'ಪಿಂಚಣಿ ಹಣ ಮನೆ ಬಾಗಿಲಿಗೆ'

Kannadaprabha News   | Asianet News
Published : Oct 18, 2020, 03:29 PM ISTUpdated : Oct 18, 2020, 03:32 PM IST
'ಪಿಂಚಣಿ ಹಣ ಮನೆ ಬಾಗಿಲಿಗೆ'

ಸಾರಾಂಶ

ಜನಪರ ಕಾಳಜಿಯಿಂದ   ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ.

ಮಲೇಬೆನ್ನೂರು (ಅ.18): ಪಟ್ಟಣದ ನಾಡ ಕಚೇರಿ ಉಪತಹಸೀಲ್ದಾರ್‌ ಅವರ ಜನಪರ ಕಾಳಜಿಯಿಂದ ಸುತ್ತ ಹಲವು ಗ್ರಾಮಗಳ ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಮನೆ ಬಾಗಿಲಿಗೆ ತಲುಪಿಸಲಾಯಿತು.

ಕೊರೋನಾ ಭಯದಿಂದ ವಿವಿಧ ಪಿಂಚಣಿಗೆ ಅರ್ಜಿ ನೀಡದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ, ಮನಸ್ವಿನಿ ಹಾಗೂ ವೃದ್ಧಾಪ್ಯ ವೇತನ ಯೋಜನೆಗಳ ಹಲವು ಫಲಾನುಭವಿಗಳು ಕಳೆದ ಎರಡು ತಿಂಗಳಲ್ಲಿ ಕಚೇರಿಗೆ 151 ಅರ್ಜಿಗಳನ್ನು ನೀಡಲಾಗಿದೆ. 40 ದಿನಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ವರದಿ ಆಧರಿಸಿ, 80 ಅರ್ಜಿಗಳು ತಿರಸ್ಕೃತವಾಗಿವೆ. 

ವೃದ್ಧಾಪ್ಯ ವೇತನ ಬಂದ್‌ : ಸರ್ಕಾರಕ್ಕೆ ನೋಟಿಸ್‌ ...

171 ಅರ್ಜಿಗಳಿಗೆ ಅರ್ಹತೆ ಪಡೆದಿದ್ದು, ಮಲೇಬೆನ್ನೂರು, ಧುಳೆಹೊಳೆ, ಜಿಗಳಿ, ಸಿರಿಗೆರೆ, ಗುಳದಹಳ್ಳಿ, ಹರಳಹಳ್ಳಿ, ಉಕ್ಕಡಗಾತ್ರಿ, ವಾಸನ, ಹಾಲಿವಾಣ, ಕುಂಬಳೂರು, ಕೊಕ್ಕನೂರು, ಬಿಳಸನೂರು, ಕುಣೆಬೆಳಕೆರೆ ಮತ್ತು ಎಳೆಹೊಳೆ ಗ್ರಾಮಗಳ ಒಟ್ಟು 171 ಫಲಾನುಭವಿಗಳಿಗೆ ವಿವಿಧ ಮಂಜೂರಾತಿ ಪತ್ರಗಳನ್ನು ಅಧಿಕಾರಿಗಳು ಮನೆಗೆ ತಲುಪಿಸಿ ಬಡವರ ಬಾಳಿಗೆ ಬೆಳಕಾಗಿದ್ದಾರೆ.

ರಾಜಸ್ವ ನಿರೀಕ್ಷಕ ಸಮೀರ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀಧರ್‌, ಕೊಟ್ರೇಶ್‌, ಬೋರಯ್ಯ, ಸುಬಾನ್‌ ಮತ್ತಿತರರು ನೆರವಾದರು.

PREV
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ