ಬೆಳಗಾವಿ ಯೋಧ ಒಡಿಶಾ ಲಾಡ್ಜ್‌ನಲ್ಲಿ ನೇಣಿಗೆ ಶರಣು

Kannadaprabha News   | Asianet News
Published : Jan 10, 2020, 08:52 AM IST
ಬೆಳಗಾವಿ ಯೋಧ ಒಡಿಶಾ ಲಾಡ್ಜ್‌ನಲ್ಲಿ ನೇಣಿಗೆ ಶರಣು

ಸಾರಾಂಶ

ಒಡಿಶಾದ ಲಾಡ್ಜ್ ಒಂದರಲ್ಲಿ ಬೆಳಗಾವಿಯ ಯೋಧ ರೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸಿಕ್ಕಿಂನ 44 ಫೀಲ್ಡ್‌ ರೆಜಿಮೆಂಟ್‌ನಲ್ಲಿ ಸುಬೇದಾರ ನಾಯಕ ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. 

ಬೈಲಹೊಂಗಲ [ಜ.10]: ಬೆಳಗಾವಿ ಮೂಲದ ಸೈನಿಕರೊಬ್ಬರು ಒಡಿಶಾದ ಲಾಡ್ಜ್‌ ಒಂದರಲ್ಲಿ ಟವೆಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ನಿವಾಸಿ, ಯೋಧ ಸೋಮಪ್ಪ ಸಿದ್ದಪ್ಪ ವಾರಿ (44) ಆತ್ಮಹತ್ಯೆ ಮಾಡಿಕೊಂಡವರು. ಸಿಕ್ಕಿಂನ 44 ಫೀಲ್ಡ್‌ ರೆಜಿಮೆಂಟ್‌ನಲ್ಲಿ ಸುಬೇದಾರ ನಾಯಕ ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. 

ಒಡಿಶಾದ ಖಾಸಗಿ ಲಾಡ್ಜ್‌ನಲ್ಲಿ ಜ.2ರಂದು ರೂಂ ಬುಕ್‌ ಮಾಡಿಕೊಂಡು ವಾಸವಾಗಿದ್ದರು. ಜ.8ರಂದು ರೂಂ ಸಿಬ್ಬಂದಿ ಸ್ವಚ್ಛಗೊಳಿಸುವ ಸಂಬಂಧ ಬಾಗಿಲು ತರೆದಾಗ ಯೋಧ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.

ನಗರದಲ್ಲಿದ್ದ ಜಿಹಾದಿಗಳ ಪತ್ತೆಗೆ ಸಿಸಿಬಿ ಬಲೆ...

ಈ ಬಗ್ಗೆ ಒಡಿಶಾ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ನೇಸರಗಿ ಪೊಲೀಸ್‌ ಠಾಣೆ ಮೂಲಗಳಿಂದ ತಿಳಿದು ಬಂದಿದೆ.

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ