ಬೆಳವಿ ಸಿದ್ಧಾರೂಢ ಮಠದ ಮೃತ್ಯುಂಜಯ ಮಹಾಸ್ವಾಮೀಜಿ ಲಿಂಗೈಕ್ಯ, ಶೋಕಸಾಗರದಲ್ಲಿ ಹುಕ್ಕೇರಿ ಭಾಗದ ಭಕ್ತರು

Published : Oct 10, 2026, 10:21 AM IST
Belavi Siddharoodha Mutt Seer Mrutyunjaya Swamiji

ಸಾರಾಂಶ

ಹುಕ್ಕೇರಿ ತಾಲೂಕಿನ ಬೆಳವಿ ಹಾಗೂ ಶಿರಹಟ್ಟಿ ಬಿ.ಕೆ. ಮಠದ ಪೀಠಾಧಿಪತಿ ಮೃತ್ಯುಂಜಯ ಮಹಾಸ್ವಾಮೀಜಿ ಅವರು ಶುಕ್ರವಾರ ಲಿಂಗೈಕ್ಯರಾಗಿದ್ದಾರೆ. ನಾಡಿನ ಹಲವು ಮಠಾಧೀಶರು ಹಾಗೂ ಅಪಾರ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಬೆಳವಿ ಮಠದ ತೋಟದಲ್ಲಿ ಇಂಚಗೇರಿ ಮಠದ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿತು.

ಬೆಳಗಾವಿ: ಹುಕ್ಕೇರಿ ತಾಲೂಕಿನ ಬೆಳವಿ ಹಾಗೂ ಶಿರಹಟ್ಟಿ ಬಿ.ಕೆ. ಮತ್ತು ಮಹಾರಾಷ್ಟ್ರದ ಸಿದ್ಧಾರೂಢ ಮಠದ ಪೀಠಾಧಿಪತಿ ಮೃತ್ಯುಂಜಯ ಮಹಾಸ್ವಾಮೀಜಿ ಅವರು ಶುಕ್ರವಾರ ಲಿಂಗೈಕ್ಯರಾದರು.

ಸಿದ್ಧಾರೂಢ ಮಠದ ಪರಂಪರೆಯೊಂದಿಗೆ ಗುರುತಿಸಿಕೊಂಡಿದ್ದ ಮೃತ್ಯುಂಜಯ ಮಹಾಸ್ವಾಮೀಜಿ ಅವರು ಪುರಾಣ, ಪ್ರವಚನ ಹಾಗೂ ದೇವಿ ಪಾರಾಯಣದ ಮೂಲಕ ಈ ಭಾಗದಲ್ಲಿ ಅಪಾರ ಭಕ್ತಸಮೂಹವನ್ನು ಸಂಪಾದಿಸಿದ್ದರು. ಶರಣ ಸಂಸ್ಕೃತಿಯ ಸಂತ ಹಾಗೂ ಅದರ ಅಪ್ರತಿಮ ಪ್ರತಿಪಾದಕರಾಗಿದ್ದ ಶ್ರೀಗಳು, ನೆರೆಯ ಮಹಾರಾಷ್ಟ್ರದ ಗಡಿ ಭಾಗದಲ್ಲಿಯೂ ಅಪಾರ ಭಕ್ತರನ್ನು ಹೊಂದಿದ್ದರು. ಶ್ರೀಗಳಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಅಂತಿಮ ದರ್ಶನ

ನಿಡಸೋಸಿಯ ಸಿದ್ಧ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯರನಾಳದ ಬ್ರಹ್ಮಾನಂದ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ ಹಾಗೂ ಘಟಪ್ರಭಾದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಹರಗುರು ಚರಮೂರ್ತಿಗಳು ಶ್ರೀಗಳ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಅಂತ್ಯಕ್ರಿಯೆ

ಬೆಳವಿ ಮಠದ ತೋಟದಲ್ಲಿ ನಡೆದ ಮೃತ್ಯುಂಜಯ ಮಹಾಸ್ವಾಮೀಜಿ ಅವರ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಇಂಚಗೇರಿ ಮಠದ ಸಂಪ್ರದಾಯದಂತೆ ವೀಣಾದಾಸ ಬೋಧನೆ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಿದವು. ಶ್ರೀಗಳ ಅಗಲಿಕೆಯಿಂದ ಭಕ್ತವೃಂದದಲ್ಲಿ ಶೋಕದ ಛಾಯೆ ಆವರಿಸಿದೆ.

PREV
Read more Articles on
click me!

Recommended Stories

ಪ್ರಜ್ವಲ್ ರೇವಣ್ಣ ಬೆಳಗಾವಿ ಜೈಲಿಗೆ ಶಿಫ್ಟ್ ಇಲ್ಲ! ಆ ಒಂದು ಕಾರಣಕ್ಕೆ ಸದ್ಯಕ್ಕೆ ಬಚಾವ್, ಕೋರ್ಟ್ ಮೊರೆ ಹೋದ ಲಾಯರ್
14 ವರ್ಷದಿಂದ ಬಿಡಿಎಯಲ್ಲಿ ಡೆಪ್ಯುಟೇಷನ್‌ನಲ್ಲಿ ಕೆಲಸ ಮಾಡ್ತಿದ್ದ ಇಂಜಿನಿಯರ್‌ಅನ್ನು ಅಕ್ರಮ ಸೈಟ್‌ ಸ್ಕ್ಯಾಮ್‌ ಬೆನ್ನಲ್ಲೇ ವಾಪಾಸ್‌ ಕರೆಸಿಕೊಂಡ ಸರ್ಕಾರ