ಮಾ.8ರಂದು ರಾಮೇಶ್ವರಂ ಕೆಫೆ ಮರು ಆರಂಭ; ಬಾಂಬ್ ಸಿಡಿಸಿದರೆ ನಾವು ಬೆದರೊಲ್ಲ ಎಂದ ಸ್ಥಳೀಯರು!

By Sathish Kumar KH  |  First Published Mar 3, 2024, 1:32 PM IST

ಬಾಂಬನ್ನು ಸಿಡಿಸಿ ಹೆದರಿಸುವ ಪ್ರಯತ್ನದಲ್ಲಿರುವವರಿಗೆ ಇದು ಸರಿಯಾದ ಉತ್ತರ ಕೊಡುತ್ತೇವೆ. ನಾವು ರಾಮೇಶ್ವರಂ ಕೆಫೆಯನ್ನು ಪುನಃ ಮಾ.8ನೇ ತಾರೀಖಿನಂದೇ  ಮರು ಉದ್ಘಾಟನೆ ಮಾಡಲಿದ್ದೇವೆ.


ಬೆಂಗಳೂರು (ಮಾ.03): ಬಾಂಬನ್ನು ಸಿಡಿಸಿ ಹೆದರಿಸುವ ಪ್ರಯತ್ನದಲ್ಲಿರುವವರಿಗೆ ಇದು ಸರಿಯಾದ ಉತ್ತರ ಕೊಡುತ್ತೇವೆ. ನಾವು ರಾಮೇಶ್ವರಂ ಕೆಫೆಯನ್ನು ಪುನಃ ಮಾ.8ನೇ ತಾರೀಖಿನಂದೇ  ಮರು ಉದ್ಘಾಟನೆ ಮಾಡಲಿದ್ದೇವೆ. ಅಲ್ಲಿರುತ್ತೇನೆ. ಮಾ.8ರಂದು ಸಂಜೆ 4 ಗಂಟೆಗೆ ಸಾಧ್ಯವಾದರೆ ನೀವೂ ಬನ್ನಿ ಎಂದು ಚಕ್ರವರ್ತಿ ಮಿಥುನ್‌ ಎನ್ನುವವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಮಾ.1ರ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಲಾಗಿತ್ತು. ಈ ಘಟನೆಯ ಹಿಂದೆ ಬಿದ್ದಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳು ಕಳೆತ್ತಿದ್ದರೂ ಯಾರನ್ನೂ ಕೂಡ ಬಂಧಿಸಿಲ್ಲ. ಆದರೂ, ಹೋಟೆಲ್ ಮಾಲೀಕರು ಪುನಃ ರಾಮೇಶ್ವರಂ ಕೆಫೆಯನ್ನು ಮರು ಉದ್ಘಾಟನೆ ಮಾಡಲು ಮುಂದಾಗಿದ್ದಾರೆ. ಮಾ.8ರಂದು ರಾಮೇಶ್ವರಂ ಕೆಫೆ ಮರು ಆರಂಭ ಮಾಡಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಕೂಡ ಇಲ್ಲಿ ಸೇರಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

Tap to resize

Latest Videos

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ವೇಳೆ ಡಮ್ಮಿ ಫೋನ್ ಬಳಕೆ? ನೆಟ್ವರ್ಕ್ ಟ್ರೇಸ್‌ನಲ್ಲಿ ಪೊಲೀಸರ ದಿಕ್ಕು ತಪ್ಪಿಸಲು ಸಂಚು!

ಜನಸಂದಣಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ: ರಾಮೇಶ್ವರಂ ಕೆಫೆ  ಬಾಂಬ್ ಸ್ಪೋಟದ ಬೆನ್ನಲ್ಲಿಯೇ ಹಿರಿಯ ಪೊಪಲೀಸ್‌ ಅಧಿಕಾರಿಗಳೊಂದಿಗೆ ಖುದ್ದಾಗಿ ಸಭೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಘಟನೆಯ ಸಂಪೂರ್ಣ ಸತ್ಯ ಹೊರಗೆ ಬರಲಿ. ತಂತ್ರಜ್ಞಾನದ ಸಾಧ್ಯತೆಗಳನ್ನು ತನಿಖೆಯಲ್ಲಿ ಪರಿಣಾಮಕಾರಿಯಾಗಿ ಬಳಸಬೇಕು. ಮುಖ್ಯವಾಗಿ ಬೆಂಗಳೂರಿನ ಎಲ್ಲ ಜನಸಂದಣಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಳ ಮಾಡುವಂತೆ ಸೂಚನೆ ನೀಡಿದ್ದಾರೆ.

ಗೃಹ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಜನನಿಬಿಡ ಸ್ಥಳಗಳನ್ನು  ಗುರುತಿಸಿ ಅಂಥ  ಪ್ರದೇಶಗಳಲ್ಲಿ  ಪೊಲೀಸ  ಗಸ್ತು   ಹೆಚ್ಚಿಸಿ. ಜನರಿಗೆ ರಕ್ಷಣೆ ಒದಗಿಸಬೇಕು. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಬೇಕು. ಜೊತೆಗೆ, ಇಂಥ ಪ್ರಕರಣಗಳು ಮರುಕಳಿಸದಂತೆ  ಎಚ್ಚರ ವಹಿಸಬೇಕು. ಪೊಲೀಸರು ಇಂಥ ಘಟನೆ ನಡೆದಾಗ ಎಚ್ಚರಿಕೆ ವಹಿಸಿ ನಂತರ ಮರೆಯುವುದಾಗಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಟ್ಟ ಹಾಕುವಂತೆ ಸೂಚನೆ ನೀಡಿದರು.

Rameshwaram Cafe Blast ಹಿನ್ನೆಲೆ ರಾಜಧಾನಿಯಲ್ಲಿ 20 ವರ್ಷದಲ್ಲಿ ನಡೆದ ಸ್ಫೋಟಗಳಿವು, ಸಂಘಟನೆಗಳದ್ದೇ ಕುತಂತ್ರ!

ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಬೇಡ: ರಾಜ್ಯದಲ್ಲಿ ಇಂಟೆಲಿಜೆನ್ಸ್ ಹೆಚ್ಚು ಜಾಗೃತವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೇ ಕ್ರಮ ಜರುಗಿಸಬೇಕು. ಈ ಬಗ್ಗೆಯೇ ಪೊಲೀಸ್ ಇಲಾಖೆ ಜೊತೆಗೆ ಪ್ರತ್ಯೇಕ ಸಭೆ ಕರೆಯುತ್ತೇನೆ. ಇನ್ನು ಸಮಯ ಸಂದರ್ಭಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕು. ನಮ್ಮಲ್ಲಿರುವ ತಂತ್ರಜ್ಞಾನದ ಸಾಧ್ಯತೆಗಳನ್ನು ತನಿಖೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

click me!