ರಾಮನಗರ: ಕಾಂಗ್ರೆಸ್‌ ತೊರೆದು ಜೆಡಿಎಸ್ ಸೇರಿದ ಮುಖಂಡ

By Kannadaprabha News  |  First Published Apr 21, 2024, 12:44 PM IST

ಕಾಂಗ್ರೆಸ್ ನಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದ್ದೆ. ನನ್ನ ಸೇವೆ ಗೊತ್ತಿದ್ದರೂ ಆ ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಿದರು. ಇದರಿಂದ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾಗಿ ಮುಖಂಡ ಬಸವನಪುರ ನರಸಿಂಹಮೂರ್ತಿ ತಿಳಿಸಿದರು.


ರಾಮನಗರ: ಕಾಂಗ್ರೆಸ್ ನಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದ್ದೆ. ನನ್ನ ಸೇವೆ ಗೊತ್ತಿದ್ದರೂ ಆ ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಿದರು. ಇದರಿಂದ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾಗಿ ಮುಖಂಡ ಬಸವನಪುರ ನರಸಿಂಹಮೂರ್ತಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಲ್ಲಿಸಿ ರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಮೂರ್ತಿ, ಹಲವಾರು ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದೇನೆ. ಈ ವಿಚಾರ ಗೊತ್ತಿದ್ದರೂ ಶಾಸಕ ಇಕ್ಬಾಲ್ ಹುಸೇನ್ ನನ್ನನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದರು. ಕಾಂಗ್ರೆಸ್ ನಲ್ಲಿ ದುಡಿಯುವ ಪ್ರಾಮಾಣಿಕರಿಗೆ ಅವಕಾಶ ಇಲ್ಲ ಎಂದರು.

Latest Videos

undefined

ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿಯಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಿ ಪಕ್ಷ ಸಂಘಟನೆ ಮಾಡಿದ್ದೆ.

ಯಾವುದೇ ಫಲಾಪೇಕ್ಷೆ , ಹುದ್ದೆ ಆಸೆ ಇಲ್ಲದೆ ಪಕ್ಷ ಸಂಘಟನೆ ಹಾಗೂ ಸೇವಾ ಮನೋಭಾವದಿಂದ ಜೆಡಿಎಸ್ ಪಕ್ಷ ಸೇರಿದ್ದೇನೆ. ಮುಂದೆ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಸಂಘಟನೆಯಲ್ಲಿ ತೊಡಗುತ್ತೇನೆ. ಕಾಂಗ್ರೆಸ್ ನಲ್ಲಿ ಮತ್ತಷ್ಟು ಮುಖಂಡರು ತಮ್ಮ ಸಂಪರ್ಕದಲ್ಲಿದ್ದು, ಅವರೆಲ್ಲರೂ ಸಂಸತ್ ಚುನಾವಣೆ ಬಳಿಕ ಜೆಡಿಎಸ್ ಗೆ ಬರಲಿದ್ದಾರೆ. ಕಾಂಗ್ರೆಸ್‌ ಹಣದ ಆಮಿಷ ತೋರಿಸಿ ಅನ್ಯ ಪಕ್ಷಗಳ ಕಾರ್ಯಕರ್ತರನ್ನು ಖರೀದಿಸುತ್ತಿದೆ ಎಂದು ಆರೋಪಿಸಿದರು.

ಆ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಅವಕಾಶ ಇಲ್ಲವಾಗಿದ್ದು, ಅಲ್ಲಿ ಹಣಕಾಸಿನ ವೈಭವ ನಡೆಯುತ್ತಿದೆ. ನಾಲ್ಕು ತಿಂಗಳ ಹಿಂದೆಯೇ ಪಕ್ಷ ತೊರೆಯುವುದಾಗಿ ಡಿ.ಕೆ.ಸುರೇಶ್ ಅವರಿಗೆ ತಿಳಿಸಿದ್ದೆ. ಅದರಂತೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಜೆಡಿಎಸ್ ಸೇರಿದ್ದೇನೆ ಎಂದು ನರಸಿಂಹಮೂರ್ತಿ ನೊಂದು ಕಣ್ಣೀರಿಟ್ಟರು.

ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ ಮಾತನಾಡಿ, ಬಸವನಪುರ ನರಸಿಂಹಮೂರ್ತಿರವರು ದೀರ್ಘಕಾಲ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನಪರ ಸೇವೆ ಮೆಚ್ಚಿ ಜೆಡಿಎಸ್ ಸೇರಿದ್ದು, ಅವರ ಆಗಮನದಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್, ನಗರಸಭಾ ಮಾಜಿ ಸದಸ್ಯ ರವಿ, ಮುಖಂಡರಾದ ಸಬ್ಬಕೆರೆ ಶಿವಲಿಂಗಯ್ಯ, ಕೆಂಗಲ್ಲಯ್ಯ, ರಾಜಣ್ಣ, ಉಮೇಶ್, ಜಯಕುಮಾರ್, ಯೋಗೇಶ್, ಕೆಂಪರಾಜು, ಸಿಂಗ್ರಯ್ಯ ಇತರರಿದ್ದರು. 

click me!