3 ವರ್ಷದ ಬಳಿಕ ಒಂದಾದ ಸವದಿ, ರಮೇಶ್‌ : ಬಿಜೆಪಿಗರ ಆಸೆಗೆ ತಣ್ಣೀರೆರಚಿದ ಸತೀಶ್‌

By Kannadaprabha NewsFirst Published Nov 1, 2020, 10:40 AM IST
Highlights

ಮೂರು ವರ್ಷದ ಬಳಿಕ ರಮೇಶ್ - ಸವದಿ ಒಂದಾಗಿದ್ದು, ಇದೀಗ ಬಿಜೆಪಿಗರ ಆಸೆಗೆ ಸತೀಶ್ ಜಾರಕಿಹೊಳಿ ತಣ್ಣೀರೆರಚಿದ್ದಾರೆ

 ಬೆಳಗಾವಿ (ಅ.01):  ಪ್ರತಿಷ್ಠಿತ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಸಬೇಕೆಂಬ ಬಿಜೆಪಿ ನಾಯಕರ ಆಸೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಣ್ಣೀರೆರಚಿಸಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಮೂರು ವರ್ಷಗಳ ಬಳಿಕ ಒಂದಾಗಿ ಪ್ರಯತ್ನ ನಡೆಸಿದ ಹೊರತಾಗಿಯೂ 16ರಲ್ಲಿ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುವುದು ಖಚಿತವಾಗಿದೆ.

ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಈ ಮೂರು ಸ್ಥಾನಗಳಿಗೆ ನ.6ರಂದು ಚುನಾವಣೆ ನಡೆಯಲಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಖಾನಾಪುರ ಪಿಕೆಪಿಎಸ್‌ ಕ್ಷೇತ್ರದಿಂದ ಶಾಸಕಿ ಡಾ.ಅಂಜಲಿ ನಿಂಬಾಳಕರ್‌ ಮತ್ತು ಉಣ್ಣೆ ಉತ್ಪಾದಕರ ಸಂಘದ ಕ್ಷೇತ್ರದಿಂದ ಜಿಪಂ ಸದಸ್ಯ ಕೃಷ್ಣಾ ಅನಗೋಳಕರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ವರಿಷ್ಠರ ಸಲಹೆ ಮೇರೆಗೆ ಬಿಜೆಪಿ ನಾಯಕರೆಲ್ಲರೂ ಒಂದಾಗಿ ಅಂಜಲಿ, ಕೃಷ್ಣಾ ಅವರ ಮನವೊಲಿಕೆಗೆ ಎಷ್ಟೇ ಪ್ರಯತ್ನ ನಡೆಸಿದರೂ ಅದು ವಿಫಲಗೊಂಡಿದೆ.

ಪ್ರಜ್ಞಾವಂತರು ಹಣಕ್ಕೆ ಮತ ಮಾರಿಕೊಳ್ಳಲ್ಲ: ಡಿ.ಕೆ. ಶಿವಕುಮಾರ್‌

ಜತೆಗೆ, ಕೃಷ್ಣಾ ಅನಗೋಳಕರ ಅವರು ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಖಾನಾಪುರದಿಂದ ಶಾಸಕಿ ಡಾ.ಅಂಜಲಿ ನಿಂಬಾಳಕರ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ನಡುವೆ, ರಾಮದುರ್ಗದಿಂದ ಭೀಮಪ್ಪ ಬೆಳವಣಿಕೆ ಮತ್ತು ಶ್ರೀಕಾಂತ ಡವಣ ನಡುವೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಗಜಾನನ ಕ್ವಳ್ಳಿ ಮತ್ತು ಕೃಷ್ಣಾ ಅನಗೋಳಕರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

'ಭಾವಿಸಿದ್ದೆಲ್ಲಾ ಉಲ್ಟಾ ಆಗುತ್ತೆ : ಸ್ಟಾರ್‌ಗಳಿಂದ ಏನು ಆಗಲ್ಲ' ...

ಒಂದೇ ವೇದಿಕೆಯಲ್ಲಿ ಸವದಿ, ಜಾರಕಿಹೊಳಿ: ಈವರೆಗೆ ರಾಜಕೀಯ ಭಿನ್ನಮತದಿಂದ ದೂರವಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮೂರು ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಒಂದೇ ಪಕ್ಷದಲ್ಲಿದ್ದರೂ ಒಟ್ಟಿಗೆ ಕಾಣಿಸಿಕೊಳ್ಳದ ಉಭಯ ನಾಯಕರು ಶನಿವಾರ ಡಿಸಿಸಿ ಬ್ಯಾಂಕ್‌ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಲ್ಲದೆ ಅಕ್ಕ ಪಕ್ಕದಲ್ಲಿ ಕುಳಿತು, ಉಭಯ ಕುಶಲೋಪರಿ ವಿಚಾರಿಸಿದ್ದು ಕುತೂಹಲ ಮೂಡಿಸಿತು.

click me!