ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್‌ಗೆ ಬಿಗ್ ರಿಲೀಫ್...!

Published : Jul 21, 2020, 03:00 PM IST
ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್‌ಗೆ ಬಿಗ್ ರಿಲೀಫ್...!

ಸಾರಾಂಶ

ಕಾರು ಚಾಲಕನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಯಲ್ಲಿ ಕೊರೋನಾ ಭೀತಿಯಿಂದ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನಿಟ್ಟುಸಿರುಬಿಟ್ಟಿದ್ದಾರೆ.

ಬೆಂಗಳೂರು, (ಜುಲೈ.21): ಕಳೆದ 5 ದಿನಗಳಿಂದ ಹೋಂ ಕ್ವಾರಂಟೈನ್​ನಲ್ಲಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ.

ಜು.17ರಂದು ಭಾಸ್ಕರ್​ರಾವ್ ಅವರ ಕಾರು ಚಾಲಕನಿಗೆ ಕೋವಿಡ್​ ಸೋಂಕು ದೃಢಪಟ್ಟಿತ್ತು. ಆದ್ದರಿಂದ ಕಮಿಷನರ್ ಅಂದಿನಿಂದ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದರು. 

ಕಾರು ಚಾಲಕನಿಗೆ ಸೋಂಕು: ಭಾಸ್ಕರ್‌ರಾವ್‌ ಕ್ವಾರಂಟೈನ್‌

ನಿನ್ನೆ(ಸೋಮವಾರ) ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಇಂದು (ಮಂಗಳವಾರ) ಬೆಳಗ್ಗೆ ಬಂದ ವರದಿಯಲ್ಲಿ ನೆಗೆಟಿವ್ ಎಂದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕೆಲಸಕ್ಕೆ ಹಾಜರಾಗುವುದಾಗಿ ಟ್ವೀಟ್ ಮೂಲಕ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಕಾರು ಚಾಲಕನಿಗೆ ಬಂದಿದೆ ಅಂದ್ರೆ ಆ ಸೊಂಕು ಕಮಿಷನರ್‌ಗೆ ತಗುಲಿರುವುದು ಗ್ಯಾರಂಟಿ ಎನ್ನಲಾಗಿತ್ತು. ಯಾಕಂದ್ರೆ ಕಾರಿನಲ್ಲಿ ಅಕ್ಕ-ಪಕ್ಕದಲ್ಲೇ ಕುಳಿತಿರುತ್ತಾರೆ. ಅಲ್ಲದೇ AC ಹಾಕಿಕೊಂಡು ಕಾರಿನಲ್ಲೇ ಇಬ್ಬರು ಉಸಿರಾಡಿದ್ದಾರೆ. 

ಅದೃಷ್ಟವಶಾತ್ ಭಾಸ್ಕರ್‌ ರಾವ್ ಅವರ ವರದಿ ನೆಗೆಟಿವ್ ಬಂದಿದೆ. ಇದರಿಂದ ಆಯುಕ್ತು ನಿಟ್ಟುಸಿರುಬಿಟ್ಟಿದ್ದಾರೆ.

PREV
click me!

Recommended Stories

ಕೋಲಾರದಲ್ಲಿ ಒಂದೇ ದಿನ ಬರೋಬ್ಬರಿ 21 ಮಂದಿಗೆ ಕಚ್ಚಿದ ಬೀದಿನಾಯಿ, ನಾಯಿಯನ್ನು ಹೊಡೆದು ಕೊಂದ ಗ್ರಾಮಸ್ಥರು!
ದರ್ಶನ್ ಹೇಗಿದ್ದಾರೆ? ಜೈಲಿಂದ ಹೊರಬಂದು ಅಭಿಮಾನಿಗಳ ಆತಂಕ ದೂರಮಾಡಿದ ಶಾಸಕ ವೀರೇಂದ್ರ ಪಪ್ಪಿ!