ಬೆಳಗಾವಿಯ 'ಸತ್ತಗುರು' ಬಟ್ಟೆ ಅಂಗಡಿ ನಾಮಫಲಕ ಫುಲ್ ವೈರಲ್; ಕೊನೆಗೂ 'ಸತ್‌ಗುರು' ಎಂದು ಬದಲಿಸಿದ ಮಾಲೀಕ!

By Sathish Kumar KH  |  First Published Apr 1, 2024, 3:55 PM IST

ಬೆಳಗಾವಿಯಲ್ಲಿ ಬಟ್ಟೆ ಅಂಗಡಿಗೆ 'ಸತ್ತಗುರು' ಎಂದು ಫಲಕ ಅಳವಡಿಕೆ ಮಾಡಿದ್ದ ಮಾಲೀಕ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ನಾಮಫಲಕವನ್ನು ಬದಲಿಸಿ 'ಸತ್‌ಗುರು' ಎಂದು ಬದಲಿಸಿದ್ದಾನೆ.


ಬೆಳಗಾವಿ (ಏ.01): ಸರ್ಕಾರದಿಂದ ರಾಜ್ಯದ ಎಲ್ಲ ಅಂಗಡಿ-ಮುಂಗಟ್ಟು ಹಾಗೂ ಮಳಿಗೆಗಳ ಮುಂದೆ ಕಡ್ಡಾಯವಾಗಿ ದೊಡ್ಡದಾಗಿ ಕನ್ನಡದ ನಾಮಫಲಕ ಅಳವಡಿಕೆ ಮಾಡಬೇಕು ಎಂದಾಗ ಅಂಗಡಿ ಮಾಲೀಕರು ಕನ್ನಡದ ಕಗ್ಗೊಲೆಯನ್ನೇ ಮಾಡಿದ್ದರು. ಹೀಗಾಗಿ, ಬೆಳಗಾವಿಯ ಸತ್‌ಗುರು ಬಟ್ಟೆ ಅಂಗಡಿಗೆ ಸತ್ತಗುರು ಎಂದು ಫಲಕವನ್ನು ಅಳವಡಿಕೆ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಅಂಗಡಿ ಮಾಲೀಕ ಫಲಕವನ್ನು ಬದಲಿಸಿದ್ದಾರೆ.

ರಾಜ್ಯದಾದ್ಯಂತ ಎಲ್ಲ ಅಂಗಡಿ, ಮುಂಗಟ್ಟು, ವಾಣಿಜ್ಯ ಮಳಿಗೆಗಳು, ಶಾಪಿಂಗ್ ಮಾಲ್‌ಗಳು, ಆಸ್ಪತ್ರೆಗಳು, ಖಾಸಗಿ ಕಚೇರಿ ಹಾಗೂ ಕಂಪನಿಗಳು ನಾಮಪಲಕಗಳನ್ನು ಕಡ್ಡಾಯವಾಗಿ ಶೇ.60 ಪರ್ಸೆಂಟ್ ಕನ್ನಡದ ದೊಡ್ಡ ಅಕ್ಷಗಳಲ್ಲಿ ಬರೆಯಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಯಿತು. ಈ ಆದೇಶ ಪಾಲನೆ ಮಾಡದ ಅಂಗಡಿ, ಮುಂಗಟ್ಟು ಸೇರಿ ಎಲ್ಲ ಮದರಿಯ ವಾಣಿಜ್ಯೋಮಗಳ ಪರವಾನಗಿಯನ್ನು ರದ್ದುಗೊಳಿಸುವುದಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸರ್ಕಾರದಿಂದ ಅನುಮತಿ ನೀಡಲಾಗಿತ್ತು. 

Tap to resize

Latest Videos

ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್.ಪೇಟೆ ವಿರುದ್ಧ ಕೇಸ್; 'ಯಾವಳೇ ನೀನು ಅಲ್ಲಾಡಿಸ್ಕೊಂಡು' ಅನ್ನೋದಾ?

ಹೀಗಾಗಿ, ಅಂಗಡಿ ಮಾಲೀಕರು ಇಂಗ್ಲೀಷ್, ಹಿಂದಿ ಸೇರಿ ವಿವಿಧ ಭಾಷೆಗಳಲ್ಲಿ ದೊಡ್ಡದಾಗಿ ಫಲಕ ಅಳವಡಿಕೆ ಮಾಡಿಸಿದ್ದವರು ಎದ್ದೆನೋ ಬಿದ್ದೆನೋ ಎಂಬಂತೆ ತಮ್ಮ ಅಂಗಡಿಯ ಫಲಕಗಳನ್ನು ದೊಡ್ಡದಾಗಿ ಕನ್ನಡಾಕ್ಷರಗಳಲ್ಲಿ ಬರೆಸಿ ಬೋರ್ಡ್ ಹಾಕಿದ್ದರು. ಆದರೆ, ಅಂಗಡಿಯ ಹೆಸರನ್ನು ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಕನ್ನಡಕ್ಕೆ ಭಾಷಾಂತರ ಮಾಡಿ ಅದರಲ್ಲಿ ತೋರಿಸಲಾದ ಅಕ್ಷರಗಳನ್ನೇ ಬೋರ್ಡ್‌ಗಳಲ್ಲಿ ಮುದ್ರಿಸಿ ಅಳವಡಿಕೆ ಮಾಡಲಾಗಿತ್ತು. ಇದರಿಂದ ಕನ್ನಡದ ಅಕ್ಷರಗಳ ಕಗ್ಗೊಲೆಯೇ ನಡೆದಿತ್ತು. ಮತ್ತೊಂದೆಡೆ, ವಿಭಿನ್ನ ಅರ್ಥಗಳು ಬರುವಂತಹ ಪದಗಳನ್ನು ಬಳಕೆ ಮಾಡಲಾಗಿತ್ತು. 

pic.twitter.com/Arlj9ao92f

— Out of Context Kannada (@OutOfContextKan)

ಅದೇ ರೀತಿ ಬೆಳಗಾವಿಯಲ್ಲಿಯೂ ಕೂಡ ಸತ್‌ಗುರು (SATGURU) ಬಟ್ಟೆ ಅಂಗಡಿಗೆ ಸತ್ತಗುರು ಬಟ್ಟೆ ಅಂಗಡಿ ಎಂದು ಫಲಕ ಅಳವಡಿಕೆ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಎಲ್ಲರೂ ಈ ಕಟ್ಟಡವೆಲ್ಲಿದೆ, ಬಟ್ಟೆ ಅಂಗಡಿ ಎಲ್ಲಿದೆ ಎಂದು ಹುಡುಕಿದ್ದರು. ಆದರೆ, ಇದು ಬೆಳಗಾವಿ ನಗರದ ಬಜಾರ್‌ನಲ್ಲಿದ್ದ ಬಟ್ಟೆ ಅಂಗಡಿಯದ್ದು ಎಂದು ತಿಳಿದ ನಂತರ ಅದನ್ನು ಬದಲಾವಣೆ ಮಾಡುವುದಕ್ಕೆ ಕನ್ನಡಿಗರು ಸೂಚನೆ ನಿಡಿದ್ದರು. ಇದನ್ನು ಅರಿತುಕೊಂಡ ಬಟ್ಟೆ ಅಂಗಡಿ ಮಾಲೀಕ ಸತ್ತಗುರು ಎಂದು ಅಳವಡಿಕೆ ಮಾಡಿದ್ದ ಫಲಕವನ್ನು ತೆರವುಗೊಳಿಸಿ ಸತ್‌ಗುರು ಎಂದು ಬರೆಸಿ ಹೊಸ ಫಲಕವನ್ನು ಅಳವಡಿಕೆ ಮಾಡಿದ್ದಾನೆ.

ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ-ಶೆಟ್ಟರ್; ಮೊದಲು ಮನೆ ಅಡ್ರೆಸ್ ತೋರಿಸಲಿ ಎಂದ ಹೆಬ್ಬಾಳ್ಕರ್

ಇನ್ನು ಸತ್ತಗುರು ಎಂದು ಹಾಕಿಕೊಂಡಿದ್ದ ನಾಮಫಲಕ ತೆರವುಗೊಳಿಸಿ ಹೊಸ ಸತ್‌ಗುರು ಎಂಬುದಾಗಿ ಹೊಸ ಫಲಕ ಅಳವಡಿಕೆ ಮಾಡಿರುವುದನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಬೆಂಗಳೂರಿನಲ್ಲಿಯೂ ಇಂತಹ ಅನೇಕ ತಪ್ಪು ತಪ್ಪಾಗಿರುವ ನಾಮ ಫಲಕಗಳು ಕಮಡುಬರುತ್ತದೆ. ಅದರಲ್ಲಿ ಆವಂತಿಕ ಕಿಯಾ ಮೋಟರ್ಸ್‌ ಕಾರು ಶೋರೂಮ್‌ ಮಾಲೀಕರೂ ಫಜೀತಿಗೆ ಸಿಲುಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದ್ದವು.

click me!