ಬೆಂಗಳೂರು: ಕೆಂಪೇಗೌಡ ಬಡಾವಣೆಗೆ ಬಿಡಿಎ ಅನ್ಯಾಯ..!

By Kannadaprabha NewsFirst Published Nov 18, 2022, 2:00 AM IST
Highlights

ಕಾರಂತ ಲೇಔಟ್‌ಗೆ ನೀಡುವ ಮಹತ್ವ ಕೆಂಪೇಗೌಡ ಲೇಔಟ್‌ಗೆ ನೀಡದ ಬಿಡಿಎ, ನಿವೇಶನದಾರರ ಆರೋಪ

ಬೆಂಗಳೂರು(ನ.18): ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೂ ಮೊದಲೇ ಮೂಲಸೌಲಭ್ಯ ಕಲ್ಪಿಸುವ ಮೂಲಕ ಕಳೆದ ಎಂಟು ವರ್ಷಗಳ ಹಿಂದೆ ಆರಂಭವಾದ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ನ್ಯಾಯ ಒದಗಿಸದೇ ಅನ್ಯಾಯ ಮಾಡಲಾಗಿದೆ ಎಂದು ಬಡಾವಣೆಯ ನಿವೇಶನ ಹಂಚಿಕೆದಾರರು ಬಿಡಿಎ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್‌) ನಿರ್ಮಿಸಿ ಎಂಟು ವರ್ಷಗಳಾಗಿವೆ. ನಿವೇಶನಗಳನ್ನು ಹಂಚಿಕೆ ಮಾಡಿ ಆರು ವರ್ಷಗಳು ಕಳೆದಿವೆ. ಆದರೂ ಈವರೆಗೂ ಬಡಾವಣೆಗೆ ಅಗತ್ಯವಿರುವಷ್ಟುಭೂಸ್ವಾಧೀನ ಮಾಡಿಕೊಂಡಿಲ್ಲ. ಹೀಗಾಗಿ ಬೈಪಾಸ್‌ ರಸ್ತೆಗಳು, ಮೂಲಸೌಲಭ್ಯಗಳನ್ನು ಬಿಡಿಎ ಕಲ್ಪಿಸಿಲ್ಲ. ಆದರೆ, ಡಾ. ಶಿವರಾಮ ಕಾರಂತ ಬಡಾವಣೆಯ ನಿರ್ಮಾಣಕ್ಕೆ ಮೊದಲೇ ರಿವೈಸ್ಡ್‌ ಮಾಸ್ಟರ್‌ ಪ್ಲಾನ್‌-2015 (ಆರ್‌ಎಂಪಿ) ಮಾಡಿದ್ದು ಬೈಪಾಸ್‌ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

Bengaluru: ಕೆಂಪೇಗೌಡ ಲೇಔಟ್‌ ಸೈಟ್‌ ಉಳಿಸಿಕೊಳ್ಳಲು ಮತ್ತೆ ಚಾನ್ಸ್?

ಹೀಗೆ ಎಂಟತ್ತು ವರ್ಷ ಮೊದಲೇ ಆರಂಭಗೊಂಡಿದ್ದ ಎನ್‌ಪಿಕೆಎಲ್‌ ಬಡಾವಣೆಗೆ ಅನ್ಯಾಯ ಮಾಡುವ ಮೂಲಕ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಾಕುವಂತ ನೀತಿ ಅನುಸರಿಸುತ್ತಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬೈಪಾಸ್‌ ರಸ್ತೆಗಳು, ಮೂಲ ಸೌಲಭ್ಯಗಳನ್ನು ಕಲ್ಪಿಸಲು ಬಿಡಿಎಗೆ ಸಾಧ್ಯವಾಗಿಲ್ಲ. ಕಾಮಗಾರಿಗಳನ್ನು ಪೂರ್ಣಗೊಳಿಸಲು ಇನ್ನೂ ಕೆಲವು ತಿಂಗಳುಗಳೇ ಬೇಕಾಗಿದೆ. ಆದರೆ, ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಮೊದಲೇ ಬೈಪಾಸ್‌ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂತಿಮ ವರದಿ ಸಲ್ಲಿಕೆ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಒದಗಿಸುವ ಕಾಮಗಾರಿ ಪ್ರಗತಿ ಪರಿಶೀಲನೆಗೆ ನೇಮಿಸಿದ್ದ (ಥರ್ಡ್‌ ಪಾರ್ಟಿ ಏಜೆನ್ಸಿ) ಸಂಸ್ಥೆಯು ಅಂತಿಮ ವರದಿ ಸಲ್ಲಿಸಿ ಹದಿನೈದು ದಿನಗಳು ಕಳೆದಿದೆ. ಕೂಡಲೇ ಕ್ರಮಕೈಗೊಂಡು ಮೂಲಸೌಕರ್ಯ ಕಾಮಗಾರಿಗೆ ಅಗತ್ಯವಿರುವ .650 ಕೋಟಿ ಹೆಚ್ಚುವರಿ ಹಣ ಬಿಡುಗಡೆಗೆ ಬಿಡಿಎ ಮುಂದಾಗಬೇಕು ಎಂದು ವೇದಿಕೆ ಒತ್ತಾಯಿಸಿದೆ.
 

click me!