ಬೆಳಗಾವಿಯಲ್ಲಿ ಮತ್ತೊಂದು ಲವ್‌ ಜಿಹಾದ್: ಹಿಂದೂ ಮಹಿಳೆಯನ್ನು ಪ್ರೀತಿಸಿ ಮತಾಂತರಕ್ಕೆ ಯತ್ನ; ಮುಸ್ಲಿಂ ದಂಪತಿ ಅರೆಸ್ಟ್

Published : Apr 21, 2024, 03:34 PM IST
ಬೆಳಗಾವಿಯಲ್ಲಿ ಮತ್ತೊಂದು ಲವ್‌ ಜಿಹಾದ್: ಹಿಂದೂ ಮಹಿಳೆಯನ್ನು ಪ್ರೀತಿಸಿ ಮತಾಂತರಕ್ಕೆ ಯತ್ನ; ಮುಸ್ಲಿಂ ದಂಪತಿ ಅರೆಸ್ಟ್

ಸಾರಾಂಶ

ಸವದತ್ತಿ ಬಳಿಯ ಮುನವಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಹಿಂದೂ ಮಹಿಳೆಯನ್ನು ಪ್ರೀತಿಸುವ ನಾಟಕವಾಡಿ ಬೆಳಗಾವಿಗೆ ಕರೆದೊಯ್ದು ಮತಾಂತರ ಮಾಡಲು ಯತ್ನಿಸಿದ ಮುಸ್ಲಿಂ ದಂಪತಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಳಗಾವಿ (ಏ.21): ಬೆಳಗಾವಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಹಿಂದೂ ಸುಂದರ ಮಹಿಳೆಯನ್ನು ಪುಸಲಾಯಸಿ ಆಕೆಯೊಂದಿಗೆ ಪ್ರೀತಿ ನಾಟಕವಾಡಿ, ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಮತಾಂತರಕ್ಕೆ ಒತ್ತಾಯಿಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮುಸ್ಲಿಂ ದಂಪತಿಯನ್ನು ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಹಿಂದೂ ಮಹಿಳೆಯನ್ನು ಪುಸಲಾಯಿಸಿ ಪ್ರೀತಿ ನಾಟಕವಾಡಿ ಮತಾಂತರ ಮಾಡಲು ಮುಂದಾದ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿಯ ಸವದತ್ತಿ ಠಾಣಾ ವ್ಯಾಪ್ತಿಯಲ್ಲಿ ಲವ್ ಜಿಹಾದ್ ಪ್ರಕರಣ ನಡೆದಿದೆ. ಹಿಂದೂ ಮಹಿಳೆಯನ್ನು ಮತಾಂತರ ಮಾಡಲು ಯತ್ನಿಸಿದ್ದ ಗಂಡ ಹೆಂಡತಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಮತಾಂತರ ಮಾಡಲು ಯತ್ನಸಿದ ರಫೀಕ್ ಬೇಪಾರಿ ಹಾಗೂ ಆತನ ಪತ್ನಿ ಕೌಸರ್ ಬೇಪಾರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ್ ಗುಳೇದ ಅವರು ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಮಹಿಳೆಯಿಂದ ಒಟ್ಟು 7 ಜನರ ವಿರುದ್ಧ ಮತಾಂತರದ‌ ಆರೋಪ‌ ಮಾಡಿದ್ದಳು. ಸವದತ್ತಿ ಠಾಣೆಯಲ್ಲಿ ಮಹಿಳೆ  ದೂರು ದಾಖಲಿಸಿದ್ದಳು. ಮಹಿಳೆ ದೂರಿನನ್ವಯ ಸವದತ್ತಿ ಪೊಲೀಸರು ಮುಸ್ಲಿಂ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. ಹಿಂದೂ ಮಹಿಳೆಯ ಖಾಸಗಿ ಕ್ಷಣದ ವಿಡಿಯೋ ವೈರಲ್ ಮಾಡೋದಾಗಿ ಬೆದರಿಸಿ ಮತಾಂತರಕ್ಕೆ ಯತ್ನ ಮಾಡಲಾಗಿದೆ.

ಬೀದರ್‌ನಲ್ಲಿ ಮತ್ತೊಂದು ಲವ್ ಜಿಹಾದ್? ಪ್ರೀತಿ ಹೆಸರಲ್ಲಿ ಅನ್ಯಕೋಮಿನ ಯುವಕನಿಂದ 9ನೇ ತರಗತಿ ಬಾಲಕಿಯ ಅತ್ಯಾಚಾರ

ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು. ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸಬೇಕು. ದಿನಕ್ಕೆ 5 ಸಲ ನಮಾಜ್ ಮಾಡಬೇಕು ಎಂದು ರಫೀಕ್‌ ಬೇಪಾರಿ ಕಂಡಿಷನ್ ಹಾಕಿದ್ದನು. ಇದಕ್ಕೆ ರಫೀಕ್‌ನ ಹೆಂಡತಿ ಮತ್ತು ಅಕ್ಕಪಕ್ಕದ ಮನೆ ರಫೀಕ್ ನೀಡಿದ ಕಿರುಕುಳದ ಬಗ್ಗೆ ತನ್ನ ಪತಿಗೆ ಮಹಿಳೆ ಮಾಹಿತಿ ನೀಡಿದ್ದಳು. ಇದೇ ಏ.18 ರಂದು ಸವದತ್ತಿ ಠಾಣೆಗೆ ದೂರು ನೀಡಿಲಾಗಿದೆ. ಆರೋಪಿಗಳಾದ ಮುನವಳ್ಳಿ ಪಟ್ಟಣದ ಆರೀಫ್ ‌ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈಗ ಇಬ್ಬರನ್ನು ಬಂಧಿಸಿ, ಉಳಿದವರಿಗಾಗಿ ಬಲೆ ಬೀಸಲಾಗಿದೆ.

ಘಟನೆ ನಡೆದಿದ್ದಾದರೂ ಹೇಗೆ?
ಬೆಳಗಾವಿ(Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಗಂಡ ಕಿರಾಣಿ ಅಂಗಡಿ ಹೊಂದಿದ್ದನು. ಪತಿ ಇಲ್ಲದಾಗ ಆಗಾಗ ಕಿರಾಣಿ ಅಂಗಡಿಯಲ್ಲಿ ಈ ಮಹಿಳೆ ಕೂರುತ್ತಿದ್ದಳು. ಆಗ ಆರೀಫ್ ಬೇಪಾರಿ  ಅಲ್ಲಿಗೆ ಬಂದು ಮಹಿಳೆ(Woman)ಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ದಿನಗಳೆದಂತೆ ಮಹಿಳೆ ಸ್ನೇಹ ಬೆಳೆಸಿ ಮೊಬೈಲ್ ನಂಬರ್‌ ಪಡೆದುಕೊಂಡು ಸಂಪರ್ಲ ಇಟ್ಟುಕೊಂಡದ್ದಾನೆ. ನಂತರ, ಹಲವು ಆಮಿಷಗಳನ್ನೊಡ್ಡಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. 

Love Jihad: ಶಾಕಿಂಗ್‌ ! ಲವ್ ಜಿಹಾದ್‌ನ ಮತ್ತೊಂದು ಕರಾಳ ಮುಖ ಅನಾವರಣ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌!

ನಂತರ ಮಹಿಳೆಯನ್ನು ನಿನಗೆ ಬೆಳಗಾವಿಯಲ್ಲಿ ಆಫೀಸ್‌ನಲ್ಲಿ ಕುಳಿತು ಕೈತುಂಬಾ ದುಡಿಯುವ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ‌ಲೈಂಗಿಕವಾಗಿ (Sexual Harassment) ಬಳಸಿಕೊಂಡಿದ್ದಾನೆ. ಜೊತೆಗೆ, ಒಂದೆರಡು ಬಾರಿಗೆ ಕೆಲಸ ಸಿಕ್ಕಿಲ್ಲವೆಂದು ಹೇಳಿ ಹಲವುಬಾರಿ ಬೆಳಗಾವಿಗೆ ಕರೆದುಕೊಂಡು ಬಂದು ಲೈಂಗಿಕವಾಗಿ ಬಳಸಿಕೊಂಡಿದ್ದು, ಅಂತಹ ಅಶ್ಲೀಲ ದೃಶ್ಯವನ್ನು ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ನಂತರ ತನ್ನೊಂದಿಗೆ ಐದು ಜನರನ್ನು ಕರೆದುಕೊಂಡು ಬಂದು ನೀನು ಮತಾಂತರಗೊಳ್ಳಬೇಕು. ಇಲ್ಲವಾದಲ್ಲಿ ನಿನ್ನ ಫೋಟೋ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತೇನೆ ಎಂದು ಬೆದರಿಸಿದ್ದಾನೆ.

PREV
Read more Articles on
click me!

Recommended Stories

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!
ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ