ತನ್ನ ವಿರುದ್ಧ ಜೀವ ಬೆದರಿಕೆ ಆರೋಪ ಕೇಳಿಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್ ದೂರು ನೀಡಿರುವ ರಾಜಕುಮಾರ ಟಾಕಳೆ ನನ್ನ ಗಂಡ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಖಾಸಗಿ ವಿಡಿಯೋ ವೈರಲ್ ಆದ ಬಳಿಕ ಈ ವಿಚಾರ ಬೆಳಕಿಗೆ .
ಬೆಳಗಾವಿ (ಜು.21): ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಹಾಗೂ ನವಶ್ರೀ ನಡುವಿನ ಖಾಸಗಿ ವಿಡಿಯೊ ಮತ್ತು ಫೋಟೋ ವೈರಲ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ರಾಜಕುಮಾರ ಹಾಗೂ ನವ್ಯಶ್ರೀ ಆರೋಪ ಪ್ರತ್ಯಾರೋಪ ಮುಂದುವರಿದಿದ್ದು, ರಾಜಕುಮಾರ ಟಕಾಳೆ ನನ್ನ ಗಂಡ ಎಂದು ನವ್ಯಶ್ರೀ ಹೇಳುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಟಾಕಳೆ, ನಾನು ಆಕೆಯನ್ನು ಮದುವೆ ಆಗಿಲ್ಲ, ಅದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆಕೆ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಕುಮಾರ ಟಾಕಳೆ(Rajakumar Thakale), ಹಿಂದೂ ಮ್ಯಾರೇಜ್ ಆ್ಯಕ್ಟ್ (Hindu marrage act)ಅಡಿಯಲ್ಲಿ ಎರಡನೇ ಮದುವೆ ಆಗಲು ಸಾಧ್ಯವಿಲ್ಲ, ಆಕೆಯನ್ನು ನಾನು ಮದುವೆ ಆಗಿಲ್ಲ, ಆಕೆ ನನ್ನ ಪತ್ನಿಯೂ ಅಲ್ಲ ಎಂದಿದ್ದಾರೆ. ನವ್ಯಶ್ರೀಗೂ, ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದ ನನಗೆ ಆಕೆ ವಿಪರೀತ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದರು. ನಿನ್ನೆ ನನ್ನ ಹೆಂಡತಿ ಮತ್ತು ನನ್ನ ಕುಟುಂಬದ ಸದಸ್ಯರು ನಾವು ನಿನ್ನ ಜತೆಗೆ ಇರುತ್ತೇವೆ, ನೀವು ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ, ನಿನ್ನೆ ಒಂದು ಪ್ರಕರಣವನ್ನು ದಾಖಲಿಸಿದ್ದೇನೆ ಎಂದು ತಿಳಿಸಿದರು.
ಖಾಸಗಿ ವಿಡಿಯೋ ವೈರಲ್, ದೂರು ಕೊಟ್ಟವನೇ ನನ್ನ ಗಂಡ ಎಂದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ
ನಾಲ್ಕು ವರ್ಷಗಳಿಂದಲೂ ನವ್ಯಶ್ರೀ ನನಗೆ ಆಗಾಗ ಮಾನಸಿಕವಾಗಿ ಕಿರುಕುಳ ನೀಡುತ್ತಲೇ ಬಂದಿದ್ದಾರೆ. .50 ಲಕ್ಷ ಹಣಕ್ಕೆ ಅವರು ಬೇಡಿಕೆ ಇಟ್ಟಿದ್ದರು. ಈಗಾಗಲೇ .2 ಲಕ್ಷ ಹಣವನ್ನು ಡಿಡಿ ಮೂಲಕ .3 ಲಕ್ಷ ನಗದು ಮೂಲಕ ಪಡೆದಿದ್ದಾರೆ. ಅದರಲ್ಲೂ 5-6 ತಿಂಗಳಿಂದ ನವ್ಯಶ್ರೀ ಬ್ಲ್ಯಾಕ್‌ಮೇಲ…ಗೆ ಇಳಿದಿದ್ದು, ನಾನು ಆಕೆಯ ಪತಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಂತರ ಕೇವಲ ಹಣಕಾಸಿನ ವ್ಯವಹಾರ ಇದೆ ಎಂದು ಹೇಳಿದ್ದಾರೆ. ಇದಾದ ಬಳಿಕ ಮತ್ತೆ .50 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಿಂದು ವಿವಾಹ ಪದ್ಧತಿಯ ಪ್ರಕಾರ ಎರಡನೇ ಮದುವೆ ಆಗಲು ಅವಕಾಶವಿಲ್ಲ. ನನ್ನ ಮದುವೆ ವಿಚಾರ ತಿಳಿದು ನವ್ಯಶ್ರೀ ಈಗ ನಾನೇ ಅವರ ಪತಿ ಎನ್ನುವ ಮೂಲಕ ಬ್ಲ್ಯಾಕ್‌ಮೇಲ… ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಪತ್ನಿಯ ಸಹಕಾರದಿಂದ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ ಎಂದು ಟಾಕಳೆ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸುತ್ತದೆ ಎಂದು ನಂಬಿದ್ದೇನೆ. ಇಂದಲ್ಲ ನಾಳೆ ಸತ್ಯಾಂಶ ಗೊತ್ತಾಗುತ್ತದೆ. ನಾನೊಬ್ಬ ಸರ್ಕಾರಿ ಅಧಿಕಾರಿ ಆಗಿರುವುದರಿಂದ ಹೆಚ್ಚಿಗೆ ಮಾತನಾಡಲು ಬರುವುದಿಲ್ಲ. ನಾನು ಆಡಿಯೊದಲ್ಲಿ ಎಲ್ಲಿಯೂ ಆಕೆ ನನ್ನ ಹೆಂಡತಿ ಎಂದು ಹೇಳಿಲ್ಲ. ಅವರ ಮನೆಯಲ್ಲಿ ಸಮಸ್ಯೆ ಆಗಿದ್ದರಿಂದ ನಮ್ಮ ಸಮಾಜದ ಹೆಣ್ಣುಮಗಳು ಎಂದು ಒಂದು ಮಾನವೀಯತೆ ದೃಷ್ಟಿಯಿಂದ ನನ್ನ ಮನೆಯಲ್ಲಿ ಇರಲಿ ಎಂದು ಹೇಳಿದ್ದೇನೆ. ಆಕೆಯ ಜೊತೆ ಮೊಬೈಲ…ನಲ್ಲಿ ಮಾತನಾಡುವಾಗ ನನ್ನ ಪತ್ನಿಯೂ ಪಕ್ಕದಲ್ಲಿಯೇ ಇದ್ದಳು. ನನ್ನ ಪತ್ನಿ ಹಾಗೂ ಮಗಳಿಗೂ ಕೂಡ ಇದನ್ನು ತಿಳಿಸಿದ್ದೇನೆ. ನನ್ನ ಹೆಂಡತಿ ಹಾಗೂ ಮಕ್ಕಳು ನನ್ನ ಬೆಂಬಲಕ್ಕೆ ಇದ್ದಾರೆ, ಇಷ್ಟುಸಾಕು ನನಗೆ. ಕಾನೂನು ಮೇಲೆ ನನಗೆ ನಂಬಿಕೆಯಿದೆ. ಹೀಗಾಗಿ ನನಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಟಾಕಳೆ ತಿಳಿಸಿದ್ದಾರೆ.
ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಸಿದ್ದ ಅರೋಪಿಗಳು ಅರೆಸ್ಟ್
ನವ್ಯಶ್ರೀ ಆರಂಭದಲ್ಲಿ ತಿಲಕ್‌ರಾಜ್ ತನ್ನ ಮಾವ ಅಂತಾ ಹೇಳಿಕೊಂಡಿದ್ದರು. ಆಮೇಲೆ ಆತ ಆಕೆಯ ಮಾವ ಅಲ್ಲ, ಫ್ರೆಂಡ್ ಎಂಬುದು ಗೊತ್ತಾಗಿದೆ. ವೀಡಿಯೊ, ಆಡಿಯೊ ಬಗ್ಗೆಯೂ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು. ಸೌಮ್ಯ ಮನುಷ್ಯನಿಗೆ ಅನ್ಯಾಯವಾದರೆ ರಾಕ್ಷಸ ಆಗುತ್ತಾನೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಹಾಗೂ ನ್ಯಾಯ ಪಡೆಯಲು ದೂರು ನೀಡಿದ್ದೇನೆ ಎಂದು ಟಾಕಳೆ ಹೇಳಿದ್ದಾರೆ.