕಾರ. ನಾನು ಶಿವನ್ಯಾ ವೈಯಾಲಿಕಾವಲ್ 13ನೇ ಎ-ಕ್ರಾಸ್‌ನಿಂದ ಮಾತನಾಡುತ್ತಿದ್ದೇನೆ. ಆವತ್ತು ಜೋರಾದ ಗಾಳಿ, ಮಳೆಗೆ ಈ ಮರ ಬಿದ್ದು ಹೋಯ್ತು. ಪುಣ್ಯಕ್ಕೆ ಯಾರಿಗೂ ಏನೂ ಅನಾಹುತ ಆಗಲಿಲ್ಲ. ಬಿಬಿಎಂಪಿಯವರು ಬಂದು ಮರ ಕಡಿದುಕೊಂಡು ಹೋದರು. ಆದರೆ, ಈ ಬುಡ ಮಾತ್ರ ಉಳಿದಿದೆ. ನೀವು ಇದ್ದನ್ನೂ ತೆರವುಗೊಳಿಸಿ ಸ್ವಚ್ಛಗೊಳಿಸಿ ಕೊಟ್ಟರೆ ಇಲ್ಲಿ ನಾನೊಂದು ಹೊಸ ಗಿಡವನ್ನು ನೆಡುತ್ತೇನೆ. ಇದು ನನ್ನ ಪ್ರಾಮಿಸ್" ಎಂದು ಬಿಬಿಎಂಪಿಗೆ ಹಾಗೂ ಸಿಎಂಗೆ ಪ್ರಾಮಿಸ್ ಮಾಡಿದ್ದಾಳೆ.

ಮಾನ್ಯ ಮುಖ್ಯಮಂತ್ರಿಗಳು, ಬಿಬಿಎಂಪಿ ಕಮಿಷನರ್ ಮತ್ತು ಡಿಕೆಶಿಯವರಿಗೊಂದು ಕಳಕಳಿಯ ಮನವಿ. pic.twitter.com/3oqUKmuXJs

— Venky_Adiga (@Anchor_Venky)

80 ಲಕ್ಷ ಜನರಿಗೆ ಸೇವೆ ನೀಡುತ್ತಿದ್ದ ಅಷ್ಟೇ ಸಿಬ್ಬಂದಿ 1.40 ಕೋಟಿ ಜನರಿಗೂ ಸೇವೆ ನೀಡಬೇಕು: ಬೆಂಗಳೂರಿನಲ್ಲಿ ಆಡಳಿತ ವ್ಯವಸ್ಥೆ, ಗುಂಡಿಮುಕ್ತ ರಸ್ತೆ, ಶುದ್ಧ ಗಾಳಿ, ಉತ್ತಮ ವಾತಾವರಣವಿರುವ ಉದ್ಯಾನಗಳು, ಮರಗಳ ಬೆಳೆಸುವಿಕೆ ಮತ್ತು ಟ್ರಿಮ್ಮಿಂಗ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಬಿಬಿಎಂಪಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸದೇ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತದೆ. ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳಿಗೆ ಮಾತ್ರ ಬೈಯುತ್ತೇವೆ. ಮೂಲ ಸಮಸ್ಯೆ ಏನಿದೆ ಎಂದರೆ ಕಳೆದ 10 ವರ್ಷಗಳ ಹಿಂದೆ ಇದ್ದ 80 ಲಕ್ಷ ಜನಸಂಖ್ಯೆಗೆ ಸೇವೆ ಸಲ್ಲಿಸಲು ಇದ್ದಷ್ಟೇ ಬಿಬಿಎಂಪಿ ಅಧಿಕಾರಿಗಳು ಇದೀಗ 1.40 ಕೋಟಿ ಜನರಿಗೆ ಸೇವೆ ನೀಡಬೇಕಾಗಿದೆ. 

ಹೀಗಾಗಿ, ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗದೇ ಪರದಾಡುತ್ತಿದೆ. ಇದನ್ನು ಈ ವ್ಯವಸ್ಥೆ ಸರಿಪಡಿಸಬೇಕಾದ ರಾಜ್ಯ ಸರ್ಕಾರ ಮಾತ್ರ ರಾಜಕಾರಣ ಹಾಗೂ ಉಚಿತ ಗ್ಯಾರಂಟಿ ಮೂಲಕ ಕಾಲಹರಣ ಮಾಡುತ್ತಿದೆ. ಈಗಾಗಲೇ ಬಿಬಿಎಂಪಿಗೆ ಕಾರ್ಪೋರೇಟರ್‌ಗಳು ಇಲ್ಲದಂತಾಗಿ 5 ವರ್ಷಗಳಾಗುತ್ತಾ ಬಂದರೂ ಸರ್ಕಾರ ಮಾತ್ರ ಗಡದ್ದಾಗಿ ನಿದ್ರೆಗೆ ಜಾರಿದಂತಿದೆ. ಇದನ್ನು ಪ್ರಶ್ನೆ ಮಾಡಿದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಚುನಾವಣೆ ನಡೆಯದಂತೆ ಕೋರ್ಟ್ ಮೊರೆ ಹೋಗಿದ್ದರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ.

ಇದನ್ನೂ ಓದಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು; ರಾಜಕಾರಣಿಗಳಿಗೆ ಕ್ಯಾಕರಿಸಿ ಉಗಿದ ಜನರು!

click me!