ಬೇಲೂರಿನ ಚನ್ನಕೇಶವ ದೇಗುಲದ ಬಾಗಿಲು ಬಂದ್

Suvarna News   | Asianet News
Published : Dec 25, 2019, 10:56 AM IST
ಬೇಲೂರಿನ ಚನ್ನಕೇಶವ ದೇಗುಲದ ಬಾಗಿಲು ಬಂದ್

ಸಾರಾಂಶ

ಹಾಸನದ ಚನ್ನಕೇಶವ ದೇಗುಲದ ಬಾಗಿಲು ಬಂದ್ ಮಾಡಲಾಗುತ್ತದೆ. ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ದೇಗುಲದ ಬಾಗಿಲು ಮುಚ್ಚಲಾಗುತ್ತಿದೆ

ಹಾಸನ [ಡಿ.25]: ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಪೂಜಾ ಕಾರ್ಯ ಬಂದ್ ಆಗಲಿದೆ. 

ಗುರುವಾರ 8 ಗಂಟೆಗೆ ಗ್ರಹಣ ಸಂಭವಿಸಲಿದ್ದು, ಈ ನಿಟ್ಟಿನಲ್ಲಿ ಹಾಸನ ಜಿಲ್ಲೆಯ ಐತಿಹಾಸಿಕ ಬೇಲೂರಿನ ಚನ್ನಕೇಶವ ದೇವಾಲಯವನ್ನು ಬಂದ್ ಮಾಡಲಾಗುತ್ತದೆ. 

ಮುಂಜಾನೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇಗುಲದ ಬಾಗಿಲನ್ನು ತೆರೆಯುವುದಿಲ್ಲ. ಧನುರ್ಮಾಸವಾಗಿರುವುದರಿಂದ  ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯ ನಡೆಯುತ್ತದೆ. ಆದರೆ ಗ್ರಹಣದ ದಿನವಾದ ನಾಳೆ [ಗುರುವಾರ ] ಯಾವುದೇ ಪೂಜಾ ಕಾರ್ಯ ನಡೆಯುವುದಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಧ್ಯಾಹ್ನದ ನಂತರ ಸಿದ್ಧಿಪುಣ್ಯ, ಪಂಚದ್ರವ್ಯ ಪ್ರೋಕ್ಷಣ, ಅಭಿಷೇಕ ಶುದ್ಧಿ ಹಾಗೂ ಮಹಾ ನೈವೇದ್ಯಗಳು ನಡೆಯಲಿವೆ. ಬಳಿಕ ಭಕ್ತರಿಗೆ ದರ್ಶನ ನೀಡಲಾಗುತ್ತದೆ ಎಂದು ಚನ್ನಕೇಶವ ದೇವಾಲಯದ ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ಭಟ್ ಹೇಳಿದ್ದಾರೆ. 

ಕಂಕಣ ಸೂರ್ಯ ಗ್ರಹಣ ಹಿನ್ನೆಲೆ ಎಲ್ಲಾ ಪ್ರಮುಖ ದೇವಾಲಯಗಳೂ ಕೂಡ ಬಾಗಿಲು ಮುಚ್ಚಲಿವೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು