ಬೆಳಗಾವಿ-ಗೋವಾ ವಿಶೇಷ ರೈಲಿಗೆ ಚಾಲನೆ

By Kannadaprabha NewsFirst Published Sep 5, 2019, 11:59 AM IST
Highlights

ಬೆಳಗಾವಿ-ಗೋವಾ ನೇರ ಸಂಚಾರದ ಬೆಳಗಾವಿ-ವಾಸ್ಕೋಡಗಾಮಾ ವಿಶೇಷ ರೈಲು ಸಂಚಾರಕ್ಕೆ ಬುಧವಾರ ಗೋವಾದ ವಾಸ್ಕೋರೈಲು ನಿಲ್ದಾಣದಲ್ಲಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಬೆಳಗಾವಿ(ಸೆ.05): ಬೆಳಗಾವಿ-ಗೋವಾ ನೇರ ಸಂಚಾರದ ಬೆಳಗಾವಿ-ವಾಸ್ಕೋಡ ಗಾಮಾ ವಿಶೇಷ ರೈಲು ಸಂಚಾರಕ್ಕೆ ಬುಧವಾರ ಗೋವಾದ ವಾಸ್ಕೋರೈಲು ನಿಲ್ದಾಣದಲ್ಲಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ದೂದ್‌ಸಾಗರ್‌ ಫಾಲ್ಸ್‌ ನೋಡಲು 10 ನಿಮಿಷ ನಿಲ್ಲಲಿದೆ ರೈಲು

ಈ ಹೊಸ ರೈಲು ಸೆ.6ರಿಂದ ವಾರದಲ್ಲಿ ಎರಡು ದಿನ (ಶುಕ್ರವಾರ ಮತ್ತು ಶನಿವಾರ) ಪ್ರಾಯೋಗಿಕವಾಗಿ ಸಂಚರಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಲಿದೆ. 8 ಸಾಮಾನ್ಯ ಬೋಗಿಗಳು, 2 ದ್ವಿತೀಯ ದರ್ಜೆ ಬೋಗಿ ಸೇರಿ 10 ಬೋಗಿಗಳ ರೈಲು ಸಾಮರ್ಥ್ಯವಿದೆ.

'ಡಿಕೆಶಿಯನ್ನು ಹೀರೋ ಮಾಡೋ ಅವಶ್ಯಕತೆ ಬಿಜೆಪಿಗಿಲ್ಲ'

ಬೆಳಗ್ಗೆ 6.20ಕ್ಕೆ ಬೆಳಗಾವಿ ನಿಲ್ದಾಣದಿಂದ ಹೊರಡಲಿದೆ. ಗೋವಾದಿಂದ ವಾಸ್ಕೋಡ ಗಾಮಾ ರೈಲು ನಿಲ್ದಾಣದಿಂದ ಮಧ್ಯಾಹ್ನ-3.55ಕ್ಕೆ ಹೊರಡಲಿದೆ. ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ಇದ್ದರು.

click me!