ಬಳ್ಳಾರಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ, ರಾಜ್ಯದ ಅತಿದೊಡ್ಡ ಕೋರ್ಟ್

Published : Jun 26, 2022, 08:08 PM IST
ಬಳ್ಳಾರಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ, ರಾಜ್ಯದ ಅತಿದೊಡ್ಡ ಕೋರ್ಟ್

ಸಾರಾಂಶ

* ಬಳ್ಳಾರಿ ನೂತನ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ  * ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಂದ ಉದ್ಘಾಟನೆ  * ರಾಜ್ಯದ ಅತಿದೊಡ್ಡ ಕೋರ್ಟ್

ಬಳ್ಳಾರಿ, (ಜೂನ್.26):  ಬಳ್ಳಾರಿ ವಕೀಲರ ಬಹುದಿನಗಳ ‌ಕನಸಿಂದು ನನಸಾಗಿದೆ.‌ ಹೌದು, 121.9 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಜಿ+5 ಮಹಡಿಗಳ ನೂತನ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಲೋಕಾರ್ಪಣೆಗೊಳಿಸಿದರು.

ರಾಜ್ಯದ ಅತಿದೊಡ್ಡ ಕೋರ್ಟ್
ರಾಜ್ಯದ ಅತಿದೊಡ್ಡ ಜಿಲ್ಲಾ ನ್ಯಾಯಾಲಯ ಕಟ್ಟಡ ಇದಾಗಿದ್ದು,  20 ಕೋರ್ಟ್ ಹಾಲ್‍ಗಳು, ಸುಸಜ್ಜಿತ ಕಾನ್ಪರೆನ್ಸ್ ಹಾಲ್ ಸೇರಿದಂತೆ ಸಕಲ ಸೌಲಭ್ಯಗಳನ್ನು ಹೊಂದಿರುವ ಈ ನ್ಯಾಯಾಲಯ ಕಟ್ಟದವು ವಕೀಲರು ಮತ್ತು ಕಕ್ಷಿದಾರರಿಗೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ನ್ಯಾಯಾಲಯದ ಕಟ್ಟಡ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ನ್ಯಾಯಮೂರ್ತಿ ಗಳಾದ ರಿತುರಾಜ್ ಅವಸ್ಥಿ ಅವರು ಸಲಹೆ ನೀಡಿದರು.

Ballari Drinking Water Crisis ಬಳ್ಳಾರಿ ಜನರಿಗೆ ಕುಡಿಯಲು ಆಂಧ್ರದ  ಫಿಲ್ಟರ್ ನೀರು!

ಬ್ರಿಟಿಷ್ ಕಾಲದ ಕೋರ್ಟ್ ಇತ್ತು
ಬ್ರಿಟಿಷರ ಮದ್ರಾಸ್ ಪ್ರೆಸಿಡೆನ್ಸಿ ಅವಧಿಯಲ್ಲಿ ಬಳ್ಳಾರಿ ಜಿಲ್ಲಾ ನ್ಯಾಯಾಲಯವು 1901ರಲ್ಲಿ ಸ್ಥಾಪಿಸಲ್ಪಟ್ಟು ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ಪರಿಗಣಿಸಿ 2013ರಲ್ಲಿ ಹೊಸ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಅದನ್ನು ಮಾರ್ಪಾಡಿಸಿ 2017ರಲ್ಲಿ ಅನುಮೋದನೆ ನೀಡಲಾಯಿತು. 2017 ನವೆಂಬರ್‌ ದಿಂದ ಕಾಮಗಾರಿ ಆರಂಭವಾಗಿ ಇದೀಗ ಸುಂದರ ಕಟ್ಟಡ ತಲೆ ಎತ್ತಿ ನಿಂತಿದೆ.

ನ್ಯಾಯಾಂಗ ವ್ಯವಸ್ಥೆಗೆ ಬೇಕಾದ ಸೌಕರ್ಯ
ನ್ಯಾಯಾಂಗ ವ್ಯವಸ್ಥೆಗೆ ಬೇಕಾದ ಸಮರ್ಪಕ ಮೂಲಸೌಕರ್ಯಗಳು ಹಾಗೂ ಸೌಕರ್ಯಗಳನ್ನು ಒದಗಿಸುವುದು ಸರಕಾರದ ಜವಾಬ್ದಾರಿ ಮತ್ತು ಸಂವಿಧಾನತ್ಮಕ ಹೊಣೆಗಾರಿಕೆಯಾಗಿದೆ. ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ನ್ಯಾಯಾಂಗ ಇಲಾಖೆಯ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಬೇಕಿದೆ ಸರ್ಕಾರಕ್ಕೆ ಎಂದು ಹೇಳಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನವಿ ಮಾಡಿದ್ರು.

 ಇನ್ನೂ ಇದೇ ವೇಳೆ ನ್ಯಾಯಲಯ ದಲ್ಲಿ ವಕೀಲರ ಸಂಘದ ವಿವಿಧ ಬೇಡಿಕೆಗಳ ಕುರಿತಂತೆ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯರಾದ ಕೆ.ಕೋಟೇಶ್ವರರಾವ್ ಅವರು ಪ್ರಸ್ತಾಪಿಸಿದ್ರು. ಅಲ್ಲದೇ ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಹಾಗೂ ಹೈಕೋರ್ಟ್ ನ್ಯಾ. ಆರ್.ದೇವದಾಸ್ ಹಾಗೂ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ಮಾತನಾಡಿ ಹಲವು ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಶ್ರಮದಿಂದ ಈ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ,ಕೋರ್ಟ್ ಹಾಲ್‍ಗಳು,ಕಾಯುವಿಕೆ ಕೊಠಡಿ,ಕಾನ್ಪರೆನ್ಸ್ ಹಾಲ್ ಸೇರಿದಂತೆ ಸಕಲ ಸೌಲಭ್ಯಗಳು ಈ ಕಟ್ಟಡ ಹೊಂದಿದೆ ಎಂದು ಹೇಳಿದರು.

ಸಾರ್ವಜನಿಕ ಆಸ್ತಿಗಳನ್ನು ಜನರು ಚೆನ್ನಾಗಿ ನಿರ್ವಹಣೆ ಮಾಡುವುದಿಲ್ಲ ಎಂಬುದಕ್ಕೆ ಅಪವಾದ ಎಂಬಂತೆ ಈ ಬೃಹತ್ ಕಟ್ಟಡದ ನಿರ್ವಹಣೆಯನ್ನು ಚೆನ್ನಾಗಿ ಮಾಡಿಕೊಂಡು ಹೋಗಿ ಎಂದರು.

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!