ಮಂಗಳೂರು ಎಂಆರ್‌ಪಿಎಲ್ ನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಭೂಗತ ಇಂಧನ ಸಂಪರ್ಕದ ಯೋಜನೆ!

Published : May 22, 2026, 06:37 PM IST
Bengaluru Airport Jet Fuel

ಸಾರಾಂಶ

ಮಂಗಳೂರು ರಿಫೈನರಿ ಅಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್), ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಮಾನ ಇಂಧನ (ATF) ಪೂರೈಸಲು ಹೊಸ ಪೈಪ್‌ಲೈನ್ ನಿರ್ಮಿಸಲು ಅನುಮೋದನೆ ಪಡೆದಿದೆ. ದೇವನಗೊಂಡಿಯಿಂದ ವಿಮಾನ ನಿಲ್ದಾಣದವರೆಗೆ ನಿರ್ಮಿಸಲಾಗುವ ಈ ಯೋಜನೆಯು 36 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲಿದೆ.

ಮಂಗಳೂರು: ಮಂಗಳೂರು ರಿಫೈನರಿ ಅಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌(ಎಂಆರ್‌ಪಿಎಲ್) ವತಿಯಿಂದ ಬೆಂಗಳೂರಿಗೆ ವಿಮಾನ ಇಂಧನ (ATF) ಸರಬರಾಜು ಬಲಪಡಿಸುವ ಉದ್ದೇಶದಿಂದ ಮಹತ್ವದ ಯೋಜನೆಗೆ ಅನುಮೋದನೆ ಪಡೆದಿದೆ.

36 ತಿಂಗಳೊಳಗೆ ಪೂರ್ಣಗೊಳಿಸಲು ನಿರ್ಧಾರ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಎಂಆರ್‌ಪಿಎಲ್‌ಗೆ ದೇವನಗೊಂಡಿ ಮಾರ್ಕೆಟಿಂಗ್ ಟರ್ಮಿನಲ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗಿನ ಪ್ರಸ್ತುತ ಕಾಮನ್ ಯೂಸರ್ ಫ್ಯೂಯೆಲ್ ಫಾರ್ಮ್ ಹಾಗೂ ನಿರ್ಮಾಣ ಹಂತದಲ್ಲಿರುವ ಸ್ಯಾಟಲೈಟ್ ಫ್ಯೂಯೆಲ್ ಫಾರ್ಮ್‌ವರೆಗೆ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ATF) ಪೈಪ್‌ಲೈನ್ ನಿರ್ಮಾಣಕ್ಕೆ ಅನುಮತಿ ನೀಡಿದೆ. ಈ ಪೈಪ್‌ಲೈನ್ ವ್ಯವಸ್ಥೆಯ ಸಾಮರ್ಥ್ಯ 2.5 ಮಿಲಿಯನ್ ಮೆಟ್ರಿಕ್ ಟನ್ ಪ್ರತಿವರ್ಷ (MMTPA) ಆಗಿದ್ದು, ಯೋಜನೆಯನ್ನು 36 ತಿಂಗಳೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ವಿಮಾನಯಾನ, ತಂತ್ರಜ್ಞಾನ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ, ಈ ಯೋಜನೆಗೆ ವಿಶೇಷ ಮಹತ್ವ ದೊರೆತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸರಕು ಸಾಗಣೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇಂಧನದ ಬೇಡಿಕೆಯೂ ಹೆಚ್ಚುತ್ತಿದೆ.

ಸಾಗಾಟ ಹೇಗೆ?

ದೊಡ್ಡ ದಾಸರಹಳ್ಳಿ ಪ್ರದೇಶದಲ್ಲಿರುವ ಎಂಆರ್‌ಪಿಎಲ್ ದೇವನಗೊಂಡಿ ಮಾರ್ಕೆಟಿಂಗ್ ಟರ್ಮಿನಲ್ ಈಗಾಗಲೇ ಬೆಂಗಳೂರಿನ ಪ್ರಮುಖ ಇಂಧನ ವಿತರಣಾ ಕೇಂದ್ರವಾಗಿ ರೂಪುಗೊಂಡಿದೆ. ಮಂಗಳೂರಿನ ಎಂಆರ್‌ಪಿಎಲ್ ಘಟಕದಿಂದ PMHBL ಪೈಪ್‌ಲೈನ್ ಮೂಲಕ ಪೆಟ್ರೋಲ್, ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಫ್ಯೂಯೆಲ್‌ಗಳನ್ನು ಇಲ್ಲಿ ಸಾಗಿಸಲಾಗುತ್ತಿದೆ.

ಈ ಕುರಿತು ಎಂಆರ್‌ಪಿಎಲ್ ಯೋಜನಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಚ್‌.ವಿ.ಪ್ರಸಾದ್‌ ಮಾತನಾಡಿ, ಬೆಂಗಳೂರು ವಿಮಾನ ನಿಲ್ದಾಣದ ಹೆಚ್ಚುತ್ತಿರುವ ATF ಬೇಡಿಕೆಯನ್ನು ಪೂರೈಸುವುದರ ಜೊತೆಗೆ, ದೇಶದ ಪ್ರಮುಖ ಬೆಳವಣಿಗೆ ಕೇಂದ್ರಗಳಲ್ಲಿ ಎಂಆರ್‌ಪಿಎಲ್ ತನ್ನ ಹೈಡ್ರೋಕಾರ್ಬನ್ ವ್ಯಾಪ್ತಿಯನ್ನು ವಿಸ್ತರಿಸಲು ಈ ಪೈಪ್‌ಲೈನ್ ಯೋಜನೆ ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು.

PREV
Read more Articles on
click me!

Recommended Stories

ಕಾಕ್ರೋಚ್ ಜನತಾ ಪಾರ್ಟಿಗೆ 'ಲಕ್ಷ್ಮಣರೇಖೆ' ಎಳೆದ ಜಗದೀಶ್ಚಂದ್ರ; ಚಿಕ್ಕಮಗಳೂರಲ್ಲಿ 'ಹಿಟ್ ಜನತಾ ಪಾರ್ಟಿ' ಸ್ಥಾಪನೆ!
ಹುಬ್ಬಳ್ಳಿಯಲ್ಲಿ ಭೀಕರ ಘಟನೆ: ಮೊಬೈಲ್‌ ಚಾರ್ಜ್‌ ಹಾಕಬೇಡ ಎಂದ ಮಾವನನ್ನೇ ಕೊಂದ ಅಳಿಯ!