ಬೆಳಗಾವಿ: ಟಾಟಾಏಸ್ ವಾಹನ ಡಿಕ್ಕಿಯಾಗಿ ಕಾಲೇಜು ಹುಡುಗಿ ಸಾವು

By Sathish Kumar KH  |  First Published Jan 31, 2024, 4:20 PM IST

ಕಾಲೇಜು ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿಗೆ ಹಿಂಬದಿಯಿಂದ ಟಾಟಾಏಸ್ ಬಂದು ಗುದ್ದಿ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿಯಲ್ಲಿ ನಡೆದಿದೆ.


ಬೆಳಗಾವಿ (ಜ.31): ಪ್ರತಿನಿತ್ಯ ಹೋಗುವಂತೆ ಬೆಳಗ್ಗೆ ಕಾಲೇಜಿಗೆ ಹೋಗಿದ್ದ ಹುಡುಗಿ ಕಾಲೇಜು ಮುಗಿದ ನಂತರ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಬರುವಾಗ ಹಿಂಬದಿಯಿಂದ ಬಂದು ಟಾಟಾಏಸ್‌ ಗುದ್ದಿ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿಯಲ್ಲಿ ನಡೆದಿದೆ. 

ಬೆಳಗಾವಿ ‌ಜಿಲ್ಲೆಯ ಚೆನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಕಿತ್ತೂರು ‌ತಾಲೂಕಿನ ಉಗರಖೋಡ ಗ್ರಾಮದ ಕಾವೇರಿ ಕಾಜಗಾರ (21) ಮೃತ ದುರ್ದೈವಿ ಆಗಿದ್ದಾಳೆ. ಕಿತ್ತೂರು ‌ಹೊರವಲಯದ ದೇಗಾಂವ ಸರ್ಕಾರಿ ಪದವಿ ಕಾಲೇಜಿನಲ್ಲಿ ‌ಕಾವೇರಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದ ಯುವತಿ ತರಗತಿ ಮುಗಿಸಿ ಕಿತ್ತೂರು ಕಡೆಗೆ ಕಾಲ್ನಡಿಗೆಯಲ್ಲಿ ಬರುವಾಗ, ಹಿಂಬದಿಯಿಂದ ಬಂದ ಟಾಟಾಏಸ್‌ ವಾಹನ ವಾಹನ ಡಿಕ್ಕಿ ಹೊಡೆದಿದೆ. ತಕ್ಷಣವೇ ಆಕೆಯನ್ನು ಸ್ಥಳೀಯರು ರಕ್ಷಣೆ ಮಾಡಿ ಸಮುದಾಯ ಆರೋಗ್ಯ ‌ಕೇಂದ್ರಕ್ಕೆ  ‌ದಾಖಲಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ‌ದಾಖಲಿಸುವ ಮುನ್ನವೇ ವಿದ್ಯಾರ್ಥಿನಿ ಕಾವೇರಿ ‌ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Tap to resize

Latest Videos

ಬೆಳಗಾವಿ ಡಬಲ್ ಮರ್ಡರ್: ಮದುವೆಯಾಗಿ 30 ದಿನಕ್ಕೆ ಓಡಿಹೋದ ಹೆಂಡ್ತಿಯನ್ನು ಪ್ರಿಯಕರನೊಂದಿಗೆ ಕೊಲೆಗೈದ ಗಂಡ

ದೇಗಾಂವ ಗ್ರಾಮದ ಅನಿಲ್ ಚಿವಟಗುಂಡಿ ಎಂಬಾತನಿಂದ ‌ಕೃತ್ಯ ನಡೆದಿದೆ. ಕಾಲೇಜು ಮುಗಿಸಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಯುವತಿಗೆ ವೇಗವಾಗಿ ಬಂದು ಗುದ್ದಿದ್ದಾನೆ. ರಸ್ತೆ ಪಕ್ಕದಲ್ಲಿ ಎತ್ತರದ ಮಣ್ಣಿನ ಗುಡ್ಡವಿದ್ದ ಕಾರಣ ಟಾಟಾ ಏಸ್ ತನ್ನತ್ತ ಬರುತ್ತಿದ್ದರೂ ಪಕ್ಕಕ್ಕೆ ಹೋಗಲು ಅವಕಾಶವಿಲ್ಲದ ಕಾರಣ ವಾಹನಕ್ಕೆ ಸಿಲುಕಿ ಕಾಲೇಜು ಯುವತಿ ಸಾವನ್ನಪ್ಪಿದ್ದಾಳೆ. ಇನ್ನು ಆಸ್ಪತ್ರೆಯಲ್ಲಿ ಮೃತದೇಹವಿದ್ದು, ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಿತ್ತೂರು ‌ಪೊಲೀಸ್ ಠಾಣೆ ‌ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

ಮದುವೆಯಾದ ಒಂದು ತಿಂಗಳೊಳಗೆ ಮತ್ತೊಂದು ಮದುವೆಯಾದ ಹೆಂಡ್ತಿ:
ಬೆಳಗಾವಿ (ಜ.30):
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚಂದುಳ್ಳಿ ಚಲುವೆ ಮತ್ತೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆದರೆ, ಮನೆಯವರ ಅಣತಿಯಂತೆ ಮದುವೆಯಾದ ಹೆಂಡತಿ ಒಂದು ತಿಂಗಳಲ್ಲಿಯೇ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ಮಾಡಿಕೊಂಡ ಗಂಡ, ತನ್ನ ಹೆಂಡತಿ ಇನ್ನೊಬ್ಬರೊಂದಿಗೆ ಚೆನ್ನಾಗಿರುವುದನ್ನು ನೋಡಿ ಸಹಿಸಿಕೊಳ್ಳಲಾಗದೇ ಪ್ರೇಮಿಗಳಿಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಗೃಹ ಸಚಿವರ ತವರಲ್ಲಿ 1ನೇ ತರಗತಿ ಬಾಲಕಿ ಎಳೆದೊಯ್ದು ಅತ್ಯಾಚಾರವೆಸಗಿದ ಕಾಮುಕ

ಹೌದು, ಮದುವೆಯಾಗಿ ಕೇವಲ ಒಂದು ತಿಂಗಳಿಗೆ ಕೈಕೊಟ್ಟು ಓಡಿ ಹೋದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಯಾಸಿನ ಬಾಗೊಡೆ (21) ಹಾಗೂ ಹೀನಾಕೌಸರ್  ಸುದಾರಾಣೆ (19) ಕೊಲೆಯಾದ ಜೋಡಿಯಾಗಿದ್ದಾರೆ. ತೌಫಿಕ್ ಕ್ಯಾಡಿ (24) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇನ್ನು ಇಬ್ಬರ ಮೇಲೆ ಹಲ್ಲೆ ಮಾಡುವ ವೇಳೆ ಬಿಡಿಸಲು ಬಂದಿದ್ದ ತಾಯಿ ಅಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾನ ಮೇಲು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಈ ಇಬ್ಬರನ್ನು ಮಿರಜ್  ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಬಲ್ ಮರ್ಡರ್ ಮಾಡಿದ ಆರೋಪಿ ತೌಫಿಕ್ ಸ್ಥಳದಿಂದ ಪರಾರಿ ಆಗಿದ್ದಾನೆ.

click me!