ಮಾರ್ಚ್ 8ರ ರಾತ್ರಿ ಮತ್ತು 9 ರಂದು ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ. ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ. ಹಿರಿಯ ಅಭಿನವ ಶಿವಾನಂದ ಶ್ರೀ, ಕಿರಿಯ ಶ್ರೀಗಳಾದ ಸದಾಶಿವಾನಂದ ಸ್ವಾಮಿಜಿ ಮಧ್ಯದ ಮುನಿಸು, ಭಕ್ತರ ನಡುವಿನ ಹಗ್ಗ ಜಗ್ಗಾಟದಿಂದಾಗಿ ಜಾತ್ರೆ ಬಲಿಯಾದಂತಾಗಿದೆ.
ಗದಗ(ಮಾ.09): ಜಿಲ್ಲೆಯ ಐತಿಹಾಸಿಕ ಮಠಗಳಲ್ಲಿ ಒಂದಾದ ಶಿವಾನಂದ ಮಠದ ಜಾತ್ರಾ ಮಹೋತ್ಸವ ರದ್ದಾಗಿದೆ. ಮಠದಲ್ಲಿ ನಡೆಯುವ ಶಿವಯೋಗ, ಕಿರೀಟ ಪೂಜೆ, ಪಲ್ಲಕ್ಕಿ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ. ಉಭಯ ಶ್ರೀಗಳ ಹಗ್ಗ ಜಗ್ಗಾಟದ ಮಧ್ಯೆ ಐತಿಹಾಸಿಕ ಜಾತ್ರಾ ಮಹೋತ್ಸವ ರದ್ದಾಗಿದ್ದು ಭಕ್ತರಲ್ಲಿ ನಿರಾಸೆ ಮೂಡಿಸಿದೆ.
ಗದಗ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಅವರಿಂದ ಸೆಕ್ಷನ್ 144 ಜಾರಿ ಆದೇಶ ಮಾಡಿದ್ದು, ಮಾರ್ಚ್ 8ರ ರಾತ್ರಿ ಮತ್ತು 9 ರಂದು ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ. ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ. ಹಿರಿಯ ಅಭಿನವ ಶಿವಾನಂದ ಶ್ರೀ, ಕಿರಿಯ ಶ್ರೀಗಳಾದ ಸದಾಶಿವಾನಂದ ಸ್ವಾಮಿಜಿ ಮಧ್ಯದ ಮುನಿಸು, ಭಕ್ತರ ನಡುವಿನ ಹಗ್ಗ ಜಗ್ಗಾಟದಿಂದಾಗಿ ಜಾತ್ರೆ ಬಲಿಯಾದಂತಾಗಿದೆ.
undefined
ತುಮಕೂರು-ದಾವಣಗೆರೆ, ಗದಗ-ವಾಡಿ ರೈಲ್ವೆ ಯೋಜನೆಗಳಿಗೆ ₹ 93.32 ಕೋಟಿ ಬಿಡುಗಡೆ: ಎಂ.ಬಿ. ಪಾಟೀಲ
ಕಿರಿಯ ಶ್ರೀಗಳನ್ನ ಹೊರಗಿಟ್ಟು ಜಾತ್ರೆ ತಯಾರಿ ಮಾಡಿದ್ದಕ್ಕೆ ವಿವಾದ ಹೊತ್ತಿಕೊಂಡಿತ್ತು.. ಕೋರ್ಟ್ ಆದೇಶದ ಹೊರತಾಗಿಯೂ ಕಿರಿಯ ಶ್ರೀಗಳನ್ನ ಕಡೆಗಣನೆ ಮಾಡಿರೋ ಆರೋಪ ಕೇಳಿ ಬಂದಿತ್ತು.. ಹೀಗಾಗಿ ಕಿರಿಯ ಶ್ರೀಗಳ ಬೆಂಬಲಿಗರಿಂದ ಮಠದಲ್ಲಿ ಸರಣಿ ಸಭೆ ನಡೆಸಿ, ಹಿರಿಯ ಶ್ರೀಗಳಿಗೆ ಒತ್ತಡ ಹೇರಿ ಕಿರಿಯ ಶ್ರೀಗಳನ್ನ ಪರಿಗಣನೆಗೆ ತೆಗೆದುಕೊಳ್ಳಲು ಮನವಿ ಮಾಡಿದ್ರು.. ಪೊಲೀಸ್ ಇಲಾಖೆಗೆ ಮಧ್ಯಸ್ಥಿಕೆಯಲ್ಲಿ ನಡೆದ ದಂದಾನದಿಂದಾಗಿ, ಕಿರಿಯ ಶ್ರೀಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ರೆ ನಡೆಸೋದಾಗಿ ಹೇಳಿದ್ದ ಹಿರಿಯ ಶ್ರೀಗಳು ಹೇಳಿದ್ರು.
ಶಿವ ರಾತ್ರಿಯಂದು ನಡೆಯೋ ಶಿವಯೋಗ ಕಾರ್ಯಕ್ರಮ ವಿಚಾರವಾಗಿ ಒಮ್ಮತ ಮೂಡದಿರೋದು ಜಾತ್ರೆ ರದ್ದಾಗಲು ಪ್ರಮುಖ ಪಾತ್ರ ವಹಿಸಿದೆ.. ಶಿವಯೋಗ ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳಿಗೆ ಸಿಂಹಾಸನ ನೀಡ್ಬೇಕು, ಜಾತ್ರಾ ಮಹೋತ್ಸವದ ಬ್ಯಾನರ್ ನಲ್ಲಿ ಕಿರಿಯ ಶ್ರೀಗಳ ಫೋಟೋ ಅಳವಡಿಸುವಂತೆ ಭಕ್ತರು ಪಟ್ಟು ಹಿಡಿದಿದ್ರು.. ಕಿರಿಯ, ಹಿರಿಯ ಶ್ರೀಗಳ ಭಕ್ತರ ಮಧ್ಯ ಇದೇ ವಿಚಾರವಾಗಿ ವಾಗ್ವಾದ ಕೂಡ ನಡೆದಿತ್ತು.. ಈ ವಿಷಯಕ್ಕೆ ಒಪ್ಪದ ಹಿರಿಯ ಶ್ರೀಗಳ ಭಕ್ತರ ವಿರುದ್ಧ ಕಿರಿಯ ಶ್ರೀಗಳ ಭಕ್ತರು ಪ್ರತಿಭಟನೆ ಮಾಡೋದಕ್ಕೆ ಮುಂದಾಗಿದ್ರು.. ಹಿರಿಯ ಶ್ರೀಗಳ ಎದುರು ಧರಣಿ ಕೂರಲು ಕಿರಿಯ ಶ್ರೀಗಳ ಭಕ್ತರು ಮುಂದಾಗಿದ್ರು.. ಹೀಗಾಗಿ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಜಾತ್ರೆಯ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ಹೇರಿ ಆದೇಶ ಮಾಡ್ಲಾಗಿದೆ.
ಮಠದ ಇತಿಹಾಸದಲ್ಲೇ ಹಿಂದೆಂದೂ ಜಾತ್ರಾ ಮಹೋತ್ಸವ ರದ್ದಾದ ಉದಾಹರಣೆ ಇಲ್ಲ.. ಸುಮಾರು ವರ್ಷದ ಹಿಂದೆ ಉತ್ತರಾಧಿಕಾರಿ ಇರದಿರೋಕಾರಣ ಒಮ್ಮೆ ಜಾತ್ರೆ ನಡೆದಿದ್ದಲ್ಲ. ಆದ್ರೆ ಈಗ ಸ್ವಾಮಿಗಳಿಂದಾಗೇ ಜಾತ್ರೆ ರದ್ದಾಗಿರೋದು ಭಕ್ತ ವಲಯದಲ್ಲಿ ಬೇಸರ ಮೂಡಿಸಿದೆ.