Belagavi: ಚಿಕ್ಕೋಡಿಯಲ್ಲಿ ಶವ ತೆಗೆಯಲು ಕೋಳಿ ಬಲಿ ನೀಡಲು ಮುಂದಾದ್ರಾ ಅಧಿಕಾರಿಗಳು?

Published : Aug 14, 2026, 12:47 PM IST
Chikkodi

ಸಾರಾಂಶ

ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾದ ವ್ಯಕ್ತಿಯ ಶವವನ್ನು ಹೊರತೆಗೆಯುವ ಮೊದಲು ಅಧಿಕಾರಿಗಳು ಕೋಳಿ ಬಲಿ ನೀಡಲು ಮುಂದಾಗಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದಾಗ ಈ ಪ್ರಯತ್ನವನ್ನು ಕೈಬಿಡಲಾಗಿದ್ದು, ಈ ಘಟನೆಯು ಸರ್ಕಾರಿ ಕಾರ್ಯಾಚರಣೆಯಲ್ಲಿನ ಮೂಢನಂಬಿಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಹತ್ಯೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವ ಹೊರತೆಗೆಯುವ ಕಾರ್ಯಾಚರಣೆಗೆ ಮುನ್ನ ಕೋಳಿ ಬಲಿ ನೀಡಲು ಪೊಲೀಸರು ಮತ್ತು ತಾಲೂಕಾಡಳಿತ ಮುಂದಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ ನೇತೃತ್ವದಲ್ಲಿ ಹೂತಿದ್ದ ಶವ ಹೊರತೆಗೆಯುವ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿತ್ತು.

ಕೋಳಿ ಬಲಿ ನೀಡಲು ಮುಂದಾದ ಆರೋಪ

ಈ ವೇಳೆ ಶವ ಅಗೆಯುವ ಮೊದಲು ಕೋಳಿ ಬಲಿ ನೀಡಲು ಮುಂದಾಗಿದ್ದು, ಮಾಧ್ಯಮ ಪ್ರತಿನಿಧಿಗಳು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಬಳಿಕ ಕೋಳಿಯನ್ನು ಅಲ್ಲಿಂದ ವಾಪಸ್ ತೆಗೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ರಾಘು ಗಾವಡೆ (40) ಅವರನ್ನು ಕೊಲೆ ಮಾಡಿ ಅವರದೇ ಜಮೀನಿನಲ್ಲಿ ಹೂತು ಹಾಕಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಶವ ಹೊರತೆಗೆಯುವ ಕಾರ್ಯ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: ಬೆಳಗಾವಿ: ಸುಮಾರು 9 km ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಆಗ್ರಹ

ವೈಜ್ಞಾನಿಕ ತನಿಖೆ ಮತ್ತು ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಸರ್ಕಾರಿ ಇಲಾಖೆಯ ಕಾರ್ಯಾಚರಣೆ ವೇಳೆ ಪ್ರಾಣಿ ಬಲಿ ನೀಡುವಂತಹ ಮೂಢನಂಬಿಕೆಗೆ ಮೊರೆ ಹೋಗಲು ಯತ್ನಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಸವದತ್ತಿ-ಬೆಂಗಳೂರು: 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ ಈ ರೀತಿ

PREV
Read more Articles on
click me!

Recommended Stories

ಶಾಸಕ ಸುರೇಶ್ ಗೌಡ ಪುತ್ರಿಯಿಂದ ಪಿಎಸ್‌ಐಗೆ ಕಪಾಳಮೋಕ್ಷ, ಮಗಳ ತಪ್ಪಿಗೆ ಕ್ಷಮೆಗೆ ಮುಂದಾದ ಅಪ್ಪ!
ನಾಗಸಂದ್ರ ಮೆಟ್ರೋ ಸಮೀಪದ ಐಕಿಯಾ ಭೂ ಒಪ್ಪಂದದಲ್ಲಿ ಎಡವಿದ BMRCL: 104 ಕೋಟಿ ರೂಪಾಯಿ ನಷ್ಟ ಎಂದ ಸಿಎಜಿ!