ಬಾರ್‌ ಮೇಲೆ ಸಿಸಿಬಿ ದಾಳಿ : 74 ಮಹಿಳೆಯರ ರಕ್ಷಣೆ

Published : Jun 30, 2019, 09:03 AM IST
ಬಾರ್‌ ಮೇಲೆ ಸಿಸಿಬಿ ದಾಳಿ :  74 ಮಹಿಳೆಯರ ರಕ್ಷಣೆ

ಸಾರಾಂಶ

ಬೆಂಗಳೂರಿನ ಬಾರ್ ಮೇಲೆ ದಾಳಿ ಮಾಡುವ ಮೂಲಕ ಸಿಸಿಬಿ ಪೊಲೀಸರು 70ಕ್ಕೂ ಅಧಿಕ ಮಹಿಳೆಯರನ್ನು ರಕ್ಷಿಸಿದ್ದಾರೆ. 

ಬೆಂಗಳೂರು [ಜೂ.30] :  ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ದೊಮ್ಮಲೂರು ರಿಂಗ್‌ ರಸ್ತೆಯಲ್ಲಿರುವ ‘ಚೀಫ್‌ ಇನ್‌ ರೆಗ್ನಿಸಿ’ ಬಾರ್‌ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು, 74 ಮಹಿಳೆಯರನ್ನು ರಕ್ಷಿಸಿದ್ದಾರೆ.

ಬಾರ್‌ ಮ್ಯಾನೇಜರ್‌ ದಿನೇಶ್‌, ಕ್ಯಾಶಿಯರ್‌ ದಿನೇಶ್‌ ಕುಮಾರ್‌, ರಿಯಾಜ್‌ವುದ್ದೀನ್‌, ಪ್ರಕಾಶ್‌ ದತ್‌ ಹಾಗೂ ಜೋಷಿ ಹಾಗೂ 48 ಗ್ರಾಹಕರು ಸೇರಿದಂತೆ 53 ಜನರು ಸೆರೆಯಾಗಿದ್ದು, ಆರೋಪಿಗಳಿಂದ 1.04 ಲಕ್ಷ ನಗದು ಜಪ್ತಿಯಾಗಿದೆ. ಈ ಸಂದರ್ಭದಲ್ಲಿ 74 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ದಿನಗಳಿಂದ ಈ ಬಾರ್‌ನಲ್ಲಿ ಕಾನೂನು ಬಾಹಿರವಾಗಿ ಮಹಿಳೆಯರನ್ನು ಇಟ್ಟಿಕೊಂಡು ಡ್ಯಾನ್ಸ್‌ ಬಾರ್‌ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಶುಕ್ರವಾರ ರಾತ್ರಿ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?