' ಪರಿಸರ ಸಮತೋಲನ ಕಾಯ್ದುಕೊಳ್ಳಲು ಮುಕ್ತವಾಗಿರಿ'

By Kannadaprabha News  |  First Published Oct 9, 2023, 7:27 AM IST

ಅರಣ್ಯ ಇಲಾಖೆಯಲ್ಲಿನ ಆಗುಹೋಗುಗಳು, ಸಮಸ್ಯೆಗಳು ಮತ್ತು ಸಂಶೋಧನೆಗಳ ಕುರಿತು ಮಾಧ್ಯಮಕ್ಕೆ ಮತ್ತು ಸಾರ್ವಜನಿಕರಿಗೆ ತಿಳಿಸುವ ಕಾರ್ಯದಲ್ಲಿ ಇಲಾಖೆ ಎಡುವುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕನ್ನಡ ಅಧ್ಯಯನ ವಿಭಾಗದ ಡಾ. ಕವಿತಾ ರೈ ಅಭಿಪ್ರಾಯಪಟ್ಟರು.


  ಹುಣಸೂರು :  ಅರಣ್ಯ ಇಲಾಖೆಯಲ್ಲಿನ ಆಗುಹೋಗುಗಳು, ಸಮಸ್ಯೆಗಳು ಮತ್ತು ಸಂಶೋಧನೆಗಳ ಕುರಿತು ಮಾಧ್ಯಮಕ್ಕೆ ಮತ್ತು ಸಾರ್ವಜನಿಕರಿಗೆ ತಿಳಿಸುವ ಕಾರ್ಯದಲ್ಲಿ ಇಲಾಖೆ ಎಡುವುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕನ್ನಡ ಅಧ್ಯಯನ ವಿಭಾಗದ ಡಾ. ಕವಿತಾ ರೈ ಅಭಿಪ್ರಾಯಪಟ್ಟರು.

69ನೇ ವನ್ಯಜೀವಿ ಸಪ್ತಾಹ ಅಂಗವಾಗಿ ನಾಗರಹೊಳೆ ಉದ್ಯಾನವನದ ನಾಗರಹೊಳೆ ವಲಯ ಕೇಂದ್ರ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣದಲ್ಲಿ ದ ಪಾತ್ರ ಕುರಿತಾಗಿ ಪತ್ರಕರ್ತರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

Latest Videos

undefined

ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ಮಾಧ್ಯಮ ಪ್ರಮುಖ ಕಾರಣ. ಘಟನೆಯೊಂದಕ್ಕೆ ವಿವಿಧ ಆಯಾಮಗಳನ್ನು ಕಟ್ಟಿಕೊಟ್ಟು ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವಂತೆ ಮಾಡುವ ಮಾಧ್ಯಮ ವರದಿಗಳು ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿವೆ. ನಿಸರ್ಗವನ್ನು ಮಾನವ ಅತಿಯಾದ ಭೂ ಆಕ್ರಮಣದೊಂದಿಗೆ ವ್ಯಾಪಿಸುತ್ತಿದ್ದಾನೆ. ಇದನ್ನು ಸಮತೋಲನಗೊಳಿಸುವ ಅತ್ಯಂತ ಜರೂರು ಇಂದಿಗಿದೆ ಎಂದರು.

ಇಲಾಖೆ ಮತ್ತು ನಾಗರಿಕರ ಸಹಯೋಗದಿಂದ ಮಾತ್ರ ಇದು ಸಾಧ್ಯ. ಕಾಡಿನಿಂದ ಹೊರದಬ್ಬಿಸಿಕೊಂಡಿರುವ ಆದಿವಾಸಿಗಳಿಗೆ ಇಲಾಖೆ ಎಲ್ಲಾ ಸೌಲಭ್ಯಗಳನ್ನು ನೀಡಬಹುದು. ಆದರೆ ಆದಿವಾಸಿಗಳು ಬದುಕಿನ ಸಂಸ್ಕೃತಿಯನ್ನು ನೀಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ತನ್ನ ಇಲಾಖೆಯ ಕುರಿತಾಗಿನ ಮಾಹಿತಿಯ ಶಿಕ್ಷಣ, ಇಲಾಖೆಯಲ್ಲಿನ ನೂತನ ಸಂಶೋಧನೆಗಳು ಮತ್ತು ಪ್ರಮುಖ ಚಟುವಟಿಕೆಯಾಗಿರುವ ಪ್ರವಾಸೋದ್ಯಮದ ಕುರಿತು ಮುಕ್ತವಾಗಿ ಮಾಹಿತಿ ನೀಡಿದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದರು.

ಕರ್ನಾಟಕ ಮುಕ್ತ ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊ. ತೇಜಸ್ವಿ ನವಿಲೂರು, ಮಾಧ್ಯಮದ ಇಂದಿನ ಸ್ಥಿತಿಗತಿ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಮೈಸೂರು ಜಿಲ್ಲಾ ಪತ್ರರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಮಣ್ಯ, ಜಿಲ್ಲಾ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ. ದೀಪಕ್, ನಿಟ್ಟೂರು ಗ್ರಾಪಂ ಸದಸ್ಯ ಶೆರಿನ್‌ ಮುತ್ತಣ್ಣ, ಶಕ್ತಿ ನ್ಯೂಸ್ ಸಂಯೋಜಕ ಎಚ್.ಕೆ. ಜಗದೀಶ್‌ ಮಾತನಾಡಿದರು. ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ನಿರ್ದೇಶಕ ದಾ.ರಾ. ಮಹೇಶ್, ಎಚ್.ಡಿ. ಕೋಟೆ- ಸರಗೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ, ಹುಣಸೂರು ತಾಲೂಕು ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ಹುಲ್ಲಹಳ್ಳಿ ಮೋಹನ್, ಸಾಲಿಗ್ರಾಮ ಯಶ್ವಂತ್, ದಾಸೇಗೌಡ ಸೇರಿದಂತೆ ಪತ್ರಕರ್ತರು ಮತ್ತು ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

click me!