ಮಧ್ಯದಾರಿಯಲ್ಲೇ ಹೆರಿಗೆ, ತಾಯಿ ಮಗುವಿಗೆ ಮರುಜನ್ಮ ನೀಡಿದ ಬೆಂಗಳೂರಿನ ಡಾ. ರಮ್ಯ

By Suvarna NewsFirst Published Apr 16, 2020, 7:02 PM IST
Highlights

ತಾಯಿ-ಮಗುವಿಗೆ ಮರುಜನ್ಮ ನೀಡಿದ ವೈದ್ಯೆ/ ಡಾ. ರಮ್ಯಾ ಕೆಲಸಕ್ಕೆ ಪ್ರಶಂಸೆ/ ಲಾಕ್ ಡೌನ್ ನಡುವೆ ಇಂಥದ್ದೊಂದು ಮಾನವತಾ ಕೆಲಸ

ಬೆಂಗಳೂರು(ಏ. 16)  ದೇವರ ರೂಪದಲ್ಲಿ ಬಂದ ವೈದ್ಯೆ ಡಾ.ರಮ್ಯ ತಾಯಿ ಶಾಂತಿ ಹಾಗೂ ಮಗುವಿಗೆ ಮರು ಜನ್ಮ ಕೊಟ್ಟಿದ್ದಾರೆ.   ಏಪ್ರಿಲ್ 14‌ ರಂದು ದೊಡ್ಡ ಬೊಮ್ಮಸಂದ್ರದ ಕೃಪಾ ಕ್ಲಿನಿಕ್ ಮುಂಭಾಗದಲ್ಲಿ ತಾಯಿ ಶಾಂತಿ ಮಗುವಿಗೆ ಜನ್ಮ ನೀಡಿದ್ದಾಳೆ.

"

ಬೆಳಿಗ್ಗೆ  9.30 ಕ್ಕೆ ತಾಯಿ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿಗೆ ಹೆಚ್ಚು ರಕ್ತಸ್ರಾವ ಆಗಿದೆ. ಕೂಡಲೇ ವೈದ್ಯೆ ಡಾ.ರಮ್ಯ ಹಾಗೂ ಸಿಬ್ಬಂದಿ ಜೊತೆ ಕ್ಲಿನಿಕ್ ಮುಂಭಾಗವೇ ಮಹಿಳೆಗೆ ಸ್ಟಿಚ್ ಮಾಡಿದ್ದಾರೆ. ನಂತರ ಹೆರಿಗೆ ಆದ ಬಳಿಕ ಮಗುವಿನ‌ ಉಸಿರು ಸಹ ನಿಂತಿತ್ತು.  ತಕ್ಷಣ ಮಗುವಿಗೂ ಚಿಕಿತ್ಸೆ ನೀಡಿ ಬದಕಿಸಲಾಗಿದ್ದು ಇದೀಗ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ 3 ಕಠಿಣ ಕ್ರಮ , ಇಂದಿನಿಂದಲೇ ಜಾರಿ

ಹೆರಿಗೆ ಆದ ತಕ್ಷಣ ಅಂಬ್ಯುಲೇನ್ಸ್ ಮುಖಾಂತರ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಯ್ತು. ಮಧ್ಯ ಪ್ರದೇಶ ಮೂಲದ ಕೂಲಿ ಕಾರ್ಮಿಕ ದಂಪತಿಗೆ ಸರಿಯಾಗಿ ಹಿಂದಿ ಭಾಷೆಯೂ ಬರುತ್ತಿರಲಿಲ್ಲ. 

ಡಾ.ರಮ್ಯ ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೊರೋನಾ ಸೋಂಕು ಭಯದಿಂದ ನಗರದಲ್ಲೇ ಬಹುತೇಕ ಕ್ಲಿನಿಕ್ ಬಂದ್ ಆಗಿದೆ.  ವೈದ್ಯ ಡಾ.ರಮ್ಯ ಅವರು ತಾಯಿ ಶಾಂತಿ ಹಾಗೂ ಮಗುವಿಗೆ ಮರುಜನ್ಮ ನೀಡಿದ್ದು ಅಭಿನಂದನೆ ಸಲ್ಲಿಸಲೇಬೇಕು.

click me!