Belagavi: ಎರಡು ಗಂಟೆಯಲ್ಲಿ 15 ಕುರಿಗಳನ್ನು ತಿಂದು ತೇಗಿದ ತೋಳ!

By Sathish Kumar KH  |  First Published Apr 9, 2023, 4:26 PM IST

ಕುರಿಗಳ ಮಾಲೀಕ ನಾಟಕವನ್ನು ನೋಡಲು ಹೋಗಿದ್ದ ವೇಳೆ ಬೆಳ್ಳಂಬೆಳಗ್ಗೆ ಕುರಿಗಳ ಹಿಂಡಿನೊಳಗೆ ಹೊಕ್ಕ ತೋಳವೊಂದು ಕೇವಲ 2 ಗಂಟೆಯೊಳಗೆ 15 ಕುರಿಗಳನ್ನು ತಿಂದು ತೇಗಿದೆ.


ಬೆಳಗಾವಿ (ಏ.09): ಕುರಿಗಳ ಮಾಲೀಕ ನಾಟಕವನ್ನು ನೋಡಲು ಹೋಗಿದ್ದ ವೇಳೆ ಬೆಳ್ಳಂಬೆಳಗ್ಗೆ ಕುರಿಗಳ ಹಿಂಡಿನೊಳಗೆ ಹೊಕ್ಕ ತೋಳವೊಂದು ಕೇವಲ 2 ಗಂಟೆಯೊಳಗೆ 15 ಕುರಿಗಳನ್ನು ತಿಂದು ತೇಗಿದೆ. ಕೆಲವು ಕುರಿಗಳ ಮಾಂಸವನ್ನು ತಿಂದಿದ್ದು, ಉಳಿದ 10ಕ್ಕೂ ಅಧಿಕ ಕುರಿಗಳ ಕತ್ತು ಹಿಸುಕಿ ರಕ್ತವನ್ನು ಮಾತ್ರ ಕುಡಿದು ಸಾಯಿಸಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿದ ತೋಳ ಸುಮಾರು 15ಕ್ಕೂ ಅಧಿಕ ಕುರಿಗಳನ್ನು ಬಲಿಪಡೆದಿದೆ. ಕರೆಪ್ಪ ಖುಬಾನಗೋಳ ಎಂಬುವವರಿಗೆ ಸೇರಿದ್ದ ಕುರಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ. ಗ್ರಾಮದ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ಮನೆಯವರೆಲ್ಲ ನಾಟಕ ನೋಡಲು ತೆರಳಿದ್ದರು. ಈ ವೇಳೆ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿರೋ ತೋಳ ಅಲ್ಲಿಯೇ ಕುರಿಗಳನ್ನು ತಿಂದು ತೇಗಿದೆ.

Tap to resize

Latest Videos

ಅಂತೂ ಇಂತು ಅಂತ್ಯಗೊಂಡ ಅಭ್ಯರ್ಥಿ ಆಯ್ಕೆ ಸಭೆ, ಬಿಜೆಪಿ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

ಜಾತ್ರೆಯಲ್ಲಿ ಭರ್ಜರಿ ಬಾಡೂಟ ಸವಿದ ತೋಳ: ಗ್ರಾಮದಲ್ಲಿ ಲಕ್ಷ್ಮೀದೇವಿ ಜಾತ್ರೆಯ ಇರುವ ಕಾರಣ ಮೂರ್ನಾಲ್ಕು ದಿನಗಳಿಂದ ಗಲಾಟೆ ಜೋರಾಗಿಯೇ ಇತ್ತು. ಆದರೆ, ನಿನ್ನೆ ರಾತ್ರಿ ವೇಳೆ ಗ್ರಾಮದಲ್ಲಿ ನಾಟಕ ಇದ್ದುದರಿಂದ ಮನೆಯವರೆಲ್ಲರೂ ನಾಟಕ ನೋಡಲು ಹೋಗಿದ್ದಾರೆ. ಈ ವೇಳೆ ಒಂದು ಕುರಿಯನ್ನು ಹೊತ್ತುಕೊಂಡು ಹೋಗವುದಾಗಿ ಕುರಿ ಹಿಂಡಿನ ಮೇಲೆ ದಾಳಿ ಮಾಡಿದ ತೋಳಕ್ಕೆ, ಮನೆಯಲ್ಲಿ ಯಾರೂ ಇಲ್ಲದಿರುವ ಹಿನ್ನೆಲೆಯಲ್ಲಿ ಭಾರಿ ಭೋಜನವೇ ಸಿಕ್ಕಂತಾಗಿತ್ತು. ಮನೆ ಮಾಲೀಕರು ನಾಟಕ ನೋಡಿಕೊಂಡು ವಾಪಸ್‌ ಬಂದಾಗ ಸಾವನ್ನಪ್ಪಿದ ಕುರಿಗಳ ಹಿಂಡು ಕಂಡುಬಂದಿದೆ.

ಮಾಲೀಕ ಬರುತ್ತಿದ್ದಂತೆ ಓಡಿದ ತೋಳ:  ಮನೆಯೂ ಕೂಡ ಗ್ರಾಮದ ಹೊರಭಾಗದಲ್ಲಿ ಇದ್ದುದರಿಂದ ಒಂದು ಕಡೆಯಿಂದ ಕುರಿಗಳನ್ನು ತೋಳ ಕೊಂದು ತಿನ್ನುತ್ತಿರುವಾಗ ಉಳಿದ ಕುರಿಗಳು ಕೂಗುತ್ತಾ ಶಬ್ದವನ್ನು ಮಾಡಿವೆ. ಆದರೆ, ಯಾರೊಬ್ಬರೂ ಬಾರದ ಹಿನ್ನೆಲೆಯಲ್ಲಿ ಮತ್ತಷ್ಟು ತೋಳದ ಭೋಜನಕ್ಕೆ ಅಡ್ಡಿ ಮಾಡುವವರೇ ಇಲ್ಲದಂತಾಗಿದೆ. ನಂತರ, ಪೂರ್ಣವಾಗಿ ಬೆಳಗಾದಾಗ ಮನೆಯ ಮಾಲೀಕರು ವಾಪಸ್‌ ಬಂದಿದ್ದು, ತೋಳ ಕುರಿಯಿ ಹಿಂಡಿನಿಂದ ಹೊರಗೆ ಜಿಗಿದು ಹೋಗುವುದನ್ನು ನೋಡಿದ್ದಾರೆ. ತಕ್ಷಣವೇ ಕುರಿ ಹಿಂಡಿನೊಳಗೆ ನೋಡಿದಾಗ 15 ಕುರಿಗಳು ಸತ್ತು ಬಿದ್ದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. 

ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ: ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಸ್ವಿಫ್ಟ್‌ ಕಾರು ಬಳಸಿ ಕೃತ್ಯ..!

ಚಿರತೆ, ಹುಲಿ ದಾಳಿಗೆ ಕಂಗೆಟ್ಟ ಜನರು: ರಾಜ್ಯದಲ್ಲಿ ಈಗಾಗಲೇ ಕಾಡಂಚಿನ ಪ್ರದೇಶಗಳಲ್ಲಿ ಹಸು, ಎಮ್ಮೆ ಹಾಗೂ ಮಾನವರ ಮೇಲೆ ದಾಳಿ ಮಾಡುತ್ತಿರುವ ಹುಲಿ, ಚಿರತೆಗಳ ಹಾವಳಿಗೆ ರೈತರು ಕಂಗೆಟ್ಟಿದ್ದಾರೆ. ಆದರೆ, ಈಗ ರಾಜ್ಯಾದ್ಯಂತ ಕರಡಿ, ತೋಳಗಳ ಹಾವಳಿಯೂ ಹೆಚ್ಚಾಗಿದ್ದು, ಸಾಕು ಪ್ರಾಣಿಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದು ಮತ್ತಷ್ಟು ಸವಾಲಿನ ಕೆಲಸವಾಗಿದೆ. ಇನ್ನು ಬೇಸಿಗೆಯ ಹಿನ್ನೆಲೆಯಲ್ಲಿ ಹಲವು ಕಾಡು ಪ್ರಾಣಿಗಳು ನಾಡಿನತ್ತ ಆಹಾರವನ್ನರಸಿ ಬಂದು ದಾಳಿ ಮಾಡವ ಸಾಧ್ಯತೆ ಹೆಚ್ಚಾಗಿದೆ. 

80 ಕ್ವಿಂಟಾಲ್‌ ಹತ್ತಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು: ಯಾದಗಿರಿ:  ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ಕನಕಪ್ಪ ಎಂಬ ರೈತ ತೋಟದ ಮನೆಯಲ್ಲಿ ಸಂಗ್ರಹಿಸಿದ್ದ 80 ಕ್ವಿಂಟಾಲ್‌ಗೂ ಅಧಿಕ ಹತ್ತಿಗೆ ಬೆಂಕಿ ಇಟ್ಟಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ 80 ಕ್ವಿಂಟಲ್ ಹತ್ತಿ ಸುಟ್ಟು ಕರಕಲಾಗಿದೆ. ಹತ್ತಿ ಜೊತೆ ತೋಟದ ಮನೆಯಲ್ಲಿ ಕಟ್ಟಿದ್ದ ಎರಡು ಕುರಿಗಳು ಸಹ ಸಾವನ್ನಪ್ಪಿವೆ. ಬೆಲೆ ಕುಸಿತ ಆಗಿದ್ದರಿಂದ ತೋಟದ ಮನೆಯಲ್ಲಿ ಹತ್ತಿ ಶೇಖರಿಸಿ ಇಡಲಾಗಿತ್ತು. ಆದರೆ, ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ರೈತ ಆರೋಪ ಮಾಡಿದ್ದಾನೆ. ನಂತರ, ಗ್ರಾಮಸ್ಥರು ಬಂದು ತೋಟದ ಪಂಪ್‌ಸೆಟ್‌ನಲ್ಲಿ ಬರುತ್ತಿದ್ದ ನೀರನ್ನು ಹಿಡಿದು ಬೆಂಕಿ ನಂದಿಸಿದ್ದಾರೆ. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!