'ನಾವು ಪಂಚರ್ ಹಾಕುವವರೇ.. ನಿಮ್ಮ ಗಾಡಿನೂ ಒಂದಿನ ಪಂಚರ್ ಆಗುತ್ತದೆ'

By Suvarna News  |  First Published May 6, 2021, 3:33 PM IST

ತೇಜಸ್ವಿ ಸೂರ್ಯರಿಂದ ಬೆಡ್ ಬ್ಲಾಕಿಂಗ್ ದಂಧೆ ಬಟಾಬಯಲು/ ಇದಾದ ನಂತರ ಒಂದೊಂದೆ ಬೆಳವಣಿಗೆ/ ತೇಜಸ್ವಿ ಸೂರ್ಯ ಮೇಲೆ ಜಮೀರ್ ಅಹಮದ್ ಆಕ್ರೋಶ/ ದಾಖಲೆಯಿಲ್ಲದೆ ಮಾತನಾಡಬೇಡಿ


ಬೆಂಗಳೂರು(ಮೇ. 06) 'ನಮ್ಮ ಗ್ರೇಟ್ ಎಂಪಿ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ, ಅವರಿಗೆ ಬರೀ ಮುಸ್ಲಿಂ ಮಾತ್ರ ಕಾಣೋದಾ....? ಎಷ್ಟು ವಿಷ ಇದೇರಿ ನಿಮ್ನಲ್ಲಿ.... 205 ಜನರನ್ನ ಕ್ರಿಸ್ಟಲ್ ಎಂಬ ಕಂಪನಿಯವರು ನೇಮಕಾತಿ ಮಾಡ್ತಾ ಇದಾರೆ. ಇದರಲ್ಲಿ 17 ಮಾತ್ರ ಮುಸಲ್ಮಾನರು. ಈ ಇದರಲ್ಲಿ ಸಯ್ಯದ್ ಎಂಬಾತ ಮಾತ್ರ ಬೆಡ್ ಅಲಾಟ್ ಮೆಂಟ್ ವಿಭಾಗದಲ್ಲಿ ಇದಾರೆ. ಕಳೆದ ವರ್ಷ ಕೊರೋನಾ ಸಾವಾದಾಗ ತೇಜಸ್ವಿ ಎಲ್ಲಿ ಹೋಗಿದ್ರು..' ಹೀಗೆ ಪ್ರಶ್ನೆ ಮಾಡಿದ್ದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್.

ಕಳೆದ ವರ್ಷ ನಮ್ಮ 500 ಮಂದಿಯ ತಂಡ ಶವ ಸಂಸ್ಕಾರ ಕೆಲಸ ನೆರವೇರಿಸಿತ್ತು. ನಾವು ಯಾವತ್ತು ಧರ್ಮ‌ ನೋಡಿಲ್ಲ. ಹಿಂದೂ ಶವ ಸಂಸ್ಕಾರ ಮಾಡಿದ್ದಿವಿ. ಮಹಾರಾಷ್ಟ್ರದಲ್ಲಿ ನಾವೇ ಮಾಡ್ತಾ ಇದ್ದೇವೆ. ಚಾಮರಾಜನಗರ ಪ್ರಕರಣ ಬೇರೆಡೆಗೆ ಗಮನ ಸೆಳೆಯಲು ಹೀಗೆ ಮಾತನಾಡಿದ್ದೀರಿ. ನಾವು ಈ ಅಶಿಕ್ಷಿತರು, ಪಂಚರ್ ಹಾಕುವವರೇ.. ನಿಮ್ಮ ಗಾಡಿನೂ ಒಂದಿನ ಪಂಚರ್ ಆಗುತ್ತದೆ. ಆಗ ನಾವು ಬೇಕು ನಿಮಗೆ ಎಂದು ತಿರುಗೇಟು ಕೊಟ್ಟಿದ್ದಾರೆ.

Latest Videos

undefined

ಹೊಸ ತಂತ್ರಜ್ಞಾನಕ್ಕೆ ನಂದನ್ ನಿಲೇಕಣಿ ನೆರವು

ಜೆಜೆ ನಗರದಲ್ಲಿ 30 ಬೆಡ್ ಆಸ್ಪತ್ರೆ ಮಾಡಿದ್ದಿವಿ. ಇದರಲ್ಲಿ 8 ವೆಂಟಿಲೇಟರ್ ಇದೆ. ನಾನು ವೈಯಕ್ತಿಕವಾಗಿ 80 ಬೆಡ್ ಆಕ್ಸಿಜನ್ ಅಸ್ಪತ್ರೆ ಮುಂದಿನ ವಾರ ಓಪನ್ ಮಾಡ್ತಿನಿ. ಅದು ಜೆಜೆ ಆರ್ ನಗರದಲ್ಲಿ ಮಾಡ್ತಿನಿ ಎಂದರು.

ಹುಷಾರ್....! ನಾನು ತೇಜಸ್ವಿಗೆ ಎಚ್ಚರಿಕೆ ಕೊಡ್ತಿನಿ. ನಾವು ಎಷ್ಟು ಅಂತಾ ಸಹಿಸಿಕೊಳ್ಳೋದು..? ಯಾವುದೇ ದಾಖಲೆ ಇಲ್ಲದೇ ಮಾತನಾಡಿದ್ರೆ ಹುಷಾರ್. ಕಳೆದ ವರ್ಷದಲ್ಲಿ ನೀವು ಎಲ್ಲಿದ್ರಿ. ಹೋಗಿ ಶವ ಎತ್ತಿ.. ಜಾತಿ ಮಾಡಬೇಡಿ. ಮಾಡೋಕೆ ಆಗೋದಿಲ್ಲ ಅಂದ್ರೆ ಬಿಟ್ಟು ಹೋಗಿ. ಜನ ನಿಮ್ಮನ್ನ ತಿರಸ್ಕಾರ ಮಾಡ್ತಾರೆ ಎನ್ನುತ್ತ ಸಿಟ್ಟಿನಲ್ಲಿ ಹೇಳಿದರು.

ಆಕ್ರೋಶ ಭರಿತರಾದ ಜಮೀರ್. ನಮ್ ದೇಶರೀ ಇದು.. ಯಾವುದ್ರಿ ಜಾತಿ-ಮತ ರಂಜಾನ್ ಸಂದರ್ಭದಲ್ಲಿ ಹೀಗ್ ಮಾಡ್ತಿರಲ್ರಿ ನಿಮಗೆ ಒಳ್ಳೆದಾಗುತ್ತಾ? ಎಂದು ಪ್ರಶ್ನೆ ಮಾಡಿದರು.

ಬೆಡ್ ಬ್ಲಾಕಿಂಗ್ ನಲ್ಲಿ ಸತೀಶ್ ರೆಡ್ಡಿ ಪಿಎ ಹರೀಶ್ ಅಂತಾ ಶಾಮೀಲಾಗಿದ್ದಾನೆ ನೋಡ್ರಿ... ಸೂರ್ಯಾ.. ನೋಡ್ರಿ.. ಏನ್ ಉತ್ತರ ಕೊಡ್ತಿರಾ ಹೇಳ್ರಿ. ಎಂದು ಏರು ಧ್ವನಿಯಲ್ಲಿ ಕೂಗಿದ ಜಮೀರ್ ತೇಜಸ್ವಿ ಸೂರ್ಯ ಒಂದು 10 ಬೆಡ್ ಕೊಡಿಸ್ತಿರಾ ಕೇಳಿ? ಅವರತ್ರ ಆಗುತ್ತಾ ಕೇಳಿ.17 ಮಂದಿಗೆ ಕೆಲಸ ತೆಗೆದರೆ ನಾನು ಕೆಲಸ ಕೊಡ್ತಿನಿ....ಅವರು ಹಿಂದೂ ಬಾಂಧವರ ಶವಸಂಸ್ಕಾರಕ್ಕೆ ನನ್ನ ಜೊತೆ ಬರಲಿ.... ಮುಸ್ಲಿಂರಿಗೆ ಅವರು ಸಹಾಯ ಮಾಡುವುದು ಬೇಡ 

ಹೋದ ಸಲ 10 ಸಾವಿರ ಬೆಡ್ ಹಾಕಿದರಲ್ಲ ಅದು ಎಲ್ಲಿ...?  ಅವರ ಇಂಟರ್ನಲ್ ಪ್ರಾಬ್ಲಂ ಏನೋ ಗೊತ್ತಿಲ್ಲ...ಸರ್ಕಾರ ಇವರದೆ ಅಲ್ವಾ ಅದೆ ವಿಫಲ ಅಂತ ಗೊತ್ತಾಯ್ತಲ್ಲ... ಸಿದ್ದರಾಮಯ್ಯ 5 ವರ್ಷ ಸಿಎಂ ಅಗಿದ್ದರು..ಅವರ ಹತ್ತಿರ ಟ್ಯೂಷನ್ ತಗೊಳ್ಳಿ ಸರ್ಕಾರ ಹೇಗೆ ನಡೆಸಬೇಕು ಅಂತ ಅವರ ಸಲಹೆ ತಗೊಳ್ಳಿ...ನಮ್ಮ ದುರಂತ ಈ ಟೈಮಲ್ಲಿ ಸಿದ್ದರಾಮಯ್ಯ ಇಲ್ಲ. ಅವರು ಸಿಎಂ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದರು.

click me!