ಉಡುಪಿ: ಸ್ವಚ್ಛತೆಯ ಅರಿವು ಮೂಡಿಸಲು ಬೈಕ್ ಏರಿ ಕಡಲೂರಿಗೆ ಬಂದ ಬೆಂಗಳೂರಿನ ಯುವತಿಯರು

By Gowthami K  |  First Published Oct 15, 2022, 8:11 PM IST

ಕರಾವಳಿ ಕಡಲ ತೀರದಲ್ಲಿ ಸ್ವಚ್ಛತೆ ಹಾಗೂ ಕಡಲ ತೀರದ ವಾತಾವರಣದ ಸಂರಕ್ಷಣೆಯ ಉದ್ವದೇಶವನ್ನಿಟ್ಟುಕೊಂಡ ಇಬ್ಬರು ಮಹಿಳೆಯರು ಬೈಕ್ ಮೂಲಕ ಬೆಂಗಳೂರಿನಿಂದ ಬಂದಿದ್ದಾರೆ. ಕೇರಳ ಗಡಿಯಿಂದ ಗೋವಾ ರಾಜ್ಯದ ಗಡಿ ತನಕ ಇವರದ್ದು ಸ್ಟಡಿ ಕಂ ಜನಜಾಗೃತಿ ಅಭಿಯಾನ.


ಉಡುಪಿ (ಅ.15): ಉಸಿರಾಡೋ ಗಾಳಿ ಮಲಿನ. ವಿಪರೀತ ಪ್ಲಾಸ್ಟಿಕ್ ಬಳಕೆಯಿಂದ ಭೂ ಮಾಲಿನ್ಯ. ಫ್ಯಾಕ್ಟರಿಗಳಿಂದ ಪರಿಸರ ಮಾಲಿನ್ಯ. ಈ ಎಲ್ಲದರ ಸಮ್ಮಿಶ್ರಣ ಮತ್ತು ಅಪಾಯಕಾರಿ ಸಮುದ್ರ ಮಾಲಿನ್ಯ. ಪರಿಸರ ಅಸಮಾತೋಲನ ಸರಿಪಡಿಸುವ ಪ್ರಯತ್ನವೆಂಬಂತೆ ಬೆಂಗಳೂರಿನ ಇಬ್ರು ಹುಡುಗಿಯರು ಬೈಕ್ ಹತ್ತಿ ಕರಾವಳಿಯ ಸಮುದ್ರ ತೀರಕ್ಕೆ ಬಂದಿದ್ದಾರೆ. ಕಡಲ ತೀರದಲ್ಲಿ ಜಾಲಿ ರೈಡ್ ಮಾಡಿ, ಶೋಕಿಗಾಗಿ ವೀಡಿಯೋ ಫೋಟೋ ಶೂಟ್ ಮಾಡಲು ಈ ಇಬ್ಬರು ಕೋಸ್ಟಲ್ ಟೂರ್ ಮಾಡ್ತಿಲ್ಲ. ಕರಾವಳಿ ಕಡಲ ತೀರದಲ್ಲಿ ಸ್ವಚ್ಛತೆ ಹಾಗೂ ಕಡಲ ತೀರದ ವಾತಾವರಣದ ಸಂರಕ್ಷಣೆಯ ಉದ್ವದೇಶವನ್ನಿಟ್ಟುಕೊಂಡ ಇಬ್ಬರು ಮಹಿಳೆಯರು ಬೈಕ್ ಮೂಲಕ ಬೆಂಗಳೂರಿನಿಂದ ಬಂದಿದ್ದಾರೆ. ಕೇರಳ ಗಡಿಯಿಂದ ಗೋವಾ ರಾಜ್ಯದ ಗಡಿ ತನಕ ಇವರದ್ದು ಸ್ಟಡಿ ಕಂ ಜನಜಾಗೃತಿ ಅಭಿಯಾನ. ಸ್ವಾತಿ ಮತ್ತು ಅನಿತಾ 500 ಕಿಲೋಮೀಟರ್ ದೂರ ಬಂದು, ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಜಿಲ್ಲೆಯ ಸಮುದ್ರ ತೀರದ ಪರಿಸ್ಥಿತಿ ಅಧ್ಯಯನ ಮಾಡುತ್ತಿದ್ದಾರೆ. ಎಂಟು ದಿನ 300+ ಕಿಲೋಮೀಟರ್ ಸಂಚರಿಸಿ ರಾಜ್ಯದ ಪ್ರಮುಖ ಕಡಲ ತೀರಗಳನ್ನು ಸಂಪರ್ಕಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ದಾರಿಯುದ್ದಕ್ಕೂ ಶೈಕ್ಷಣಿಕ ಸಂಸ್ಥೆಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸುವ ಯೋಜನೆ, ಕೆಲವು ಕಡಲ ತೀರಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಿದ್ದಾರೆ.

ಅನಿತಾ ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಾದ್ಯಂತ ಬೈಕ್ ಮೂಲಕ ಸಂಚರಿಸಿ ಈ ಹಿಂದೆ ಜಾಗೃತಿ ಮೂಡಿಸಿದ್ದರು.  ಕನ್ನಡದ ಮೊದಲ ಮಹಿಳಾ ಮೊಟೋ ವ್ಲಾಗರ್ ಖ್ಯಾತಿಯ ಬೆಂಗಳೂರಿನ ಸ್ವಾತಿ. ಆರ್ ಸೇವ್ ಮರೈನ್ ಗೆ ಕೈ ಜೋಡಿಸಿದ್ದಾರೆ. ಕೆಲ ಬೀಚ್ ಗಳ ಪರಿಸ್ಥಿತಿ ನೋಡಿ ಬೇಸರಗೊಂಡಿದ್ದಾರೆ. 

Latest Videos

undefined

ಈ ಅಭಿಯಾನಕ್ಕೆ ಕೆಲ ಸಾಮಾಜಿಕ ಸಂಘಟನೆಗಳು ಕೈಜೋಡಿಸಿದೆ. ಸಮುದ್ರ ಭೂಮಿಯ ಕನ್ನಡಿ ಅಂತಾರೆ. ಭೂಮಿಯನ್ನು ಶುದ್ಧವಾಗಿ ಇಟ್ಟುಕೊಂಡರೆ ಸಮುದ್ರ ಸ್ವಚ್ಛ ಮತ್ತು ಅಂದವಾಗಿ ಇರುತ್ತದೆ.

ಕಾಸರಕೋಡು ಇಕೋ ಕಡಲತೀರಕ್ಕೆ ಬ್ಲ್ಯೂ ಫ್ಲ್ಯಾಗ್‌ ಮಾನ್ಯತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಕಡಲತೀರಕ್ಕೆ ಈ ವರ್ಷವೂ ಅಂತಾರಾಷ್ಟ್ರೀಯ ಮಟ್ಟದ ‘ಬ್ಲ್ಯೂ ಫ್ಲ್ಯಾಗ್‌’ ಮಾನ್ಯತೆ ಸಿಕ್ಕಿದೆ.

ಉಡುಪಿ: ಮಲ್ಪೆ ಬೀಚ್‌ನಲ್ಲಿ ಚಿನ್ನಕ್ಕಾಗಿ ಹುಡುಕಾಟ, ಕಡಲ ತೀರದಲ್ಲಿ ನಿಜಕ್ಕೂ ಗೋಲ್ಡ್‌ ಸಿಗುತ್ತಾ?

ಇದರಿಂದಾಗಿ ಸತತ ಮೂರನೇ ವರ್ಷ ಈ ಮಾನ್ಯತೆ ಸಿಕ್ಕಂತಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಕೂಡ ಲಭ್ಯವಾಗಲಿದೆ. ಇಲ್ಲಿನ ಕಡಲತೀರ ವಿಶಾಲವಾಗಿದ್ದು, ಅಚ್ಚ ಹಸಿರಿನ ಸ್ವಚ್ಛ ಪರಿಸರ ಹಾಗೂ ಮೂಲಭೂತ ಸೌಲಭ್ಯಗಳನ್ನೊಳಗೊಂಡಿದೆ.

Udupi; ಮಲ್ಪೆ ತೊಟ್ಟಂನಲ್ಲಿ ದಡಕ್ಕೆ ಬಂದು ಬಿದ್ದ ಲಕ್ಷಾಂತರ ಬೂತಾಯಿ ಮೀನು!

ಡೆನ್ಮಾರ್ಕ್ನ ಪರಿಸರ ಶಿಕ್ಷಣ ಪ್ರತಿಷ್ಠಾನ ಈ ಬ್ಲ್ಯೂ ಫ್ಲ್ಯಾಗ್‌ ಮಾನ್ಯತೆ ನೀಡಿದೆ. ಕಡಲ ತೀರದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೀಚ್‌ನ ಸ್ಥಿತಿಯನ್ನು ಆಧರಿಸಿ ಬ್ಲ್ಯೂ ಫ್ಲ್ಯಾಗ್‌ ಪ್ರಮಾಣಪತ್ರ ನೀಡಲಾಗುತ್ತದೆ. ಇಲ್ಲಿನ ಕಡಲ ತೀರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿಯ ವ್ಯವಸ್ಥೆ ಇದೆ. ಮುಖ್ಯವಾಗಿ ಕಡಲ ತೀರದ ಸ್ವಚ್ಛತೆ ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಒಳಗೊಂಡು ವಿನೂತನ ಮಾದರಿಯ ವ್ಯವಸ್ಥೆಯನ್ನು ಇಲ್ಲಿ ಒದಗಿಸಲಾಗಿದೆ.

click me!