ಲಾಲ್‌ಬಾಗ್‌ ಅಕ್ವೇರಿಯಂ ಕಟ್ಟಡ ದುರಸ್ತಿಗೆ ಹಣ ಬಿಡುಗಡೆ: ಸಚಿವ ಮಲ್ಲಿಕಾರ್ಜುನ

By Kannadaprabha NewsFirst Published Jul 13, 2023, 8:18 AM IST
Highlights

ಲಾಲ್‌ಬಾಗ್‌ನಲ್ಲಿ ಅಳಿವಿನಂಚಿನಲ್ಲಿರುವ ಪಾರಂಪರಿಕ ಅಕ್ವೇರಿಯಂ ಕಟ್ಟಡವನ್ನು ದುರಸ್ತಿಪಡಿಸಲು ಹಣ ನೀಡುವುದಾಗಿ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಭರವಸೆ ನೀಡಿದರು.

ಬೆಂಗಳೂರು (ಜು.13): ಲಾಲ್‌ಬಾಗ್‌ನಲ್ಲಿ ಅಳಿವಿನಂಚಿನಲ್ಲಿರುವ ಪಾರಂಪರಿಕ ಅಕ್ವೇರಿಯಂ ಕಟ್ಟಡವನ್ನು ದುರಸ್ತಿಪಡಿಸಲು ಹಣ ನೀಡುವುದಾಗಿ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಭರವಸೆ ನೀಡಿದರು. ಲಾಲ್‌ಬಾಗ್‌ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಬುಧವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಲಾಖೆಗೆ ಹೊಸದಾಗಿ ಆಯ್ಕೆಗೊಂಡ 117 ಮಂದಿ ತೋಟಗಾರರಿಗೆ (ಸಾಂಕೇತಿಕವಾಗಿ 10 ಮಂದಿಗೆ ವಿತರಣೆ) ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು. ಬಳಿಕ ಲಾಲ್‌ಬಾಗ್‌ ವೀಕ್ಷಣೆ ವೇಳೆ ಅಕ್ವೇರಿಯಂ ಕಟ್ಟಡವನ್ನು ಕಂಡು ಅದರ ಬಗ್ಗೆ ಮಾಹಿತಿ ಪಡೆದರು. 

ಇದೇ ವೇಳೆ ಅಳಿವಿನಂಚಿನಲ್ಲಿರುವ ಪುರಾತತ್ವ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳಲು ಅಗತ್ಯ ಆರ್ಥಿಕ ನೆರವು ನೀಡಲಾಗುವುದು. ಇದಕ್ಕೆ ಬೇಕಾದ ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಉದ್ಯಾನದಲ್ಲಿದ್ದ ಅಪರೂಪದ ಹುಣಸೆ ಮರ ಹಾಗೂ ವಿದೇಶಿ ತಳಿಯ ಸಸಿಗಳನ್ನು ಪರಿಶೀಲಿಸಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು. ಲಾಲ್‌ಬಾಗ್‌ನಲ್ಲಿ ಸಚಿವರ ವೀಕ್ಷಣೆ ವೇಳೆ ನಾಗರಹಾವು ಕಂಡು ಎಲ್ಲರೂ ಬೆಚ್ಚಿಬಿದ್ದ ಸಂಗತಿಯೂ ನಡೆಯಿತು.

Latest Videos

Flower Show 2023: ಆ.4ರಿಂದ 15ರವರೆಗೆ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ

ಕಾರ್ಯಕ್ರಮದಲ್ಲಿ ರಾಜ್ಯ ತೋಟಗಾರಿಕೆ ನಿರ್ದೇಶಕ ಡಿ.ಎಸ್‌.ರಮೇಶ್‌, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌, ಉಪ ನಿರ್ದೇಶಕಿ ಜಿ.ಕುಸುಮಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ಹಿಂದೆ 1988ರಲ್ಲಿ ತೋಟಗಾರರ ನೇಮಕಾತಿ ನಡೆದಿತ್ತು. ಅದಾದ ಬಳಿಕ 1998 ರಲ್ಲಿ ಕೆಲವರ ನೇಮಕ ನಡೆದಿದ್ದು ಬಿಟ್ಟರೆ, ಇದೇ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ 200 ಮಂದಿ ತೋಟಗಾರರ ನೇಮಕ ಮಾಡಲಾಗಿದೆ. ಈ ಪೈಕಿ 117 ಮಂದಿಗೆ ಮೊದಲ ಹಂತದಲ್ಲಿ ನೇಮಕಾತಿ ಪತ್ರವನ್ನು ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕೈ ಬೀಸಿ ಕರೆವ ಪರಿಸರ ಸೊಬಗು: ಸುಮಾರು 240 ಎಕರೆ ಪ್ರದೇಶ ಹೊಂದಿರುವ ಲಾಲಾಬಾಗ್‌ ಸಸ್ಯತೋಟಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಲಾಲ್‌ಬಾಗ್‌ನಲ್ಲಿ ಸುಮಾರು 3 ಸಾವಿರ ವರ್ಷ ಹಳೆಯದಾದ ಬಂಡೆಯಿದೆ. ಅಫಘಾನಿಸ್ತಾನ, ಪರ್ಷಿಯಾ, ಫ್ರಾನ್ಸ್‌ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ತಂದಿರುವ ಅಪರೂಪದ ಹೂವು ಗಿಡಗಳು, ಒಂದು ಸಾವಿರಕ್ಕೂ ಹೆಚ್ಚು ಫೆä್ಲೕರಾ ಜಾತಿಯ ಗಿಡಗಳು, 100ರಿಂದ 150 ವರ್ಷಗಳಷ್ಟು ಹಳೆಯದಾದ ಮರಗಳು ಇಲ್ಲಿವೆ.

ಸೋಪು, ಎಣ್ಣೆ, ಉಪ್ಪು ಕೊಂಡರಷ್ಟೇ ಪಡಿತರ: ಶಾಸಕ ಮುನಿರಾಜು ಕಿಡಿ

ಎಲ್ಲರನ್ನೂ ಸೆಳೆಯುವ ಗಾಜಿನಮನೆ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪ್ರತಿಮೆ, ಸಾವಿರಾರು ವರ್ಷಗಳಷ್ಟುಹಳೆಯ ಬಂಡೆಯ ಮೇಲಿರುವ ಗಡಿಗೋಪುರ, ಲಾಲ್‌ಬಾಗ್‌ ಕೆರೆ, ನಯಾಗಾರ ಫಾಲ್ಸ್‌ ಮಾದರಿಯ ಕೃತಕ ಜಲಪಾತ, ವಾಹನ ಮುಕ್ತ ಪರಿಸರ, ಹಸಿರು ಹುಲ್ಲುಗಾವಲು, ಗಮನ ಸೆಳೆಯುವ ರೋಸ್‌ ಗಾರ್ಡನ್‌, ಬೋನ್ಸಾಯಿ ಪಾರ್ಕ್, ಮಳೆಗೆ ಧರೆಗುರುಳಿದ ಉದ್ಯಾನದ ಮರಗಳಲ್ಲಿ ಅರಳಿರುವ ಕಲಾಕೃತಿಗಳು. ಹೀಗೆ ಒಂದಕ್ಕೊಂದು ಸಾಟಿಯೇ ಇಲ್ಲದಂತೆ ಪರಿಸರದ ಸೊಬಗು ಪ್ರವಾಸಿಗರನ್ನು ಮತ್ತೆ ಮತ್ತೆ ಲಾಲ್‌ಬಾಗ್‌ಗೆ ಬರುವಂತೆ ಮಾಡುತ್ತವೆ.

click me!