ಕಾಡಾನೆ ದಾಳಿ: ನಾಲ್ಕು ಎಕರೆಯಲ್ಲಿನ ಅಡಿಕೆ,ಬಾಳೆ ಬೆಳೆ ಸಂಪೂರ್ಣ ನಾಶ

By Kannadaprabha News  |  First Published Jan 1, 2023, 8:07 AM IST

ಶುಕ್ರವಾರ ತಡರಾತ್ರಿ ನಂದಿಬಟ್ಟಲು ಗ್ರಾಮ(Nandibattalu village)ದ ಅಸುಪಾಸಿನ ರೈತರ ಜಮೀನುಗಳಿಗೆ ದಾಳಿ ಮಾಡಿರುವ ಕಾಡಾನೆಗಳ(wild elephants) ಹಿಂಡು ನಾಲ್ಕು ಎಕರೆ ವಿಸ್ತೀರ್ಣದಲ್ಲಿದ್ದ ಅಡಿಕೆ,ಬಾಳೆ ಮುಂತಾದ ಬೆಳೆಗಳನ್ನು ಧ್ವಂಸಗೊಳಿಸಿದೆ. ರೈತರು ಸಾಲ ಮಾಡಿಕೊಂಡು ಬೆಳೆದ ಬೆಳೆ ನಾಶವಾಗಿರುವುದರಿಂದ ಕಂಗಾಲಾಗಿದ್ದಾರೆ.


ತರೀಕೆರೆ (ಜ.1) : ಕಳೆದ ಅನೇಕ ದಿನಗಳಿಂದ ಸತತವಾಗಿ ದಾಳಿ ಮಾಡುತ್ತಿರುವ ಕಾಡಾನೆಗಳ ಹಿಂಡು ಶುಕ್ರವಾರ ತಡರಾತ್ರಿ ಸಮೀಪದ ನಂದಿಬಟ್ಟಲು ಗ್ರಾಮದವರಾದ ಲಾಲ್ಯ ನಾಯಕ ರವರಿಗೆ ಸೇರಿದ ಸರ್ವೇ ನಂ 110 ರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ,ಬಾಳೆ ಬೆಳೆಗಳನ್ನು ತಿಂದು ತುಳಿದು ಸಂಪೂರ್ಣವಾಗಿ ನೆಲಕ್ಕುರುಳಿಸಿದ್ದು ಸಂತ್ರಸ್ತ ರೈತರ ಕುಟುಂಬದವರು ಬೆಳೆ ನಾಶ ಕಂಡು ಕಣ್ಣೀರು ಸುರಿಸುತ್ತಿದ್ದ ಘಟನೆ ನಡೆದಿದೆ.

ಶುಕ್ರವಾರ ತಡರಾತ್ರಿ ನಂದಿಬಟ್ಟಲು ಗ್ರಾಮ(Nandibattalu village)ದ ಅಸುಪಾಸಿನ ರೈತರ ಜಮೀನುಗಳಿಗೆ ದಾಳಿ ಮಾಡಿರುವ ಕಾಡಾನೆಗಳ(wild elephants) ಹಿಂಡು ನಾಲ್ಕು ಎಕರೆ ವಿಸ್ತೀರ್ಣದಲ್ಲಿದ್ದ ಅಡಿಕೆ,ಬಾಳೆ ಮುಂತಾದ ಬೆಳೆಗಳನ್ನು ಧ್ವಂಸಗೊಳಿಸಿರುವುದರಿಂದ ಇರುವ 4 ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯುವ ಸಲುವಾಗಿ ವಿವಿಧ ಬ್ಯಾಂಕುಗಳಿಂದ ಸಾಲ ಮಾಡಿ, ಕೊಳವೆ ಬಾವಿ ಕೊರೆಸಿ ಬೆಳೆ ಬೆಳೆದಿರುವ ಬಡ ರೈತ ಲಾಲ್ಯ ನಾಯ್ಕ ರವರಿಗೆ ಸಾಕಷ್ಟುನಷ್ಟವಾಗಿದ್ದು ದಿಕ್ಕು ತೋಚದೆ ತೋಟದಲ್ಲೇ ಕಣ್ಣೀರು ಹಾಕಿದ್ದಾರೆ.

Latest Videos

undefined

ಹಾಸನ: ಕಾಡಾನೆಗಳಿಗೆ ಖೆಡ್ಡಾ ತೋಡಿ ಸರ್ಕಾರಕ್ಕೆ ಸವಾಲ್‌ ಎಸೆದ ಗ್ರಾಮಸ್ಥರು..!

ತೋಟ ನಾಶದ ಬಗ್ಗೆ ತಣಿಗೆಬೈಲು ಭದ್ರಾ ವನ್ಯಜೀವಿ ವಲಯಾರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಬಡರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ನಂದಿಬಟ್ಟಲು ಗ್ರಾಪಂ ಸದಸ್ಯ ಎನ್‌.ಜೆ. ಭದ್ರೇಗೌಡ ಒತ್ತಾಯಪಡಿಸಿದ್ದಾರೆ.

ಕಾಡಾನೆಗಳಿಂದ ಬೆಳೆ ರಕ್ಷಣೆ ಮಾಡಲು ಜಮೀನುಗಳಿಗೆ ತೆರಳಲು ಈ ಭಾಗದ ಗ್ರಾಮಸ್ಥರು ಹೆದರುವಂತಾಗಿದ್ದು ರಾತ್ರಿ ವೇಳೆ ಮನೆಗಳಿಂದ ಹೊರಬರಲು ಸಾಧ್ಯವಾಗದೇ ಜೀವ ಭಯ ದಲ್ಲೆ ಕಾಲ ಕಳೆಯುವಂತಾಗಿದೆ. ಸಂಬಂಧಪಟ್ಟಇಲಾಖಾ ಅಧಿಕಾರಿಗಳು ಇತ್ತ ಗಮನಹರಿಸಿ ಈ ಭಾಗದ ಗ್ರಾಮಸ್ಥರÜ ಭದ್ರತೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನಂದಿಬಟ್ಟಲು ಗ್ರಾಮ ಪಂಚಾಯಿತಿ ಸದಸ್ಯರಾದ ಎನ್‌.ಎ.ಕೃಷ್ಣ ನಾಯ್ಕ ತಿಳಿಸಿದ್ದಾರೆ. Chikkamagaluru: ಮತ್ತೆ ಮೂವರ ಮೇಲೆ ಒಂಟಿ ಕೊಂಬಿನ ಆನೆ ದಾಳಿ: ಗಂಭೀರ ಗಾಯ

click me!