ಇಂಗ್ಲೆಂಡ್‌ನಲ್ಲಿ ಯೋಗದಿಂದ ಕೊರೋನಾ ಗೆದ್ದ ಬೆಳಗಾವಿ ಮೂಲದ ದಂಪತಿ

Kannadaprabha News   | Asianet News
Published : Jun 04, 2020, 10:41 AM ISTUpdated : Jun 04, 2020, 11:01 AM IST
ಇಂಗ್ಲೆಂಡ್‌ನಲ್ಲಿ ಯೋಗದಿಂದ ಕೊರೋನಾ ಗೆದ್ದ ಬೆಳಗಾವಿ ಮೂಲದ ದಂಪತಿ

ಸಾರಾಂಶ

ಮೇ 12 ರಂದು ಇಂಟರ್‌ನ್ಯಾಷನಲ್‌ ನರ್ಸ್‌ ಡೇ ದಿನದಂದು ಮೇತ್ರಿ ದಂಪತಿಗೆ ದೂರವಾಣಿ ಕರೆ ಮೂಲಕ ಅಭಿನಂದನೆ ಸಲ್ಲಿಸಿದ್ದ ಸಿಎಂ ಯಡಿಯೂರಪ್ಪ| ರಾಜೀವ ಕೃಷ್ಣಾ ಮೇತ್ರಿ, ರೀನಾ ರಾಜೀವ ಮೇತ್ರಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಇಂಗ್ಲೆಂಡ್‌ನಿಂದ ಮರಳಿ ಬೆಳಗಾವಿಗೆ ಬಂದಿದ್ದಾರೆ|

ಬೆಳಗಾವಿ(ಜೂ.04): ಯೋಗ, ಪ್ರಾಣಾಯಾಮದಿಂದ ಬೆಳಗಾವಿ ಮೂಲದ ಇಂಗ್ಲೆಂಡ್‌ನಲ್ಲಿ ವಾಸವಿದ್ದ ಸ್ಟಾಫ್‌ ನರ್ಸ್‌ ಮೇತ್ರಿ ದಂಪತಿ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ.

ಮೇ 12 ರಂದು ಇಂಟರ್‌ನ್ಯಾಷನಲ್‌ ನರ್ಸ್‌ ಡೇ ದಿನದಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೇತ್ರಿ ದಂಪತಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ, ಅವರಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ರಾಜೀವ ಕೃಷ್ಣಾ ಮೇತ್ರಿ, ರೀನಾ ರಾಜೀವ ಮೇತ್ರಿ ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಇಂಗ್ಲೆಂಡ್‌ನಿಂದ ಮರಳಿ ಬೆಳಗಾವಿಗೆ ಬಂದಿದ್ದಾರೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಆರೈಕೆ ಮಾಡಿದ್ದ ಜಿಗನಬಿ ಬಾಪುಲಾಲ್ ಪಟೇಲ ಇನ್ನಿಲ್ಲ

ಇಂಗ್ಲೆಂಡ್‌ ವ್ಹೇಲ್ಸ್‌ ನಗರದ ಗ್ಲಾನ್‌ಕ್ಲುಯ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯನಿರ್ವಹಿಸುತ್ತಿದ್ದ ವೇಳೆ ಸ್ಟಾಫ್‌ ನರ್ಸ್‌ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು. ಅದೇ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಾಗಿದ್ದರು. 10 ವರ್ಷಗಳಿಂದ ನಿತ್ಯಯೋಗ, ಪ್ರಾಣಾಯಾಮ ಮಾಡುತ್ತಿದ್ದ ರೀನಾ ಮೇತ್ರಿ ಒಂದು ವಾರದಲ್ಲೇ ಸೋಂಕಿನಿಂದ ಮುಕ್ತರಾದರೆ, ಯೋಗಾಸನ ಗೊತ್ತಿದ್ದರೂ ರಾಜೀವ ಮೇತ್ರಿ ಅವರು ನಿತ್ಯ ಮಾಡುತ್ತಿರಲಿಲ್ಲ. ಹಾಗಾಗಿ, ದೀರ್ಘಾವಧಿ ಚಿಕಿತ್ಸೆ ಬಳಿಕ ಸೋಂಕಿನಿಂದ ಗುಣಮುಖರಾದರು. ಮೇ 10 ರಂದು ಆಸ್ಪತ್ರೆಯಿಂದ ಬಿಡುಗಡೆಯಾದರು. ಕೊರೋನಾ ಗೆಲ್ಲಲು ದೀರ್ಘ ಶ್ವಾಸೋಚ್ಛಾಸ, ಯೋಗ, ಪ್ರಾಣಾಯಾಮ ಸಹಕಾರಿಯಾಗಿದೆ ಎಂದು ರೀನಾ ಮೇತ್ರಿ ಹೇಳಿದ್ದಾರೆ.
 

PREV
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!