ಆಯುಧ ಪೂಜೆಯಂದು ಯದುವೀರ ದತ್ತ ಒಡೆಯರ್​ ಪತ್ನಿ, ಪುತ್ರರ ಸುಂದರ ಝಲಕ್​ ವೈರಲ್​

Published : Oct 20, 2026, 05:06 PM IST
Yaduveer Dattas family

ಸಾರಾಂಶ

ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ಅವರು ಪರಂಪರೆಯಂತೆ ಆಯುಧ ಪೂಜೆ ನೆರವೇರಿಸಿದರು. ಈ ವೇಳೆ ತ್ರಿಷಿಕಾ ಕುಮಾರಿ ಅವರು ತಮ್ಮ ಇಬ್ಬರು ಪುತ್ರರೊಂದಿಗೆ ಪೂಜೆ ವೀಕ್ಷಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಜೊತೆಗೆ ಮೈಸೂರು ದಸರಾದ ಜಂಬೂಸವಾರಿ ಮತ್ತು ಸಾಂಸ್ಕೃತಿಕ ವೈಭವದ ಬಗ್ಗೆಯೂ ವಿವರಿಸಲಾಗಿದೆ.

ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪರಂಪರೆಯಂತೆ ವಿಜಯದಶಮಿ ಹಬ್ಬದ ಹಿಂದಿನ ದಿನ ಆಯುಧ ಪೂಜೆಯನ್ನು ನೆರವೇರಿಸುತ್ತಾರೆ. ಈ ಬಾರಿಯೂ ಅವರು ಇದೇ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ, ಅರಮನೆಯ ಕಲ್ಯಾಣ ಮಂಟಪದಲ್ಲಿ ಚಂಡಿಕಾ ಹೋಮದ ನಂತರ, ಸವಾರಿ ತೊಟ್ಟಿಯಲ್ಲಿ ರಾಜವಂಶಸ್ಥರ ಪಟ್ಟದ ಕತ್ತಿ, ಹಳೆಯ ಶಸ್ತ್ರಾಸ್ತ್ರಗಳು, ಫಿರಂಗಿ, ರಾಜಮನೆತನದ ವಾಹನಗಳು ಹಾಗೂ ಕಾರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಪರಂಪರೆಯಂತೆ ಪಟ್ಟದ ಆನೆ, ಕುದುರೆ, ಹಸು ಸೇರಿದಂತೆ ಅರಮನೆಯ ಸಾಕುಪ್ರಾಣಿಗಳಿಗೂ ಸಹ ಯದುವೀರ್ ಒಡೆಯರ್ ವಿಶೇಷ ಪೂಜೆ ನೆರವೇರಿಸುತ್ತಾರೆ.

ಮಕ್ಕಳ ಜೊತೆ ವೀಕ್ಷಣೆ

ಈ ಧಾರ್ಮಿಕ ಆಚರಣೆಯ ವೇಳೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯದುವೀರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಸೇರಿದಂತೆ ಕುಟುಂಬದವರು ಅರಮನೆಯಿಂದ ವೀಕ್ಷಿಸುತ್ತಾರೆ. ಇದೀಗ ತ್ರಿಷಿಕಾ ಕುಮಾರಿ ಅವರು ತಮ್ಮ ಇಬ್ಬರು ಪುತ್ರರೊಂದಿಗೆ ಆಯುಧ ಪೂಜೆಯನ್ನು ವೀಕ್ಷಿಸುತ್ತಿರುವ ದೃಶ್ಯ ವೈರಲ್​ ಆಗಿದೆ. ಅಂದಹಾಗೆ, ಮೈಸೂರಿನ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 6 ಡಿಸೆಂಬರ್ 2017ರಲ್ಲಿ ಮೊದಲ ಮಗ ಆದ್ಯಾವೀರ್ ನರಸಿಂಹರಾಜ ಒಡೆಯರ್ ಹುಟ್ಟಿದ್ದರೆ, 11 ಅಕ್ಟೋಬರ್ 2024ರಂದು ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಹುಟ್ಟಿರುವುದು.

ಹೇಗಿರುತ್ತೆ ಮೈಸೂರು ದಸರಾ

ಇನ್ನು ಮೈಸೂರು ದಸರಾ ಕುರಿತು ಹೇಳುವುದೇ ಬೇಡ. ಇಡೀ ಮೈಸೂರು ನಗರ ಮತ್ತು ಮೈಸೂರು ಅರಮನೆಯು ಲಕ್ಷಾಂತರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ.ವಿಜಯದಶಮಿಯ ದಿನದಂದು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಆನೆಗಳ ಮೆರವಣಿಗೆಯೊಂದಿಗೆ ಅರಮನೆಯಿಂದ ಬನ್ನಿಮಂಟಪದವರೆಗೆ ಕೊಂಡೊಯ್ಯಲಾಗುತ್ತದೆ. ಬನ್ನಿಮಂಟಪ ಮೈದಾನದಲ್ಲಿ ವಿಜಯದಶಮಿ ರಾತ್ರಿ ನಡೆಯುವ ಭವ್ಯವಾದ ಪಂಜಿನ ಕವಾಯತು ನಡೆಯುತ್ತದೆ.

ಮೈಸೂರು ಅರಮನೆ ಆವರಣ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ನಾಟಕ ಪ್ರದರ್ಶನಗಳು ನಡೆಯುತ್ತವೆ. ಭಾರತೀಯ ವಾಯುಪಡೆಯ 'ಸೂರ್ಯಕಿರಣ್' ಏರೋಬ್ಯಾಟಿಕ್ ತಂಡದಿಂದ ಆಕಾಶದಲ್ಲಿ ಸಾಹಸ ಪ್ರದರ್ಶನ ಕೂಡ ನಡೆದಿದೆ. ಅರಮನೆಯಲ್ಲಿ ಪರಂಪರೆಯಂತೆ ರಾಜವಂಶಸ್ಥರಿಂದ ವಿಶೇಷ ಪೂಜೆಗಳು ಮತ್ತು ದರ್ಬಾರ್ ನಡೆಯುವುದು ವಿಶೇಷವಾಗಿದೆ. ಇದನ್ನು ಕಣ್ತುಂಬಿಸಿಕೊಳ್ಳಲು ವಿದೇಶಗಳಿಂದಲೂ ಪ್ರವಾಸಿಗಳ ದಂಡ ಬರುವುದು ವಿಶೇಷ.

PREV
Read more Articles on
click me!

Recommended Stories

Namma Metro: ಮೇಟ್ರೋಗೆ 15ರ ಸಂಭ್ರಮ; ಲಾಂಗರೂಟ್ಸ್‌ , ಬ್ಯುಸಿ ಸ್ಟೇಷನ್ಸ್‌; ಶೀಘ್ರದಲ್ಲೇ ಏರ್‌ಪೋರ್ಟ್ ಲಿಂಕ್‌
ಮದುವೆಯಾದ 10 ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಮಾಕಳಿಯಲ್ಲಿ ಟವರ್ ಏರಿ ಹುಚ್ಚಾಟ ಮಾಡಿದ ಪಾವಗಡದ ಸಿಂಧು!