* ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಬಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ
* ಗ್ರಾಮಸ್ಥರ ತಪ್ಪು ಭಾವನೆಯಿಂದ ಲಸಿಕೆ ಹಾಕಿಸಲು ಆರೋಗ್ಯ ಸಿಬ್ಬಂದಿಗಳ ಹರಸಾಹಸ
* ಲಸಿಕೆ ಹಾಕಿಸಿಕೊಳ್ಳಲು ಗ್ರಾಸ್ಥರು ಹಿಂದೇಟು
ಬಳ್ಳಾರಿ, (ಜೂನ್.12): ರಾಜ್ಯದಲ್ಲಿ ಲಸಿಕೆ ತೆಗೆದುಕೊಳ್ಳಲು ಜನರು ಪರದಾಡುತ್ತಿದ್ದಾರೆ. ಇನ್ನು ಕೆಲ ಹಳ್ಳಿಗಳಲ್ಲಿ ಜನರಿಗೆ ಅರಿವು ಇಲ್ಲದ ಕಾರಣ ಲಸಿಕೆ ಬಗ್ಗೆ ಭಯಭೀತರಾಗಿದ್ದಾರೆ.
ಹೌದು... ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಬಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ಮಾಡಿರುವ ಘಟನೆ ಸಂಡೂರು ತಾಲೂಕಿನ ಹಳೆದರೋಜಿ, ಕುರೇಕುಪ್ಪ ಗ್ರಾಮದಲ್ಲಿ ನಡೆದಿದೆ.
undefined
ಲಸಿಕೆ ಹಾಕಿಸಿದ ಅತ್ಯಂತ ಹಿರಿಯ ವ್ಯಕ್ತಿ; ಯುವಕರ ನಾಚಿಸಿದ 125 ವರ್ಷದ ಸ್ವಾಮೀಜಿ!
ವ್ಯಾಕ್ಸಿನ್ ಹಾಕಿಸಿಕೊಂಡರೆ ನಮ್ಮ ಪುರುಷತ್ವ ಹೋಗುತ್ತದೆ, ಜ್ವರ ಬರುತ್ತದೆ, ಕೈ ಕಾಲು ಸ್ವಾದೀನ ಕಳೆದುಕೊಳುತ್ತದೆ ಎಂದು ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಬಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ.
ನಮಗೆ ಏನಾದರು ಆಗಲಿ ಪರವಾಗಿಲ್ಲ. ನೀವು ನಮ್ಮನ್ನು ಬಂದು ಕರೆಯಬೇಡಿ. ನಾವು ಸತ್ತರು ನಡೆಯುತ್ತೆ ಆದ್ರೆ ಲಸಿಕೆ ಬೇಡ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹೇಳಿದರು. ಇದರಿಂದ ಆರೋಗ್ಯ ಸಿಬ್ಬಂದಿಗಳು, ಗ್ರಾಮಸ್ಥರ ತಪ್ಪು ಭಾವನೆಯಿಂದ ಲಸಿಕೆ ಹಾಕಿಸಲು ಹರಸಾಹಸ ಪಡುತ್ತಿದ್ದಾರೆ.