ಕೊರೋನಾ ವಿರುದ್ಧ ಹೋರಾಟ/ ಸಾಮಾನ್ಯ ಜ್ವರ ಕಂಡುಬಂದರೂ ಗಂಟಲ ದ್ರವ ಪ್ರೀಕ್ಷೆ ಕಡ್ಡಾಯ/ ಸೋಂಕಿತರೂ ವಾಸವಿದ್ದ ಪ್ರದೇಶದ ಸುತ್ತಮುತ್ತ ಹೈ ಅಲರ್ಟ್/ ಏಕಾಏಕಿ ಪ್ರಕರಣಗಳ ಹೆಚ್ಚಳ ತಂದ ಆತಂಕ
ಬೆಂಗಳೂರು(ಏ. 16) ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾಗಿದ್ದು ಆತಂಕ ಹೆಚ್ಚಿಸಿದೆ. ಕರ್ನಾಟಕದಲ್ಲಿ ಇನ್ನು ಮುಂದೆ ಸಾಮಾನ್ಯ ಜ್ವರದ ಲಕ್ಷಣ ಕಾಣಿಸಿಕೊಂಡರು ಗಂಟಲ ದ್ರವ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.
100 ಡಿಗ್ರಿಗಿಂತ ಹೆಚ್ಚು ಜ್ವರ ಬಂದರೆ ಕ್ವಾರಂಟೈನ್ ಆಗಲೇಬೇಕು. ಉಸಿರಾಟ ತೊಂದರೆ ಮತ್ತು ಐಎಲ್ಐ ಜ್ವರ ಇರುವವರಿಗೆ ಪರೀಕ್ಷೆ ಕಡ್ಡಾಯವಾಗಿದೆ. ಅಲ್ಲದೇ ಪಾಸಿಟಿವ್ ಬಂದ ವ್ಯಕ್ತಿ ಇರುವ ಮೂರು ಕಿ.ಮೀ ಪ್ರದೇಶದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮು, ಶೀತ, ಅಸ್ತಮಾ, ಉಸಿರಾಟದ ತೊಂದರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ದೆಹಲಿ ಮರ್ಕಜ್ ಮುಖ್ಯಸ್ಥನ ಸಂಬಂಧಿಗಳಿಗೂ ಕೊರೋನಾ
ಬಿಬಿಎಂಪಿಯ ವ್ಯಾಪ್ತಿಯ ಫೀವರ್ ಕ್ಲಿನಿಕ್ ಗಳಲ್ಲೂ ಈ ರೀತಿ ಸಮಸ್ಯೆಗೆ ಪರೀಕ್ಷೆ ಮಾಡಲಾಗುತ್ತಿದೆ. 3651 ಮಂದಿಯನ್ನ ಬೆಂಗಳೂರಿನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಇದರಲ್ಲಿ 50 ಮಂದಿಯನ್ನ ಬೇರೆ ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಪರೀಕ್ಷೆಗಾಗಿ 10 ಮಂದಿಯ ಸ್ವಾಬ್ ಕೂಡ ಪಡೆಯಲಾಗಿದೆ. ಇದೇ ರೀತಿ ರಾಜ್ಯಾದ್ಯಂತ ಕಡ್ಡಾಯ ಪರೀಕ್ಷೆ ಮಾಡಲು ಸರ್ಕಾರ ತೀರ್ಮಾನಿಸಿದ್ದು ಕೊರೋನಾ ಸೋಂಕು ನಿಯಂತ್ರಣಕ್ಕೆ ಇದು ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ.