Bengaluru: ನಾಗವಾರ- ಕಾಳೇನ ಅಗ್ರಹಾರ ಮೆಟ್ರೋ ಕಾಮಗಾರಿ ವಿವರ ಬಿಚ್ಚಿಟ್ಟ ಬಿಎಂಆರ್‌ಸಿಎಲ್

Published : Jul 14, 2023, 04:18 PM IST
Bengaluru: ನಾಗವಾರ- ಕಾಳೇನ ಅಗ್ರಹಾರ ಮೆಟ್ರೋ ಕಾಮಗಾರಿ ವಿವರ ಬಿಚ್ಚಿಟ್ಟ ಬಿಎಂಆರ್‌ಸಿಎಲ್

ಸಾರಾಂಶ

ಬೆಂಗಳೂರು ಹಂತ-2ರ ಯೋಜನೆ ಅಡಿಯಲ್ಲಿ ರೀಚ್-6ರ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ ಮಾರ್ಗದ ಕಾಮಗಾರಿ ಮಾಹಿತಿಯನ್ನು ಬಿಎಂಆರ್‌ಸಿಎಲ್‌ ಬಿಚ್ಚಿಟ್ಟಿದೆ. 

ಬೆಂಗಳೂರು (ಜು.14): ಬೆಂಗಳೂರಿನ ಪ್ರಮುಖ ಮೆಟ್ರೋ ರೈಲು ಮಾರ್ಗವಾದ ಕಾಳೇನಅಗ್ರಹಾರದಿಂದ ನಾಗವಾರದವರೆಗಿನ 22 ಕಿಲೋ ಮೀಟರ್‌ ಮಾರ್ಗದ ಕಾಮಗಾರಿ 2025ಕ್ಕೆ ಪೂರ್ಣಗೊಳ್ಳಲಿದೆ. ಆದರೆ, ಈವರೆಗೆ ಸುರಂಗ ಮಾರ್ಗ ಮತ್ತು ಎತ್ತರಿಸಿದ ಮಾರ್ಗಗಳ ಕಾಮಗಾರಿ ಪೂರ್ಣಗೊಂಡ ವಿವರದ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಸಂಪೂರ್ಣ ವಿವರವನ್ನು ನೀಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ  ಹಂತ -2 ರ ರೀಚ್ 6-ಸುರಂಗ ಮಾರ್ಗ ಕಾಮಗಾರಿಯ ಸಂಕ್ಷಿಪ್ತ ಟಿಪ್ಪಣಿಯನ್ನು ಒದಗಿಸಲಾಗಿದೆ. ಹಂತ-2ರ ಯೋಜನೆ ಅಡಿಯಲ್ಲಿ ರೀಚ್-6ರ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ ಇದೆ. ಈ ಮಾರ್ಗವು ಒಟ್ಟು 18 ಮೆಟ್ರೋ ರೈಲು ನಿಲ್ದಾಣಗಳನ್ನು ಹೊಂದಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗವು 7.50 ಕಿಮೀ ಇದ್ದು 6 ನಿಲ್ದಾಣಗಳು ಬರಲಿವೆ. ಉಳಿದಂತೆ ಡೈರಿ ವೃತ್ತದಿಂದ ನಾಗವಾರದವರೆಗೆ 13.76 ಕಿಮೀ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದ್ದು, 12 ನಿಲ್ದಾಣಗಳನ್ನು ಹೊಂದಿದೆ.

ಸುರಂಗ ಮಾರ್ಗದ ವಿವರಗಳು: ದಕ್ಷಿಣ ರಾಂಪ್ (ಡೈರಿ ಸರ್ಕಲ್‌) ಮತ್ತು ನಾಗವಾರ ನಡುವೆ
- ಸುರಂಗ ಮಾರ್ಗದ ಉದ್ದ: 13.89 ಕಿಮೀ (ರಾಂಪ್ ಒಳಗೊಂಡಂತೆ)
- ಸುರಂಗ ಮಾರ್ಗದ ನಿಲ್ದಾಣಗಳ ಸಂಖ್ಯೆ: 12
- ಸುರಂಗ ಮಾರ್ಗದ ಉದ್ದ: (10,496 ಕಿಮೀ x2): 20.992 ಕಿಮೀ. (ಎರಡು ಸಮಾನಾಂತರ ಮಾರ್ಗಗಳು ಸೇರಿ) 
- ಸುರಂಗ ಕೊರೆಯುವ ಪ್ಯಾಕೇಜುಗಳ ಸಂಖ್ಯೆ: 4

  • ಸುರಂಗ ಮಾರ್ಗ ಕಾಮಗಾರಿಗಳ ಗುತ್ತಿಗೆದಾರರು: 
  • ಪ್ಯಾಕೇಜ್-RT01: M/s AFCONS Ltd. ಒಪ್ಪಂದಕ್ಕೆ 12.12.2019 ರಂದು ಸಹಿ ಮಾಡಲಾಗಿದೆ - ಒಟ್ಟು ವೆಚ್ಚ 1526.32 ಕೋಟಿ ರೂ. 
  • ಪ್ಯಾಕೇಜ್- RT02: M/s L&T Ltd. ಒಪ್ಪಂದಕ್ಕೆ 08.03.2019 ರಂದು ಸಹಿ ಮಾಡಲಾಗಿದೆ -  ಒಟ್ಟು ವೆಚ್ಚ 1329.143 ಕೋಟಿ ರೂ. 
  • ಪ್ಯಾಕೇಜ್- RT03: M/s L&T Ltd. ಒಪ್ಪಂದಕ್ಕೆ 08.03.2019 ರಂದು ಸಹಿ ಮಾಡಲಾಗಿದೆ - ಒಟ್ಟು ವೆಚ್ಚ 1299. 23. ಕೋಟಿ ರೂ. 
  • ಪ್ಯಾಕೇಜ್- RT04: M/s ITD Ltd. ಒಪ್ಪಂದಕ್ಕೆ 13.12.2019 ರಂದು ಸಹಿ ಮಾಡಲಾಗಿದೆ - ಒಟ್ಟು ವೆಚ್ಚ 1771.25 ಕೋಟಿ ರೂ.

ಸುರಂಗ ನಿರ್ಮಾಣದ ವಿವರಗಳು: 
ಒಟ್ಟು 9 ಸುರಂಗ ಕೊರೆಯುವ ಯಂತ್ರಗಳನ್ನು (Tunnel boring machines- TBMs) ಬಳಸಲಾಗಿದೆ. ಈವರೆಗೆ 5 ಟಿಬಿಎಂಗಳು ಸುರಂಗ ಕೊರೆಯುವ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಉಳಿದ 4 ಟಿಬಿಎಂಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಈ ಯಂತ್ರಗಳು ಕೆಲವೇ ದಿನಗಳಲ್ಲಿ ಸುರಂಗ ಮಾರ್ಗವನ್ನು ಕೊರೆದು ಯಶಸ್ವಿಯಾಗಿ ಹೊರಗೆ ಬರಲಿವೆ. ಈ ಮಾರ್ಗದಿಂದ ನಗರದ ಅತ್ಯಂತ ಇಕ್ಕಟ್ಟಾದ ಪ್ರದೇಶಗಳಲ್ಲಿ ಸಂಚಾರಕ್ಕೆ ಅನುಕೂಲ ಆಗಲಿದೆ. 

  • ಸುರಂಗ ಮಾರ್ಗದ ಶೇಕಡಾವಾರು ಪ್ರಗತಿ: 
  • - RT01 ಶೇ 80 % (5346m ನಲ್ಲಿ 4327m ಪೂರ್ಣಗೊಂಡಿದೆ)
  • - RTO2 ಶೇ 100% (4423m ನಲ್ಲಿ 4423m ಪೂರ್ಣಗೊಂಡಿದೆ)
  • - RT03 ಶೇ 98 % (4847m ನಲ್ಲಿ, 4847m ಪೂರ್ಣಗೊಂಡಿದೆ)
  • - RTO4 ಶೇ 54 % (6375m ನಲ್ಲಿ 3122m ಪೂರ್ಣಗೊಂಡಿದೆ)

ಸುರಂಗ ನಿಲ್ದಾಣಗಳ ಕಾಮಗಾರಿ ಶೇಕಡಾವಾರು ಪ್ರಗತಿ:
- RT01 (ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್) ಶೇ 48 % ಪೂರ್ಣಗೊಂಡಿದೆ
- RT02 (RMS, MG ರಸ್ತೆ, ಶಿವಾಜಿ ನಗರ) ಶೇ 79% ಪೂರ್ಣಗೊಂಡಿದೆ
- RT03 (ಕಂಟೋನ್ಮಂಟ್, ಪಾಟರಿ ಟೌನ್) ಶೇ 75 % ಪೂರ್ಣಗೊಂಡಿದೆ
- RTO4 (ಟ್ಯಾನರಿ ರಸ್ತೆ, ವೆಂಕಟೇಶಪುರ, ಕೆ.ಜಿ.ಹಳ್ಳಿ, ನಾಗವಾರ) ಶೇ 49 % ಪೂರ್ಣಗೊಂಡಿದೆ

ಇನ್ನು ಹಂತ-2ರ ಯೋಜನೆ ಅಡಿಯಲ್ಲಿ ರೀಚ್-6ರ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ ಮಾರ್ಗವು ಮಾರ್ಚ್ 2025 ರ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ