ಬೆಳಗಾವಿ:  ಅಕ್ಕನ‌ ಮದುವೆಯ ಸಂಭ್ರಮದಲ್ಲಿದ್ದ ತಂಗಿ ಅಪಘಾತಕ್ಕೆ ಬಲಿ

Published : Nov 27, 2019, 11:46 PM ISTUpdated : Nov 27, 2019, 11:53 PM IST
ಬೆಳಗಾವಿ:  ಅಕ್ಕನ‌ ಮದುವೆಯ ಸಂಭ್ರಮದಲ್ಲಿದ್ದ ತಂಗಿ ಅಪಘಾತಕ್ಕೆ ಬಲಿ

ಸಾರಾಂಶ

 ಅಕ್ಕನ‌ ಮದುವೆಯ ಸಂಭ್ರಮದಲ್ಲಿದ್ದ ತಂಗಿ ಅಪಘಾತದಲ್ಲಿ ದುರ್ಮರಣ/ ಅಕ್ಕನ ಮದುವೆ ಸಂಭ್ರಮವಿರಬೇಕಿದ್ದ ಮನೆಯಲ್ಲಿ ಸೂತಕ/ ದ್ವಿಚಕ್ರ ವಾಹನ ಡಿಕ್ಕಿಯಲ್ಲಿ ಪ್ರಾಣ ಕಳೆದುಕೊಂಡ ಯುವತಿ

 ಬೆಳಗಾವಿ(ನ. 27)  ಪರೀಕ್ಷೆ ಮುಗಿಸಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಯುವತಿ ಬೈಕ್‌ಗೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟ‌‌ನೆ ನಗರದ ಹೊರವಲಯ ಪೀರನವಾಡಿ ಕ್ರಾಸ್ ಬಳಿ ಸಂಭವಿಸಿದೆ.

ನಗರದ ಖಾಸಭಾಗದ ಪ್ರದೇಶದ ಟೀಚರ್ ಕಾಲೋನಿ ಸ್ವಾತಿ ಗಜಾನನ ವಡೇರ (23) ಮೃತ ಯುವತಿ. ನಗರದ ಖಾಸಗಿ ಕಾಲೇಜಿನಲ್ಲಿ  ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ ವಿಭಾಗದಲ್ಲಿ ಏಳನೇ ಸೆಮಿಸ್ಟರನಲ್ಲಿ ವ್ಯಾಸಂಗ ಮಾಡುತ್ತಿದ್ದ ಸ್ವಾತಿ ಇಂದು ಮಧ್ಯಾಹ್ನ ಕಾಲೇಜಿಗೆ ಹೋಗಿ ಪರೀಕ್ಷೆಗೆ ಹಾಜರಾಗಿದ್ದಳು. ಬಳಿಕ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ  ಪೀರನವಾಡಿ ಕ್ರಾಸ್ ಬಳಿ   ಎದುರಿಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಸ್ವಾತಿ ಗಂಭೀರವಾಗಿ ಗಾಯಗೊಂಡಿದ್ದಳು.

ದಿನಪತ್ರಿಕೆಯ ವರದಿಗಾರ ರಸ್ತೆ ಅಪಘಾತಕ್ಕೆ ಬಲಿ

ತಕ್ಷಣ ಸ್ಥಳೀಯರು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಮೃತ ಸ್ವಾತಿಯ ಅಕ್ಕ ಮಾಧುರಿ  ವಿವಾಹ ನವೆಂಬರ್ 28 ರಂದು ನಿಶ್ಚಯವಾಗಿತ್ತು‌. ಮದುವೆ  ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಂಬಂಧಿಕರು ಸ್ವಾತಿ ಮನೆಗೆ ಆಗಮಿಸಿದ್ದರು. ಆದರೆ ಸ್ವಾತಿ ಸಾವಿನಿಂದಾಗಿ ಸೂತಕದ ಛಾಯೆ ಆವರಿಸಿದೆ.

PREV
click me!

Recommended Stories

Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!
ಕೆಕೆಆರ್‌ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್ ಸ್ಥಿತಿ ಗಂಭೀರ!