ಮಗುಚಿ ಬಿದ್ದ ಬಿಯರ್‌ ತುಂಬಿದ್ದ ಲಾರಿ : ಬಂದು ಬಂದು ಹೊತ್ತೊಯ್ದರು ಸ್ಥಳೀಯರು

Kannadaprabha News   | Asianet News
Published : Oct 21, 2020, 10:48 AM ISTUpdated : Oct 21, 2020, 11:01 AM IST
ಮಗುಚಿ ಬಿದ್ದ ಬಿಯರ್‌ ತುಂಬಿದ್ದ ಲಾರಿ : ಬಂದು ಬಂದು ಹೊತ್ತೊಯ್ದರು ಸ್ಥಳೀಯರು

ಸಾರಾಂಶ

ಬಿಯರ್ ತುಂಬಿದ್ದ ಲಾರಿಯೊಂದು ಮಗುಚಿ ಬಿದ್ದಿದ್ದು ಈ ವೇಳೆ ಸ್ಥಳಕ್ಕೆ ಬಂದವ್ರು ಮನಸಿಗೆ ಬಂದಷ್ಟು ಎತ್ತಿಕೊಂಡು ಹೋಗಿದ್ದಾರೆ.

ಹೊಳೆನರಸೀಪುರ (ಅ.21):  ಪಟ್ಟಣದ ಹಾಸನ ರಸ್ತೆಯ ಕಡವಿಕೋಟೆ ಸಮೀಪದಲ್ಲಿ ಬಿಯರ್‌ ತುಂಬಿದ ಲಾರಿಯೊಂದು ಸೋಮವಾರ ರಾತ್ರಿ ಸ್ವಲ್ಪ ಮಗುಚಿ ಬಿದ್ದಿದ್ದು, ಇದರಿಂದ ಸುಮಾರು 4.5 ಲಕ್ಷ ರು. ನಷ್ಟವುಂಟಾಗಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹಾಸನದಿಂದ ಕೇರಳ ರಾಜ್ಯಕ್ಕೆ ಸರಬರಾಜು ಆಗುತ್ತಿದ್ದ 900 ಬಿಯರ್‌ ಬಾಕ್ಸ್‌ ತೆಗೆದುಕೊಂಡು ಹೋಗುತ್ತಿತ್ತು.

ಹಾಸನದ ಬಿಯರ್‌ ತಯಾರಿಕಾ ಫ್ಯಾಕ್ಟರಿಯಿಂದ ಬಿಯರ್‌ ತುಂಬಿದ ಲಾರಿ ಕೇರಳ ರಾಜ್ಯಕ್ಕೆ ಹೊರಟಿದ್ದಾಗ ಸೋಮವಾರ ರಾತ್ರಿ 10.30 ರ ಸಮಯದಲ್ಲಿ ಪಟ್ಟಣಕ್ಕೆ ಇನ್ನೇನು 1 ಕಿ.ಮೀ ದೂರವಿದ್ದಾಗ ರಸ್ತೆ ಬದಿಗೆ ಉರುಳಿದೆ. ಹಾಸನ ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಾಕಷ್ಟುಮಳೆಯಾಗಿದ್ದರಿಂದ ರಸ್ತೆ ಬದಿಗೆ ಟೈಯರ್‌ ಇಳಿದು ಅಪಘಾತ ಸಂಭವಿಸಿದೆ.

ಕೊರೋನಾ ಕರಾಮತ್ತು: ಉಚಿತ ಬೀಯರ್ ಆಫರ್ , ಬಾರ್ ಖಾಲಿ ಖಾಲಿ ...

ಈ ಸಂದರ್ಭದಲ್ಲಿ ಲಾರಿಯಿಂದ ಬಿಯ​ರ್‍ಸ್ಬಾಕ್ಸ್‌ ಬಿದ್ದು ಹೋದಾಗ ಸ್ಥಳೀಯರು ಹಲವು ಬಿಯರ್‌ ಬಾಟಲ್‌ಗಳನ್ನು ಹೊತ್ತೊಯ್ದಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ ತಕ್ಷಣವೇ ಜನರು ಕಾಲ್ಕಿತ್ತರು.

ನಂತರ ಬೇರೆ ಲಾರಿಯನ್ನು ಕರೆಸಿ ಅಬಕಾರಿ ಅಧಿ​ಕಾರಿಗಳ ಸಮ್ಮುಖದಲ್ಲಿ ಬಿಯರ್‌ ಬಾಕ್ಸ್‌ಗಳನ್ನು ತುಂಬಿ ಕೇರಳಕ್ಕೆ ಕಳುಹಿಸಿಕೊಡಲಾಯಿತು.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ