ನಿಪ್ಪಾಣಿ ನಗರದ ರಾಮಮಂದಿರವನ್ನು ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಪತ್ರವು ದೇವಾಲಯ ಆವರಣದಲ್ಲಿ ಪತ್ತೆಯಾಗಿದೆ. ಈ ಪತ್ರದಲ್ಲಿ ಕೊನೆಗೆ ಅಲ್ಲಾಹು ಅಕ್ಬರ್ ಎಂದು ಬರೆಯಲಾಗಿದೆ.
ಬೆಳಗಾವಿ (ಮಾ.09): ರಾಜ್ಯದ ಗಡಿಜಿಲ್ಲೆ ಬೆಳಗಾವಿಯ ನಿಪ್ಪಾಣಿ ನಗರದ ರಾಮಮಂದಿರವನ್ನು ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಪತ್ರವು ದೇವಾಲಯ ಆವರಣದಲ್ಲಿ ಪತ್ತೆಯಾಗಿದೆ. ಈ ಪತ್ರ ದೊರೆತ ಬೆನ್ನಲ್ಲಿಯೇ ದೆವಾಲಯದ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಬೆದರಿಕೆ ಇಮೇಲ್ ಮತ್ತು ಕರೆಗಳು ಪೊಲೀಸರಿಗೆ ಬರುತ್ತಿದ್ದವು. ಆದರೆ, ಕಳೆದ 9 ದಿನಗಳ ಹಿಂದೆ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಲಾಗಿದೆ. ಈ ಪ್ರಕರಣದ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಹೀಗಿರುವಾಗ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ರಾಮಮಂದಿರವನ್ನು ಸ್ಫೋಟ ಮಾಡುವುದಾಗಿ ಬೆದರಿಕೆ ಪತ್ರಗಳನ್ನು ನೀಡಲಾಗಿದೆ.
ರಾಮೇಶ್ವರಂ ಕೆಫೆ ಬಾಂಬರ್ ಕ್ಲಿಯರ್ ಪಿಕ್ಚರ್ ಬಿಡುಗಡೆ ಮಾಡಿದ ಎನ್‌ಐಎ!
ನಿಪ್ಪಾಣಿ ರಾಮ ಮಂದಿರ ಸ್ಫೋಟಿಸುದಾಗಿ ಬೆದರಿಕೆ ಪತ್ರ ಬರೆಯಲಾಗಿದೆ. ಕಳೆದ 2 ತಿಂಗಳಲ್ಲಿ ದೇವಸ್ಥಾನದಲ್ಲಿ ಎರಡು ಪತ್ರಗಳು ಪತ್ತೆಯಾಗಿವೆ. ಮಾ.7 ರಂದು ದೇವಸ್ಥಾನದಲ್ಲಿ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಪತ್ತೆಯಾಗಿದೆ. ಇನ್ನು ಕಳೆದ ತಿಂಗಳು ರಾಮ ಮಂದಿರದ ಹಿಂಭಾಗದಲ್ಲಿರುವ ಬೃಹತ್ ಹನುಮ ದೇವಸ್ಥಾನ ಸ್ಪೋಟಿಸುತ್ತೇವೆ ಎಂದು ಪತ್ರ ಬರೆದು ಬೀಸಾಡಲಾಗಿತ್ತು. ಈ ಪತ್ರಗಳು ಹಿಂದಿ ಭಾಷೆಯಲ್ಲಿ ಉಲ್ಲೇಖವಾಗಿವೆ. ಈ ಪತ್ರಗಳನ್ನು ದೇವಸ್ಥಾನದ ಅರ್ಚಕರು ನೋಡಿ ನಗರ ಪೊಲೀಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮುಖ್ಯವಾಗಿ ದೇವಾಲಯ ಸ್ಪೋಟ ಮಾಡುವುದಾಗಿ ಬರೆದ ಪತ್ರದ ಕೊನೆಯಲ್ಲಿ ಅಲ್ಲಾ ಹು ಅಕ್ಬರ ಮತ್ತು ಐಎಂಐ ಎಂದು ಬರೆಯಲಾಗಿದೆ. ಇನ್ನು ದೇವಾಲಯ ಸ್ಪೋಟಿಸುವುದಾಗಿ ಬೆದರಿಕೆ ಪತ್ರ ಬಂದ ಬೆನ್ನಲ್ಲಿಯೇ ದೇವಸ್ಥಾನದ ಆವರಣದಲ್ಲಿ ಮುಂಜಾಗ್ರತವಾಗಿ ಸಿಸಿಟಿವಿ ಅಳವಡಿಕೆ ಮಾಡಿಸಲಾಗಿದೆ. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಶಿವಮೊಗ್ಗ ಐಸಿಸ್ ಸಂಚು ಕೇಸ್: ಅರಾಫತ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್