ರೈತನ ಮೇಲೆ ಕರಡಿ ದಾಳಿ ಮಾಡಿ ರೈತನನ್ನು ತೀವ್ರ ಗಾಯಗೊಳಿಸಿದ ಘಟನೆ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಾಪರೆಡ್ಡಿ(45) ಕರಡಿ ದಾಳಿಗೊಳಗಾದ ರೈತ.
ತುಮಕೂರು (ಜು.13): ರೈತನ ಮೇಲೆ ಕರಡಿ ದಾಳಿ ಮಾಡಿ ರೈತನನ್ನು ತೀವ್ರ ಗಾಯಗೊಳಿಸಿದ ಘಟನೆ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಾಪರೆಡ್ಡಿ(45) ಕರಡಿ ದಾಳಿಗೊಳಗಾದ ರೈತ. ತನ್ನ ಜಮೀನಿಗೆ ರೈತ ಪ್ರತಾಪರೆಡ್ಡಿ ತೆರಳುತ್ತಿದ್ದಾಗ ಕರಡಿಯು ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಪ್ರತಾಪರೆಡ್ಡಿ ತಲೆ ಮತ್ತು ಮುಖಕ್ಕೆ ತೀವ್ರ ಗಾಯವಾಗಿದ್ದು, ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳುವನ್ನ ಭೇಟಿ ಮಾಡಿದ್ದಾರೆ. ಇನ್ನು ಪಾವಗಡ ತಾಲೂಕಿನಲ್ಲಿ ಮನುಷ್ಯನ ಮೇಲೆ ಕರಡಿ ದಾಳಿ ನಡೆಯುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದೆ. ಸದ್ಯ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೂತಗೆರೆ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ: ಮದ್ದೂರು ತಾಲೂಕಿನ ಹೂತಗೆರೆ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಕಲ್ಲೇಗೌಡರ ಮನೆ ಬಳಿ ಕರಡಿ ಕಾಣಿಸಿಕೊಂಡಿದ್ದು, ಮನೆಯವರು ಕರಡಿಯನ್ನು ನೋಡಿಲ್ಲವಾದರೂ ಸಿಸಿ ಕ್ಯಾಮೆರಾದಲ್ಲಿ ಕರಡಿ ಅಡ್ಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಮನೆ ಆವರಣ ಗೋಡೆ ಹೊರ ಭಾಗದಲ್ಲಿ ಕರಡಿ ಹಾದು ಹೋಗಿದ್ದು, ಬಯಲು ಪ್ರದೇಶದಲ್ಲಿ ಕಣ್ಮರೆಯಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ನೋಡುತ್ತಿದ್ದಾಗ ಕರಡಿ ಪ್ರತ್ಯಕ್ಷವಾಗಿರುವುದು ಮನೆಯವರಿಗೆ ಗೊತ್ತಾಗಿದೆ.
ವಿದ್ಯುತ್ ದರ ಏರಿಕೆಗೆ ಕಾರಣ ಯಾರು?: ವಿಧಾನಸಭೆಯಲ್ಲಿ ವಾಗ್ವಾದ
ಕರಡಿ ಅಡ್ಡಾಡುತ್ತಿರುವ ಬಗ್ಗೆ ಗ್ರಾಮದ ಜನತೆಗೆ ವಿಚಾರ ಮುಟ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ವಿವಿದೆಡೆ ಚಿರತೆ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಹೊಲಗದ್ದೆಗಳಿಗೆ ಹೋಗುವ ರೈತರು ಆತಂಕ ಕೀಡಾಗಿದ್ದರು. ಇದೀಗ ಹೂತಗೆರೆಯಲ್ಲಿ ಕರಡಿ ಪ್ರತ್ಯಕ್ಷವಾಗಿರುವುದು ಜನರಲ್ಲಿ ಭೀತಿ ಮೂಡಿಸಿದೆ. ಕಾಡು ಪ್ರಾಣಿಗಳು ಗ್ರಾಮಗಳಲ್ಲಿ ಪ್ರತ್ಯಕ್ಷ ಗೊಳ್ಳುತ್ತಿರುವ ಬಗ್ಗೆ ಮುನ್ನೆಚ್ಚರಿಕೆ ಕರಡಿ ಮತ್ತು ಚಿರತೆ ಸೆರೆಗೆ ಮುಂದಾಗಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮದ ಜನತೆ ಒತ್ತಾಯಿಸಿದ್ದಾರೆ.
ಹಾಡಹಗಲೇ ಕರಡಿ ಪ್ರತ್ಯಕ್ಷ: ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದ ಕರಡಿಗಳು ಮಂಗಳವಾರ ಮಧ್ಯಾಹ್ನ ಪಟ್ಟಣದ ಕೋಟೆ ಬಡಾವಣೆಯಲ್ಲಿ ಕಾಣಿಸಿಕೊಂಡಿವೆ. ಸುಮಾರು 2ಗಂಟೆ ಸಮಯದಲ್ಲಿ ಕೋಟೆ ಬಡಾವಣೆಯ ರಾಮದೇವರ ದೇವಾಲಯದ ಬಳಿ 2 ಕರಡಿಗಳು ಪ್ರತ್ಯಕ್ಷವಾಗಿವೆ. ಕರಡಿಗಳನ್ನು ನೋಡಿದ ಸಾರ್ವಜನಿಕರು ಗಾಬರಿಗೊಂಡು ಚೀರಾಟ ಮಾಡಿದಾಗ ಬೆದರಿದ ಕರಡಿಗಳು ಮತ್ತೆ ಸಿದ್ದಪ್ಪನ ಬೆಟ್ಟಹತ್ತಿವೆ ಎಂದು ತಿಳಿದುಬಂದಿದೆ. ಕಳೆದ ಒಂದು ತಿಂಗಳಿಂದ ಪಟ್ಟಣದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಹಿಡಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ್ದಾರೆ.
ಟ್ಯೂಷನ್‌ಗೆ ಹೊರಟಿದ್ದ ಬಾಲಕಿ ಅಪಹರಣ ಯತ್ನ: ಆರೋಪಿ ಬಂಧನ
ಆದರೂ ಅರಣ್ಯ ಇಲಾಖೆ ಕರಡಿ ಹಿಡಿಯುವ ಪ್ರಯತ್ನದಲ್ಲಿಯೇ ದಿನ ತಳ್ಳುತ್ತಿದ್ದಾಳೆ. ಇದುವರೆಗೂ ಕರಡಿಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಕಳೆದ 10 ದಿನಗಳ ಹಿಂದೆ ಸಿದ್ದಪ್ಪನ ಬೆಟ್ಟಕ್ಕೆ ಅಧಿಕಾರಿಗಳು ಭೇಟಿ ನೀಡಿ, ಕರಡಿ ಸೆರೆಗೆ ಬಲೆ ಬೀಸಿದ್ದರು. ಆದರೆ ಅಂದಿನಿಂದ ಕಣ್ಮರೆಯಾಗಿದ್ದ ಕರಡಿಗಳು ಸೋಮವಾರ ಸಂಜೆ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದವು. ಅದೃಷ್ಠವಶಾತ್ ಈವರೆಗೂ ಕರಡಿಗಳು ಜನರಿಗೆ ಯಾವುದೇ ತೊಂದರೆ ಮಾಡಿಲ್ಲ. ಆದರೆ ಹಗಲು ವೇಳೆ ಪಟ್ಟಣದೊಳಕ್ಕೆ ಬರುತ್ತಿರುವುದರಿಂದ ಸಾರ್ವಜನಿಕರ ಚೀರಾಟಕ್ಕೆ ಬೆದರಿ ಕರಡಿಗಳು ಜನರೊಂದಿಗೆ ಸಂಘರ್ಷಕ್ಕೆ ಇಳಿದರೆ ಜನರ ಆಥವಾ ಪ್ರಾಣಿಗಳ ಜೀವ ಹಾನಿಯಾಗುವುದರಲ್ಲಿ ಅಂಶಯವಿಲ್ಲ. ಈಗಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕರಡಿಗಳ ರಕ್ಷಣೆಯ ಜೊತೆಗೆ ಜನರ ರಕ್ಷಣೆಯನ್ನು ಮಾಡುವಂತೆ ಪಟ್ಟಣದ ನಾಗರಿಕರು ಒತ್ತಾಯ ಮಾಡುತ್ತಿದ್ದಾರೆ.