ಕಷ್ಟಕ್ಕೆ ಬಾರದ PM ಮೋದಿ : ಬೆಮಲ್‌ ಕಾಂತರಾಜ್‌

By Kannadaprabha NewsFirst Published Feb 8, 2023, 5:36 AM IST
Highlights

ಕೊರೋನಾ ವೇಳೆ ಆಕ್ಸಿಜನ್‌ ಸಿಗದೆ ನೂರಾರು ಮಂದಿ ಜೀವಕಳೆದುಕೊಂಡರು. ಈ ವೇಳೆ ರಾಜ್ಯಕ್ಕೆ ಭೇಟಿ ನೀಡದ ಮೋದಿಯವರು ಕಳೆದ ಎರಡು ತಿಂಗಳಿನಿಂದ ರಾಜ್ಯಕ್ಕೆ ಭೇಟಿ ನೀಡುತ್ತಿರುವದರಲ್ಲಿ ಅರ್ಥವೇ ಇಲ್ಲ ಎಂದು ಮಾಜಿ ವಿಧಾನಪರಿಷತ್‌ ನ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡರಾದ ಬೆಮಲ್‌ ಕಾಂತರಾಜ್‌ ಅವರು ಹೇಳಿದರು

 ತುರುವೇಕೆರೆ:  ಕೊರೋನಾ ವೇಳೆ ಆಕ್ಸಿಜನ್‌ ಸಿಗದೆ ನೂರಾರು ಮಂದಿ ಜೀವಕಳೆದುಕೊಂಡರು. ಈ ವೇಳೆ ರಾಜ್ಯಕ್ಕೆ ಭೇಟಿ ನೀಡದ ಮೋದಿಯವರು ಕಳೆದ ಎರಡು ತಿಂಗಳಿನಿಂದ ರಾಜ್ಯಕ್ಕೆ ಭೇಟಿ ನೀಡುತ್ತಿರುವದರಲ್ಲಿ ಅರ್ಥವೇ ಇಲ್ಲ ಎಂದು ಮಾಜಿ ವಿಧಾನಪರಿಷತ್‌ ನ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡರಾದ ಬೆಮಲ್‌ ಕಾಂತರಾಜ್‌ ಅವರು ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇನ್ನು ಕೆಲವು ದಿನಗಳಲ್ಲಿ ರಾಜ್ಯದ ಗೆ ಚುನಾವಣೆ ಬರಲಿದೆ. ಈಗಾಗಲೇ ಜನರ ವಿಶ್ವಾಸ ಕಳೆದುಕೊಂಡಿರುವ ರಾಜ್ಯ ಸರ್ಕಾರ ಪುನಃ ಸರ್ಕಾರ ರಚನೆಗೆ ಇಲ್ಲದ ಕಸರತ್ತು ಮಾಡುತ್ತಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತಕ್ಕೆ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ಅರಿವಿರುವ ಕಾರಣ ರಾಜ್ಯ ಬಿಜೆಪಿಯವರು ನರೇಂದ್ರ ಮೋದಿ ಮತ್ತು ಅಮಿತ್‌ ಶಾ ರನ್ನು ಹತ್ತು ಹದಿನೈದು ದಿನಕ್ಕೆ ಒಮ್ಮೆ ಕರೆಸಿಕೊಳ್ಳುತ್ತಿದ್ದಾರೆ ಎಂದು ಬೆಮಲ್‌ ಕಾಂತರಾಜ್‌ ವ್ಯಂಗ್ಯವಾಡಿದರು.

ಮೋದಿ ಅಥವಾ ಅಮಿತಾ ಶಾ ಅವರು ನೂರು ಸಾರಿ ಬಂದರೂ ಕಾಂಗ್ರೆಸ್‌ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸರ್ಕಾರದ ಹಣದಲ್ಲಿ ಬಿಜೆಪಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಜನರ ತೆರಿಗೆ ಹಣದಲ್ಲಿ ಮೋಜು ಮಾಡುತ್ತಿದೆ ಎಂದು ದೂರಿದರು.

ರೈತರ ಮಕ್ಕಳೆಂದು ಬೊಬ್ಬೆ ಹೊಡೆಯುವ ಜೆಡಿಎಸ್‌ ನ ಹೆಚ್‌.ಡಿ.ದೇವೇಗೌಡರ ಕುಟುಂಬದ ಸದಸ್ಯರು ಸರ್ಕಾರ ರಚನೆ ಮಾಡುವಲ್ಲಿ ಕೃಷಿಗೆ ಸಂಬಂಧಿಸಿದ ಯಾವುದೇ ಖಾತೆಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಇಂಧನ, ಲೋಕೋಪಯೋಗಿ, ಗೃಹ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಲಾಭದಾಯಕ ಇಲಾಖೆಗಳನ್ನೇ ತೆಗೆದುಕೊಳ್ಳುತ್ತಾರೆ. ಆದರೂ ಬಾಯಿ ಮಾತಿಗೆ ತಾವು ರೈತರ ಮಕ್ಕಳು ಎಂದು ಹೇಳುತ್ತಾರೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಪಿಎಂಸಿ ಅಧ್ಯಕ್ಷ ಗೋಣಿತುಮಕೂರು ಲಕ್ಷಿತ್ರ್ಮೕಕಾಂತ್‌, ಪಿಎಲ್‌ ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಂ.ಕೆ.ಕೆಂಪರಾಜ್‌, ಸಿಎಸ್‌ ಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಕೆ.ನಾಗೇಶ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಹಲವಾರು ದಲಿತ ಮುಖಂಡರು ಜೆಡಿಎಸ್‌ ಬಿಟ್ಟು  ಕಾಂಗ್ರೆಸ್‌ ಸೇರ್ಪಡೆಗೊಂಡರು.

 ಜಿಲ್ಲೆಯ ಆಳಂದ ಅಸೆಂಬ್ಲಿಯಲ್ಲಿ ಗೆದ್ದು ಬೀಗಲು ಪ್ರಮುಖ ಪಕ್ಷಗಳಿಂದ ಪ್ರಬಲ ಪೈಪೋಟಿ ಶುರು

ಆಳಂದ(ಫೆ.02):  ಜಿಲ್ಲೆಯ ಆಳಂದ ಅಸೆಂಬ್ಲಿಯಲ್ಲಿ ಗೆದ್ದು ಬೀಗಲು ಪ್ರಮುಖ ಪಕ್ಷಗಳಿಂದ ಪ್ರಬಲ ಪೈಪೋಟಿ ಶುರುವಾಗಿದೆ. ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸುವ ಮೂಲಕ ಗೆಲುವಿಗೆ ತಾಲೀಮು ನಡೆಸಿದ್ದಾರೆ. ಬಿಜೆಪಿ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಕಾಂಗ್ರೆಸ್‌ನ ಮುಖಂಡ ಬಿ.ಆರ್‌. ಪಾಟೀಲ ಚುನಾವಣೆಯ ಕಣದ ಹಳೆಯ ಹುಲಿಗಳಾದರೆ, ಈ ಬಾರಿ ಜೆಡಿಎಸ್‌ನಿಂದ ಮಹೇಶ್ವರಿ ವಾಲಿ ಪೈಪೋಟಿಗೆ ಮುಂದಾಗಿದ್ದಾರೆ.

ಮತ್ತೊಂದಡೆ ತೆರೆಮೆರೆಯಲ್ಲಿ ಎನ್‌ಸಿಪಿಯಿಂದ ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಪೂಜಾ ಅವರ ಪತಿ ರಮೇಶ ಲೋಹಾರ ಅವರು ಎನ್‌ಸಿಪಿಯ ವರಿಷ್ಠ ನಾಯಕ ಶರತ ಪವಾರ ದೆಹಲಿಯ ನಿವಾಸದಲ್ಲಿ ಮಂಗಳವಾರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿಪಿಐನ ಮುಖಂಡ ಮೌಲಾ ಮುಲ್ಲಾ ಸೇರಿದಂತೆ ಇನ್ನೂಳಿದ ಪಕ್ಷಗಳ ಅಭ್ಯರ್ಥಿಗಳು ಸಹ ಕಣದಲ್ಲಿ ಸ್ಪರ್ಧೆಗೆ ನಿಂತುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

click me!